ಧರ್ಮ ಮತ್ತು ವೈಚಾರಿಕ ಮನೋಭಾವ ಡಾ.ಹೆಚ್.ನರಸಿಂಹಯ್ಯನವರದ್ದು- ಕಸಪಾ ಅಧ್ಯಕ್ಷ ಡಾ.ಚಿನ್ನಕೈವಾರಮಯ್ಯ
ಬಾಗೇಪಲ್ಲಿ: ಪ್ರಶ್ನಿಸದೇ ಯಾವುದನ್ನೂ ಒಪ್ಪಬೇಡಿ ಎನ್ನುವ ಸರಳ ಸಿದ್ಧಾಂತದ ಮೂಲಕ ಸಮಾಜದಲ್ಲಿ ವೈಜ್ಞಾನಿಕ ಚಿಂತನೆಯ ಬೀಜ ಬಿತ್ತಿದವರು ಪದ್ಮಭೂಷಣ್ ಡಾ.ಎಚ್.ನರಸಿಂಹಯ್ಯ ನವರು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಚಿನ್ನಕೈವಾರಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ತಾಪಂ ಕಚೇರಿಯ ಕಟ್ಟಡದಲ್ಲಿರುವ ಕಸಾಪ ಕಚೇರಿಯಲ್ಲಿ ನಡೆದ ಮೇರು ವ್ಯಕ್ತಿತ್ವ ಶಿಕ್ಷಣ ತಜ್ಞ ಪದ್ಮಭೂಷಣ್ ಡಾ.ಎಚ್.ನರಸಿಂಹಯ್ಯನವರ 105 ಜಯಂತಿ ಹಾಗೂ ಕಾರಹುಣ್ಣಿಮೆಯ ಕವಿಗೋಷ್ಟಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಎಚ್.ಎನ್. ಅವರು ನುಡಿದಂತೆ ನಡೆದ ಸರಳ ಮತ್ತು ಪ್ರಾಮಾಣಿಕ ಬದುಕಿನ ಚಿಂತನೆಗಳು ನಾಡಿನಾದ್ಯಂತ ಇಂದಿಗೂ ಬೆಳಗುತ್ತಿವೆ.ಅವರ ವಿಚಾರ, ನೆನಪು ಹಾಗು ಲಲಿತ ಪ್ರಬಂಧಗಳ ಸಂಕಲನ. ಸಮಾಜದ ಪ್ರತಿಯೊಬ್ಬರಿಗೂ ವೈಜ್ಞಾನಿಕ ಮನೋಧರ್ಮ,ಜಾತ್ಯಾತೀತತೆ, ಮಾನವೀಯತೆ, ಸಮಾಜಸೇವೆ ಮುಂತಾದ ಮೌಲ್ಯಗಳನ್ನು ಕಲಿಸಲು ಬರೆದಿರುವ ಲೇಖನಗಳು ಸರಳವಾದ ಆದರೆ ಸ್ಪಷ್ಟವಾದ ವೈಚಾರಿಕತೆ ಇಲ್ಲಿನ ಎಲ್ಲಾ ಲೇಖನಗಳ ಮುಖ್ಯಗುಣ. ಆಚರಣೆಗೆ ತರಲಾಗದ ಯಾವ ಉಪದೇಶವನ್ನೂ ಅವರು ನೀಡುವುದಿಲ್ಲ ಅರ್ಥವಾಗದ ಮಾತುಗಳನ್ನು ಆಡುವುದಿಲ್ಲ. ಅರ್ಥಹೀನ ಸಂಪ್ರದಾಯಗಳನ್ನು, ಗೊಡ್ಡು ಆದರ್ಶಗಳನ್ನು ಮೂಡ ನಂಬಿಕೆಗಳನ್ನು ಪ್ರತಿಪಾದಿಸುವುದಿಲ್ಲ. ಅವರ ಜೀವನ, ನಡೆ, ನುಡಿ ಸದಾಕಾಲವೂ ತೆರೆದ ಪುಸ್ತಕದಂತೆ ಎಲ್ಲವೂ ಸರಳ, ನೇರ ಮತ್ತು ನಿಶ್ಚಲವಾಗಿತ್ತು ಎಂದರು.
