ಪ್ರಾದೇಶಿಕ ವಿಜ್ಞಾನ ಕೇಂದ್ರದ ಸ್ಥಳ ಪರಿಶೀಲನೆ
ಕೆಜಿಎಫ್: ದಿ:04-11-2025 ರಂದು ಶ್ರೀಯುತ ಎನ್.ಎಸ್. ಭೋಸರಾಜು ರವರು ಸನ್ಮಾನ್ಯ ಸಚಿವರು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ ರವರು ಕೆ.ಜಿ.ಎಫ್. ನಗರಕ್ಕೆ ಭೇಟಿ ನೀಡಿದ್ದು ಮಾನ್ಯ ಶಾಸಕರಾದ ಶ್ರೀಮತಿ ರೂಪಕಲಾ ಎಂ ಶಶಿಧರ್ ರವರು ಸನ್ಮಾನ್ಯ ಸಚಿವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾನ್ಯ ಸಚಿವರು ಕೆ.ಜಿ.ಎಫ್. ನಗರದ ಊರಿಗಾಂ ಸ್ವರ್ಣ ಭವನ್ ಬಳಿ 9 ಕೋಟಿ ವೆಚ್ಚದಲ್ಲಿ ರ್ಪ್ರಾದೇಶಿಕ ಸೈನ್ಸ್ ಸೆಂಟರ್ ಉಪ ಕೇಂದ್ರ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಬಂಗಾರದ ಗಣಿ ಸ.ನಂ:2 ರಲ್ಲಿ ಇತರ ಯೋಜನೆಗಳಿಗೆ 600 ಎಕರೆ ಮೀಸಲಿಟ್ಟಿರುವ ಜಮೀನಿನಲ್ಲಿ ಮಂಜೂರು ರಾಗಿರುವ10 ಎಕೆರೆ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದರು.
ಜಮೀನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚಿತ್ರದುರ್ಗ. ವಿಜಯನಗರ. ಮತ್ತು ರಾಮನಗರ ಜಿಲ್ಲೆಗಳಲ್ಲಿ ಜಾಗ ಸಿಕ್ಕಿದೆ. ರಾಯಚೂರಿನಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ ಮಂಜೂರಾಗಿದೆ. ಅದಕ್ಕೆ ಕೇಂದ್ರ ಸರ್ಕಾರದ ಅನುದಾನ ಮತ್ತು ಒಪ್ಪಿಗೆ ಸಿಕ್ಕಿದೆ ಯೋಜನೆಗೆ 26 ಕೋಟಿಯನ್ನು ಮುಖ್ಯಮಂತ್ರಿಗಳು ಶೀಘ್ರದಲ್ಲಿಯೇ ಶಂಕುಸ್ಥಾಪನೆ ಮಾಡಲಿದ್ದಾರೆ ವಿಜ್ಞಾನ ಉಪಕೇಂದ್ರಗಳನ್ನು ಮುಂದಿನ ದಿನಗಳಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರಗಳನ್ನಾಗಿ ರೂಪಿಸುವ ಸಾಧ್ಯತೆ ಇದೆ ಎಂದರು.
ಕೆಸಿ ವಾಲಿ, ಎಚ್ಎನ್ ವಾಲಿ,ನೀರನ್ನು ಸಂಸ್ಕರಿಸಿ ಬಿಡಲಾಗುತ್ತಿದೆ ₹1700 ಕೋಟಿ ವೆಚ್ಚದಲ್ಲಿ ವೃಷಭಾವತಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಇದರಿಂದಾಗಿ ತುಮಕೂರು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಸುಮಾರು 700 ಕೆರೆಗಳನ್ನು ಸಂಸ್ಕರಿಸಿದ ನೀರಿನಿಂದ ತುಂಬಿಸಲಾಗುವುದು.
ಬೆಂಗಳೂರಿನ ಬಳಿ ವಿಜ್ಞಾನ ನಗರ ಮಾಡಲು ಕೇಂದ್ರ ಸರ್ಕಾರದಿಂದ ಒಪ್ಪಿಗೆ ಪಡೆಯಲಾಗಿದೆ. ದೇವನಹಳ್ಳಿ ಬಳಿ ಕೆಐಎಡಿಬಿಯಿಂದ 20 ಎಕರೆ ಜಾಗ ಪಡೆಯಲಾಗಿದೆ ₹300 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು.
ಕೆಜಿಎಫ್ ನಗರದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ ನಿರ್ಮಾಣಕ್ಕೆ ಮಂಜೂರಾಗಿರುವ 10 ಎಕರೆ ಜಮೀನನ್ನು ಆದಷ್ಟು ಶೀಘ್ರವಾಗಿ ಸ್ವಚ್ಚಗೊಳಿಸಿ ಕಾಂಪೌಂಡ್ ನಿರ್ಮಾಣ ಮಾಡಲು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
ಕೇಂದ್ರವನ್ನು ಸ್ಥಾಪಿಸಲು ಎಲ್ಲಾ ಸಿದ್ಧತೆ ನಡೆಸಲಾಗಿದೆ ಮಾರ್ಚ್ ತಿಂಗಳೊಳಗೆ ಕಾಮಗಾರಿಯನ್ನು ಮುಗಿಸಲು ತೀರ್ಮಾನಿಸಲಾಗಿದೆ. ಕಾಂಪೌಂಡ್ ಮತ್ತು ಕಟ್ಟಡ ನಿರ್ಮಾಣಕ್ಕೆ ಮೊದಲು ಹಂತದಲ್ಲಿ ₹9 ಕೋಟಿ . ಮನಿಯೋಗಿಸಲಾಗುವುದು. ಮುಂದಿನ ದಿನಗಳಲ್ಲಿ ತಾರಾಲಯ ನಿರ್ಮಾಣ ಸೇರಿದಂತೆ ಹಂತ ಹಂತವಾಗಿ. ಕೇಂದ್ರವನ್ನು ಮತ್ತಷ್ಟು ಮೇಲ್ದರ್ಜೆಗೆ ಏರಿಸಲಾಗುವುದು ಎಂದರು.
ಹಾಗೂ ಈ ಸೈನ್ಸ್ ಕೇಂದ್ರದಿಂದ ಸ್ಥಳೀಯವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಮಾನ್ಯ ಸಚಿವರು ತಿಳಿಸಿದರು.
ಶಾಸಕಿ ಶ್ರೀಮತಿ ರೂಪಕಲಾ ಶಶಿಧರ್ ತಹಸೀಲ್ದಾರ್ ಭರತ್ ನಗರಸಭೆ ಅಧ್ಯಕ್ಷ ಇಂದಿರಾಗಾಂಧಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.
ಈ ಸಂದರ್ಭದಲ್ಲಿ ಮಾನ್ಯ ಸಚಿವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
