ದ್ವಿತೀಯ ಪಿಯುಸಿಯಲ್ಲಿ ಉತ್ತಿರ್ಣರಾದ ವಿದ್ಯಾರ್ಥಿಗಳಿಗೆ ಶ್ರೀ ಗೌರಿಮಠ ಹಾಗೂ ಕಚುಸಾಪದಿಂದ ಸನ್ಮಾನ

Apr 13, 2026 - 12:38
 0  4
ದ್ವಿತೀಯ ಪಿಯುಸಿಯಲ್ಲಿ ಉತ್ತಿರ್ಣರಾದ ವಿದ್ಯಾರ್ಥಿಗಳಿಗೆ  ಶ್ರೀ ಗೌರಿಮಠ ಹಾಗೂ ಕಚುಸಾಪದಿಂದ ಸನ್ಮಾನ

ಹಾವೇರಿ :-ನಗರದ ಸುಕ್ಷೇತ್ರ ಗೌರಿಮಠದಲ್ಲಿ ಶ್ರೀ ಮಠ ಹಾಗೂ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಶ್ರೀಮಠದ ಶ್ರೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಕುಮಾರಿ ಸೌಮ್ಯ ಹಿರೇಮಠ 98% ಹಾಗೂ ನಾಜಿರಿನ ನೆಗಳೂರ 96% ಮಾಡಿ ಇಬ್ಬರು ವಿದ್ಯಾರ್ಥಿನಿಯರು ಶಾಲೆಗೆ ಕೀರ್ತಿ ತಂದಿದ್ದರೂ. ಇದೀಗ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಜಿ ಎಚ್ ಕಾಲೇಜಿಗೆ ಪ್ರಥಮ ದರ್ಜೆಯಲ್ಲಿ ಉತ್ತಿರ್ಣಳಾದ ಕುಮಾರಿ ಸೌಮ್ಯ ಹಿರೇಮಠ ಹಾಗೂ ಎಂ ಆರ್ ಎಂ ಕಾಲೇಜಿಗೆ ಪ್ರಥಮ ದರ್ಜೆಯಲ್ಲಿ ಉತ್ತಿರ್ಣಳಾದ ಕುಮಾರಿ ನಾಜಿರಿನ್ ನೆಗಳೂರ ಮತ್ತೊಮ್ಮೆ ಗೌರಿಮಠದ ಶಾಲೆಗೂ ಕೀರ್ತಿ ತಂದ ಇರ್ವರಿಗೂ ಸನ್ಮಾನಿಸಿ ಗೌರವಿಸಿಸಲಾಯಿತು.

         ಈ ಸಂದರ್ಭದಲ್ಲಿ ಸನ್ಮಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಪೂಜ್ಯ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಮನುಷ್ಯನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರೂ ಸಾಧನೆ ಮಾಡಬೇಕು. ಸಾಧನೆ ಮಾಡದೆ ಸತ್ತರೆ ಸಾವಿಗೆ ಅವಮಾನ.ಸಾಧನೆಗೆ ಕಠಿಣ ಪರಿಶ್ರಮ, ಶ್ರದ್ದೆ, ಏಕಾಗ್ರತೆ ಮುಖ್ಯ.ಕುಮಾರಿ ಸೌಮ್ಯ ಮತ್ತು ನಾಜಿರಿನ ಕಷ್ಟ-ಪಟ್ಟು ಅಭ್ಯಾಸ ಮಾಡಿ ಉತ್ತಮ ಫಲಿತಾಂಶ ಪಡೆದು ಶಾಲೆಗೆ, ಪಾಲಕರಿಗೆ ಇಡಿ ಜಿಲ್ಲೆಗೆ ಹೆಸರು ತಂದಿದ್ದಾರೆ ಇರಿಂದ ಎಲ್ಲರಿಗೂ ಸಂತೋಷವಾಗಿದೆ. ನನಗಂತೂ ಹಂಡೆ ಹಾಲು ಕುಡಿದಷ್ಟು ಸಂತೋಷವಾಗಿದೆ ಏಕೆಂದರೆ ಅವರು ಇರ್ವರೂ ಹತ್ತನೇ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ಶಾಲೆ ಗೆ ಜಿಲ್ಲೆಗೆ ಹೆಸರು ತಂದಿದ್ದರೂ ಎಂದು ಸಂತಸಪಟ್ಟರು.