ಕಸಾಪ ಮಾಜಿ ಅಧ್ಯಕ್ಷ ಎ.ಜಿ.ಸುಧಾಕರ್ ಮಾತನಾಡಿ ತಮ್ಮ ಬದುಕಿನುದ್ದಕ್ಕೂ ಸರಳತೆ, ನೇರತನ, ದಿಟ್ಟತನ ಮತ್ತು ಸತ್ಯವನ್ನು ಅನುಸರಿಸಿಕೊಂಡು ಬಂದ ಡಾ. ಎಚ್.ಎನ್. ನಿರೀಶ್ವರವಾದಿಯಾಗಿದ್ದರು. ಹಾಗೆಂದ ಮಾತ್ರಕ್ಕೆ ಕಂದಾಚಾರ, ಮೌಢ್ಯತೆ ಮತ್ತು ಮೂಢನಂಬಿಕೆಗಳನ್ನು ಖಂಡಿಸುತ್ತಿದ್ದರಲ್ಲವೇ ಹೊರತು, ಸತ್ಯವನ್ನು ಮರೆಮಾಚಿ ಅನಾಚಾರವನ್ನು ಮೆರೆಸುತ್ತಿರುವ ಅಂಧ ಭಕ್ತಗಣಕ್ಕೆ ಸಂತಾಪ ಮತ್ತು ಸಹಾನುಭೂತಿ ವ್ಯಕ್ತಪಡಿಸುತ್ತಿದ್ದರಷ್ಟೇ ಹೊರತು ಆ ರೀತಿಯ ಅಸಾಂಪ್ರದಾಯಿಕ ಆಚರಣೆಯನ್ನು ಅವರು ಒಪ್ಪುತ್ತಿರಲಿಲ್ಲ. ಬೆಂಬಲಿಸುತ್ತಿರಲಿಲ್ಲ. ಅವರು ವಿಜ್ಞಾನದ ವಿದ್ಯಾರ್ಥಿಯಾಗಿದ್ದವರು ಎಂದರು.
ಈ ಸಂದರ್ಭದಲ್ಲಿ ಮುಖ್ಯ ಭಾಷಣಕಾರ ಸುಬ್ರಮಣಿ,ಗೌರವ ಕಾರ್ಯದರ್ಶಿಗಳಾದ ಬಾಣಾಲಪಲ್ಲಿ ಶ್ರೀನಿವಾಸ, ಶಿವಪ್ಪ, ನಿಕಟಪೂರ್ವ ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿ, ಖಜಾಂಚಿ ಸುಕನ್ಯ, ಜಿಪಂ ಮಾಜಿ ಉಪಾಧ್ಯಕ್ಷ ಡಾ.ಎ.ವಿ.ಪೂಜಪ್ಪ, ಕಸಾಪ ಪದಾಧಿಕಾರಿಗಳಾದ ಜ್ಯೋತಿ, ಧರ್ಮಪುತ್ರಿ, ರಾಮಕೃಷ್ಣಾರೆಡ್ಡಿ, ವಲೀಬಾಷ, ಜೀವಿಕಾ ಸಂಘಟನೆಯ ಜಿಲ್ಲಾ ಸಂಚಾಲಕ ನಾರಾಯಣಸ್ವಾಮಿ, ಜಿ.ವೆಂಕಟೇಶ್, ಮಣಿಕಂಠ,ರಾಜೇಶ್, ಸುಬ್ಬುರಾಮ,ರಾಜರಾಜೇಶ್ವರಿ, ಶಿವಶಂಕರಾಚಾರಿ, ಕೆ.ವಿ.ಶ್ರೀನಿವಾಸ, ಮುಸ್ತಾಫ ಮತ್ತಿತರರು ಹಾಜರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
