ಐಪಿಎಲ್ ಬೆಟ್ಟಿಂಗ್ ದಂದೆಗೆ ಕಡಿವಾಣ ಹಾಕಲು ವಿಶೇಷ ತಂಡ ರಚಿಸಿ: ನಾರಾಯಣ್ ಗೌಡ ಮನವಿ 

Apr 9, 2026 - 17:58
 0  4
ಐಪಿಎಲ್ ಬೆಟ್ಟಿಂಗ್ ದಂದೆಗೆ ಕಡಿವಾಣ ಹಾಕಲು ವಿಶೇಷ ತಂಡ ರಚಿಸಿ: ನಾರಾಯಣ್ ಗೌಡ ಮನವಿ 
ವರದಿ: ಮಂಜುನಾಥ್.ಪಿ.ವಿ. ಬೇತಮಂಗಲ ಹೋಬಳಿ

ಕೆಜಿಎಫ್ : - ಲಕ್ಷಾಂತರ ರೈತ ಕೂಲಿ ಕಾರ್ಮಿಕರ ಹಾಗೂ ಯುವಕರಲ್ಲಿ ಬೀದಿ ಪಾಲು ಮಾಡುತ್ತಿರುವ ಐ.ಪಿ.ಎಲ್. ಬೆಟ್ಟಿಂಗ್ ದಂದೆಗೆ ಕಡಿವಾಣ ಹಾಕಲು ವಿಶೇಷ ಪೊಲೀಸ್ ತಂಡ ರಚನೆ ಮಾಡಿ ದಂದೆಕೋರರ ವಿರುದ್ದ ಗೂಂಡಾ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸುವಂತೆ ರೈತ ಸಂಘದಿಂದ  ಉಪ ಅಧೀಕ್ಷಕರಾದ ಲಕ್ಷಣ ಸಾಹೇಬರಿಗೆ  ಮನವಿ  ನೀಡಿ ಒತ್ತಾಯಿಸಿದರು.

ಮನವಿ  ನೀಡಿಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ  ಕ್ರೀಡೆ ಎಂಬುದು ಇಂದು ಜೂಜಾಟವಾಗಿ ಮಾರ್ಪಟ್ಟು ದುಡಿಮೆ ಇಲ್ಲದೆ, ಅತಿ ಬೇಗ ಶ್ರೀಮಂತರಾಗುವ ಅಡ್ಡದಾರಿಯಾಗಿ ಕ್ರಿಕೆಟ್ ಐ.ಪಿ.ಎಲ್. ಕ್ರೀಡೆ ಮಾರ್ಪಟ್ಟಿರುವುದು ದುರಾದೃಷ್ಟಕರ ಎಂದು ಸಭೆಯಲ್ಲಿ ವಿಷಾದ ವ್ಯಕ್ತಪಡಿದಿರು. 

ಬರ ಹಾಗೂ ಬೆಳೆ ನಷ್ಟದಿಂದ ರೈತರು ತತ್ತರಿಸಿ ಕೂಲಿ ಕಾರ್ಮಿಕರಿಗೆ ದುಡಿಯಲು ಕೆಲಸ ವಿಲ್ಲದೆ, ಯುವಕರು ವಿದ್ಯಾಭ್ಯಾಸ ಮಾಡಿ, ಉದ್ಯೋಗ ವಿಲ್ಲದೆ, ಪರಿತಪ್ಪಿಸುತ್ತಿರುವ ಪರಿಸ್ಥಿತಿಯಲ್ಲಿ ಕ್ರಿಕೇಟ್ ಬೆಟ್ಟಿಂಗ್ ಎಂಬ ಭೂತಕ್ಕೆ ದಾಸರಾಗಿ ರೈತರು ತೋಟಗಳನ್ನೇ ಅಡ ಇಟ್ಟರೆ, ಕೂಲಿ ಕಾರ್ಮಿಕರು, ಜಾನುವಾರುಗಳನ್ನು ಯುವ ಪೀಳಿಗೆ ತಮ್ಮ ಭವಿಷ್ಯವನ್ನೇ ಕ್ರಿಕೆಟ್ ಬೆಟ್ಟಿಗ್‌ಗೆ ದಾಸರಾಗಿ ಆಟವಾಡಿ ಗೆಲ್ಲಲಾಗದೆ ಸಲ ತೀರಸಲಾಗದೆ. ಸಮಾಜದಲ್ಲಿ ಬದುಕಲು ಮುಖವಿಲ್ಲದೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು, ಕ್ರಿಕೆಟ್ ಬೆಟ್ಟಿಂಗ್ ಎಂಬ ದಂದೆಗೆ ಕಡಿವಾಣ ಹಾಕಬೇಕಾದ ಸರ್ಕಾರವೆ ದಂದೆ ಕೋರರಿಗೆ ಅನುಮತಿ ನೀಡಿರುವುದು ದುರದೃಷ್ಟಕರ ಎಂದು ಅವ್ಯವಸ್ಥೆ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.