      ಮುಖ್ಯೋಪಾಧ್ಯಯರಾದ ಶ್ರೀ ಶಂಕರ ಅಕ್ಕಸಾಲಿ ಮಾತನಾಡಿ ಕುಮಾರಿ ಸೌಮ್ಯ ಹಾಗೂ ನಾಜಿರಿನ್ ಅದಿಕ ಅಂಕ ಪಡೆದು ನಮ್ಮ ಶಾಲೆಗೆ ಕೀರ್ತಿ ತಂದಿದ್ದಾರೆ. ಅವರ ಸಾಧನೆ ನಿರಂತರವಾಗಿ ಉಜ್ವಲ ಭವಿಷ್ಯ ಕಟ್ಟಿಕೊಳ್ಳಬೇಕು ಎಂದರು.

         ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಪ್ರದಾನ ಕಾರ್ಯದರ್ಶಿ ಡಾ. ಗಂಗಯ್ಯ ಕುಲಕರ್ಣಿ ಮಾತನಾಡಿ ಮಕ್ಕಳಿಗೆ ಶಿಕ್ಷಣದ ಜೊತೆ ಉತ್ತಮ ಸಂಸ್ಕಾರವು ಬೇಕು.ಈ ದಿಸೆಯಲ್ಲಿ ಶಿವಯೋಗಿ ಶ್ರೀಗಳು ಸುಂದರ ಕಟ್ಟಡ, ನೂರಿತ ಅನುಭವಿ ಶಿಕ್ಷಕರು ಇತ್ಯಾದಿ ಮೂಲಭೂತ ಸೌಲಭ್ಯಗಳನ್ನು ಪೂರೈಸುವ ಮೂಲಕ ಗುಣಮಟ್ಟದ ಸಂಸ್ಕಾರಯುತ ಶಿಕ್ಷಣ ಕೊಡುವ ಮೂಲಕ ಜಿಲ್ಲೆಗೆ ಮಾದರಿ ಶಾಲೆಯನ್ನಾಗಿ ಮಾಡಿ ಅಲ್ಲದೆ ಶ್ರೀಗಳು ಹಾಗೂ ಸಿಬ್ಬಂದಿ ವರ್ಗದ ನಿರಂತರ ಶ್ರಮದ ಪಲವಾಗಿ ಇಂದು ಜಿಲ್ಲೆಗೆ ಮಾದರಿ ಶಾಲೆಯಾಗಿದೆ ಎಂದರು.

         ಸನ್ಮಾನ ಸ್ವೀಕರಿಸಿ ಕುಮಾರಿ ಸೌಮ್ಯ ಹಾಗೂ ನಾಜಿರಿನ ಮಾತನಾಡಿ ಗೌರಿಮಠದ ಪ್ರೌಢ ಶಾಲೆಯಲ್ಲಿ ನಮಗೆ ಸಿಕ್ಕ ಗುಣಮಟ್ಟದ ಶಿಕ್ಷಣದಿಂದ ಇಂದು ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಲು ಸಹಾಯವಾಗಿದೆ ಅದಕ್ಕಾಗಿ ಶಾಲೆಯನ್ನ ಶ್ರೀಗಳನ್ನ, ಶಿಕ್ಷಕರನ್ನ ಎಂದಿಗೂ ಮರೆಯಲಿಕ್ಕೆ ಸಾಧ್ಯವಿಲ್ಲ ಎಂದ ಅವರು ಸನ್ಮಾನದಿಂದ ಸಂತಸವಾಗಿದೆ ಎಂದರು. ವೇದಿಕೆಯಲ್ಲಿ ಶ್ರೀ ಪ್ರಭುಲಿಂಗಸ್ವಾಮಿ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.

ಶಿಕ್ಷಕ ಮಾಂತೇಶ ಸಂಗೂರ ಸ್ವಾಗತಿಸಿ ವಂದಿಸಿದರು. ಶಿಕ್ಷಕಿ ಶ್ರೀಮತಿ ಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456