ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ ಮಾಡುತ್ತಿದ್ದ ವ್ಯಕ್ತಿ ಬಂಧನ
ಸಂತೆಮರಹಳ್ಳಿ: ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯಗೆ ಒಳಪಡುವ ಚುಂಗಡಿಪುರ ಹಾಗೂ ಕೆಂಪನಪುರ ಗ್ರಾಮಗಳಿಂದ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದ ಖದೀಮರ ಬಂಧನ.
ಸಂತೆಮರಹಳ್ಳಿ ಪೊಲೀಸ್ ಠಾಣೆಯ ಪಿ ಎಸ್ ಐ ತಾಜುದ್ದೀನ್ ನೇತೃತ್ವ ತಂಡ ಖಚಿತ ಮಾಹಿತಿ ಮೇರೆಗೆ ಚುಂಗಡಿಪುರ ಹಾಗೂ ಕೆಂಪನಪುರ ಗ್ರಾಮದ ಕಬಿನಿ ಚಾನೆಲ್ ಬಳಿ ಸಾಗಿಸುತ್ತಿದ್ದ ವೇಳೆಯಲ್ಲಿ ದಾಳಿ ನಡೆಸಿ ಸಂದರ್ಭದಲ್ಲಿ 20 ವರ್ಷದ ಉಮೇರ್ ಎಂಬಾತ ಅಕ್ರಮವಾಗಿ 500 ಕೆಜಿ ಪಡಿತರ ಅಕ್ಕಿ ಸಾಗಾಣಿಕೆ ಮಾಡುವ ಸಂದರ್ಭದಲ್ಲಿ ಬಂಧನ ಮಾಡಲಾಯಿತು.
ಈ ವೇಳೆಯಲ್ಲಿ ಆಹಾರ ನೀರಿಕ್ಷಕರಾದ ಚಿಕ್ಕಣ್ಣ, ಎ ಎಸ್ ಐ ಉಮೇಶ್ ಪೇದೆಗಳಾದ ಮಂಜುನಾಥ್, ಮಾದೇಶ್ ಹೇಮಂತ್ ಕುಮಾರ್, ರಮೇಶ್, ಇದ್ದರು. ಈ ವೇಳೆಯಲ್ಲಿ ಆಟೋ ಹಾಗೂ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
