ದಾನ ಮಾಡಿದಷ್ಟು ಮೇಲೆ : ವಿಜಯೇಂದ್ರ ಆಚಾರ್ಯ 

Apr 27, 2026 - 13:31
 0  2
ದಾನ ಮಾಡಿದಷ್ಟು ಮೇಲೆ : ವಿಜಯೇಂದ್ರ ಆಚಾರ್ಯ 

      ನಗರದ ಜಯನಗರದಲ್ಲಿರುವ ಅಂಬ್ರಾಣಿ ಗುರುಕುಲದ ವಿದ್ಯಾರ್ಥಿನಿ ಬಂಧುಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ ನೋಟ್ ಬುಕ್, ಡ್ರೈ ಫ್ರೂಟ್ಸ್, ಹಣ್ಣು ಹಂಪಲು  ವಿತರಿಸುವ ಸೇವಾ ಕಾರ್ಯವನ್ನು ಗುರುಕುಲದ ಶ್ರೀ ಶ್ರೀ  ಡಾ. ಬೆ ನಾ ವಿಜೇಂದ್ರ ಆಚಾರ್ಯ ಗುರುಗಳ  ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು.

 ಈ ಸಂದರ್ಭದಲ್ಲಿ ಮಾತನಾಡಿದ  ಶ್ರೀ ಶ್ರೀ ಡಾ. ಬೆ ನಾ ವಿಜಯೇಂದ್ರ ಆಚಾರ್ಯರವರು ಒಂದೊಳ್ಳೆ ಕೆಲಸ ಮಾಡಿದಾಗ ಅತ್ಯಂತ ಸಂತೋಷ ಸಮಾಧಾನ ಸಿಗುತ್ತದೆ. " ಮೋಡ ನೋಡಿ ಸಮುದ್ರ ನೋಡಿ " ಇದು ಸುಭಾಷಿತ ಮೋಡ  ನೀರನ್ನು ದಾನ ಮಾಡಿ ಮಾಡಿ ( ಮಳೆಯ ಮೂಲಕ ) ಮೇಲೆ ಇರುತ್ತದೆ.ಸಮುದ್ರ ನೀರನ್ನು ಕೊಡದೆ ( ಉಪ್ಪು ನೀರಲ್ಲವ ) ಕೆಳಗೆ ಇರುತ್ತದೆ. ದಾನ ಮಾಡಿದಷ್ಟು ನಿಮ್ಮ ಸ್ಥಾನ ಮೇಲೆ ಜಿಪುಣತನ ಮಾಡಿದಷ್ಟು ಕೆಳಗಿನ ಸ್ಥಾನ  ದಾನ ಮಾಡಿದರೆ ಎಲ್ಲಿಯತನಕ ನಿಮ್ಮನ್ನು ಕರೆದುಕೊಂಡು ಹೋಗುತ್ತದೆ ಎಂದು ಕಲ್ಪನೆಯೂ ಇಲ್ಲ,ಮನುಷ್ಯನಾಗಿ ಹುಟ್ಟಿದ ಮೇಲೆ ಸನ್ಮಾರ್ಗದಲ್ಲಿ ನಡೆಯಿರಿ,ದಾನ ಧರ್ಮದಲ್ಲಿ ತೊಡಗಿಕೊಳ್ಳಿ ಎಂದು ಕರೆ ನೀಡಿ. ಸತ್ಕಾರ್ಯ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಸ್ನೇಹ ಬಳಗದ ಸದಸ್ಯರಿಗೆ ಆಶೀರ್ವದಿಸಿದರು.

ನಂತರ ಮಾತನಾಡಿದ ಜೆಡಿಎಸ್ ಮುಖಂಡ ಪ್ರಕಾಶ್ ಪ್ರಿಯಾದರ್ಶನ್ ವಿವಿಧ ಜಿಲ್ಲೆಗಳಿಂದ ಆಗಮಿಸಿ ಗುರುಕುಲದಲ್ಲಿ ಅಧ್ಯಯನ ಮಾಡುತ್ತಿರುವ ಮಕ್ಕಳೆಲ್ಲರೂ ಅತ್ಯಂತ ಪ್ರತಿಭಾನ್ವಿತರು ಪ್ರತಿದಿನ ರಾಮಾಯಣ ಮಹಾಭಾರತವನ್ನು ನಾಲ್ಕು ಐದು ಗಂಟೆಗಳ ಕಾಲ ಅಧ್ಯಯನ ಮಾಡುವುದರ ಜೊತೆಯಲ್ಲಿ  ಹೊರಗಿನ ಶಾಲೆಯಲ್ಲಿ ಓದಿ ಇತ್ತೀಚೆಗೆ ನಡೆದ  ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಎಲ್ಲಾ ವಿದ್ಯಾರ್ಥಿನಿಯರು 94 / 95 ಪರ್ಸೆಂಟೇಜ್ ಅಂಕಗಳನ್ನು  ಪಡೆಯುವ ಮೂಲಕ ಅಂಬ್ರಾಣಿ ಗುರುಕುಲಕ್ಕೆ ಕೀರ್ತಿಯನ್ನು ತರುವುದರ  ಜೊತೆಯಲ್ಲಿ  ಸಂಗೀತ, ನೃತ್ಯ, ಸನಾತನ ಧರ್ಮದ ಎಲ್ಲಾ ಮಜಲುಗಳನ್ನು ಕರಗತ ಮಾಡಿಕೊಳ್ಳುವ ಮೂಲಕ  ಧರ್ಮ ಸಂರಕ್ಷಣೆ ಮಾಡಲು ಪಣತೊಟ್ಟಿರುವ ಈ ಎಲ್ಲಾ ಹೆಣ್ಣು ಮಕ್ಕಳ ಭವಿಷ್ಯ ಉಜ್ವಲವಾಗಿರಲೆಂದು ಶುಭ ಹಾರೈಸಿದರು. 

ಈ ಸಂದರ್ಭದಲ್ಲಿ  ಶ್ರೀ ಶ್ರೀ ಡಾ. ಬೆ.ನಾ. ವಿಜಯೇಂದ್ರ ಆಚಾರ್ಯ, ಜೆ.ಡಿ.ಎಸ್. ಮುಖಂಡ ಎಸ್ ಪ್ರಕಾಶ್ ಪ್ರಿಯಾದರ್ಶನ, ಬ್ಲಡ್ ಆನ್ ಕಾಲ್ ಕ್ಲಬ್, ಮೈಸೂರು ಸಂಸ್ಥಾಪಕ ದೇವೇಂದ್ರ ಪರಿಹಾರಿಯಾ, ಸಮಾಜ ಸೇವಕಿ ವಿದ್ಯಾ, ಸಹನ,ರಾಜೇಶ್ ಕುಮಾರ್,ಮಹೇಶ,  ದತ್ತ ಇನ್ನಿತರರು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456