ಬೇಜವಾಬ್ದಾರಿಯಿಂದ ದುರಂತ: ಆಮಿರ್ ಅಶ್ಅರೀ ಬನ್ನೂರು

Jun 13, 2025 - 13:16
 0  6
ಬೇಜವಾಬ್ದಾರಿಯಿಂದ ದುರಂತ: ಆಮಿರ್ ಅಶ್ಅರೀ ಬನ್ನೂರು

ಭಾರತೀಯ ಮತ್ತು ವಿದೇಶ ಪ್ರಜೆಗಳು ಪ್ರಯಾಣಿಸುತ್ತಿದ್ದ ವಿಮಾನವು ಅಹ್ಮದಾಬಾದಿನಲ್ಲಿ ಪತನವಾಗಿರುವ ಮಾಹಿತಿ ಕೇಳಿ ದುಃಖಿತನಗಿದ್ದೇನೆ.‌ ಸಾವಿರಾರು ಕನಸುಗಳನ್ನು ಹೊತ್ತು ಸಾಗುತ್ತಿದ್ದ ದೊಡ್ಡವರು, ಮಕ್ಕಳು ಸೇರಿದಂತೆ ಒಟ್ಟು 240 ರಷ್ಟು ಪ್ರಯಾಣಿಕರು ನಿಮಿಷಗಳ ಅಂತರದಲ್ಲಿ ಸುಟ್ಟು ಕರಗಿ ಹೋಗುತ್ತಾರೆಂದರೆ ಸಹಿಸಲು ಹೇಗೆ ಸಾಧ್ಯವಾಗುತ್ತದೆ. ಪತನಗೊಂಡ ಸ್ಥಳದಲ್ಲಿದ್ದ ವಿದ್ಯಾರ್ಥಿಗಳು ಸಾವಿಗೀಡಾಗಿರುವುದು ವಿಷಾಧನೀಯವಾಗಿದೆ.

ವಿಮಾನದ ತಾಂತ್ರಿಕ ದೋಷವೇ ಕಾರಣವೆಂದು ಈಗಾಗಲೇ ಖಚಿತವಾಗಿದೆ. ವಿಮಾನಯಾನ ಸಂಸ್ಥೆಯ ಬೇಜವಾಬ್ದಾರಿ ಧೋರಣೆಯಿಂದ ದುರಂತವು ಸಂಭವಿಸಿದೆ. ನಿರ್ಲಕ್ಷ್ಮ ತೋರಿದ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ಕೆಲಸದಿಂದ ಅಮಾನತು ಮಾಡಬೇಕು. ಸಾವನ್ನಪ್ಪಿದವರಿಗೆ ಸರಕಾರಗಳು ಕೂಡಲೆ ನ್ಯಾಯವನ್ನು ದೊರಕಿಸಬೇಕು. ಪರಿಹಾರ ಘೋಷಿಸಿ ಪ್ರಕರಣದಿಂದ ಕೈ ತೊಳೆದು ಕೊಳ್ಳುವ ಚಾಳಿಯನ್ನು ಸರ್ಕಾರ ಬಿಟ್ಟು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಖಿದ್ಮಾ ಫೌಂಡೇಶನ್ ಕರ್ನಾಟಕ ಅಧ್ಯಕ್ಷ ಆಮಿರ್ ಅಶ್ಅರೀ ಬನ್ನೂರು ಆಗ್ರಹಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456