ತಾಲ್ಲೂಕಾದ್ಯಕ್ಷ ರಾಮಸಾಗರ  ವೇಣು ಮಾತನಾಡಿ ಜಿಲ್ಲೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಕಿಂಗ್‌ಪಿನ್ ಯಾರು? ಯಾರ ಕೈ ಕೆಳಗೆ ದಂದೆ ನಡೆಯತ್ತಿದೆ?. ಪ್ರತಿ ಐ.ಪಿ.ಎಲ್. ನಲ್ಲೂ ಕೋಟಿ ಕೋಟಿ ಬೆಟ್ಟಿಂಗ್ ನಡೆಯುತ್ತಿದ್ದು, ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಸಮಸ್ಯೆಯನ್ನು ಗಂಬೀರವಾಗಿ ಏಕೆ. ಸರ್ಕಾರ ಹಾಗೂ ಗೃಹ ಮಂತ್ರಿಗಳು ಪರಿಗಣಿಸುತ್ತಿಲ್ಲ. ಗಲ್ಲಿಗೆಂದು ನಕಲಿ ಆಪ್‌ಗಳ ಮುಖಾಂತರ ಅಕ್ರಮಗಳನ್ನು ಸಕ್ರಮ ಮಾಡಲು ಎಷ್ಟು ಸಾವಿರ ಕೋಟಿ ಸರ್ಕಾರಿ ದೇಣಿಗೆ ಪಡೆದು ಬಡವರ ಬದುಕನ್ನು ಬೆಟ್ಟಿಂಗ್‌ನಲ್ಲಿ ಹರಾಜು ಹಾಕುತ್ತಿದ್ದಾರೆಂದು ಲಂಚ ಸರ್ಕಾರದ ವಿರುದ್ದ ಕಿಡಿಕಾರಿದರು.

ಜಿಲ್ಲೆಯಲ್ಲಿ ಗುಪ್ತ ಪೊಲೀಸ್ ಇಲಾಖೆ ಮಾಹಿತಿ ಪ್ರಕಾರ ಪ್ರತಿ ಹೋಟೆಲ್, ರೆರ್ಸಾಟ್, ಬಾರ್ & ರೆಸ್ಟೋರೆಂಟ್ ಡಾಬಾ, ಗ್ರಾಮೀಣ ಪ್ರದೇಶದ ತೋಟಗಳಲ್ಲಿ ಈ ದಂದೆ ನಿರಂತರವಾಗಿ ನಡೆಯುತ್ತಿದ್ದರೂ, ಪೊಲೀಸ್ ಇಲಾಖೆಗೆ ಮಾಹಿತಿ ಇಲ್ಲವೆ. ಲಕ್ಷ ಲಕ್ಷ ಲಕ್ಷ ಬೆಟ್ಟಿಂಗ್ ಕಟ್ಟಿ ಪ್ರಾಣ ಕಳೆದುಕೊಳ್ಳುವ ಮೇಲೆ ಪಚ್ಚಾತಾಪ ಪಟ್ಟರೆ. ಫಲವೇನು. ಮೊಳಕೆಯಲ್ಲಿಯೇ ದಂದೆಯನ್ನು ಚೀವುಟಿ ಬಡವರ ಬದುಕನ್ನು ರಕ್ಷಣೆ ಮಾಡಬಹುದಲ್ಲವೆ ಎಂದು ಸಲಹೆ ನೀಡಿದರು.

24 ಗಂಟೆಯಲ್ಲಿ ಜಿಲ್ಲಾದ್ಯಂತ ನಡೆಯುತ್ತಿರುವ ಅಕ್ರಮ ಕ್ರಿಕೇಟ್ ಬೆಟ್ಟಿಂಗ್ ದಂದೆಗೆ ಕಡಿವಾಣ ಹಾಕಿ ದಂದೆಕೋರರ ವಿರುದ್ದ ಕೇಸು ದಾಖಲಿಸಿ ಬಡ ರೈತ ಕೂಲಿಕಾರ್ಮಿಕರ ಯುವ ಪೀಳಿಗೆ ಭವಿಷ್ಯವನ್ನು ರಕ್ಷಣೆ ಮಾಡಬೇಕು. ಇಲ್ಲವಾದರೆ. ಬ್ಯಾಟ್ ಮತ್ತು ಬಾಲ್‌ಗಳ ಸಮೇತ ಜನ ಪ್ರತಿನಿಧಿಗಳ ಮನೆ ಮುಂದೆ ಆಹೋರಾತ್ರಿ ಕ್ರಿಕೇಟ್ ಟೂರ್ನಿಮೆಂಟ ಹಮ್ಮಿಕೊಳ್ಳುವ ತ್ತೇವೆ ಎಂದರು 
ಮನವಿ ಸ್ವೀಕರಿಸಿದ  ಉಪ ಆದಿಕ್ಷಕರು  ಕ್ರಿಕೆಟಿ ಬೆಟ್ಟಿಂಗ್  ದಂದೆ ಹಾಗೂ  ಅಕ್ರಮ ಗಣಿಗಾರಿಕೆ ಮತ್ತು  ಮಾದಕದ್ರವ್ಯ  ನಿಯಂತ್ರಣ  ಮಾಡಿ ದಂದೆಕೋರರ  ವಿರುದ್ದ  ಕ್ರಮ  ಕೈಗೊಳ್ಳುವ  ಭರವಸೆ  ನೀಡಿದರು 
ಸಭೆಯಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ರಾಮಸಾಗರ  ಬಾಬು ಸುರೇಶ ಬಾಬು  ಪಾರಂಡಹಳ್ಳಿ ಮಂಜುನಾಥ  ನಾಗಭೂಷಣ  ಹ.ಸೆ.ಅ.ಕಿರಣ್, ತಾಲ್ಲೂಕು ಅ.ಅಪ್ಪೋಜಿರಾವ್, ಮುನಿಕೃಷ್ಣ, ವಿಶ್ವ, ಮುನಿರಾಜು, ಗೋವಿಂದಪ್ಪ, ಶೈಲಜ, ವೆಂಕಟಮ್ಮ, ರತ್ನಮ್ಮ, ಗೌರಮ್ಮ, ಮುನಿರತ್ನಮ್ಮ, ಯಲ್ಲಣ್ಣ, ಮಂಗಸAದ್ರ ತಿಮ್ಮಣ್ಣ, ಹರೀಶ್, ಮುಂತಾದವರು ಇದ್ದ

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456