ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಮಹಿಳಾ ವಿಶ್ರಾಂತಿ ಕೊಠಡಿಯ ಸಭಾಂಗಣದಲ್ಲಿ ಟ್ರಿನಿಟೀಸ್ ಸಂಗೀತ ಕಲಾ ಟ್ರಸ್ಟಿನ ವತಿಯಿಂದ ಸಂಗೀತ ಸಂಭ್ರಮ ಸಾಂಸ್ಕೃತಿಕ ಕಲರವ ಮತ್ತು ವಾರ್ಷಿಕೋತ್ಸವ ಸಮಾರಂಭವನ್ನು ಅಯೋಜಿಸಲಾಗಿತ್ತು.ಈ ಸಮಾರಂಭಕ್ಕೆ ಪಿ.ಇ.ಎಸ್.ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ.ನಂದಾ.ಎಂಎಲ್.ಹಿರಿಯ ಗಾಯಕರಾದ ಶ್ರೀ ಅಚ್ಯುತ ಸಂಕೇತಿ.ನಾಡಿನ ಪ್ರಸಿದ್ಧ ದ್ವಿಕಂಠ ಗಾಯಕರಾದ ಸಿಂಗರ್ ಶ್ರೀನಿವಾಸ್.ವಿಶ್ವಮಾನವ ಸಾಂಸ್ಕೃತಿಕ ಪ್ರತಿಷ್ಠಾನದ ಉಪಾಧ್ಯಕ್ಷೆ ಶ್ರೀಮತಿ ಮಧುಮಾಲತಿ. ಮುಖ್ಯ ಅತಿಥಿಯಾಗಿ ಸಮಾರಂಭಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿನ ಸಾಧನೆಯ ಸಾಧಕರಿಗೆ ಟ್ರಿನಿಟೀಸ್ ಕಲಾಶ್ರೀ. ಪ್ರಶಸ್ತಿ ನೀಡಿ ಗೌರವಿಸಲಾಯಿತು.ಈ ಪ್ರಶಸ್ತಿಗೆ ಪುರಸ್ಕೃತರಾದ ಕೃಷಿಕ ಶ್ರೀ ಟಿ.ಸಿ.ರಾಮಕೃಷ್ಣ.ಗಾಯಕರಾದ ಶ್ರೀಮತಿ ತಿಲಕ.ಶಿಕ್ಷಕರಾದ ಕುಮಾರಿ ರೇಖಾ.ಎನ್.ಸಮಾಜ ಸೇವಕರಾದ ಶ್ರೀಮತಿ ಎಂ.ಯಶೋದ ಪೈ.ಬೋಗಳ ಶಾಸ್ತ್ರ ಉಪನ್ಯಾಸರಾದ ಶ್ರೀ ಪೂರ್ಣಚಂದ್ರ ಎಂ.ಎ. ಇವರಿಗೆ ಟ್ರಸ್ಟಿನ ಗೌರವಾಧ್ಯಕ್ಷ ಶ್ರೀ ಎಂ.ಪುಟ್ಟರಾಜು. ರವರು ಪ್ರಶಸ್ತಿ ನೀಡಿ ಗೌರವಿಸಿದರು.