ಭರತನಾಟ್ಯ ರಂಗಪ್ರವೇಶ : ಕಲಾಸಕ್ತರಿಂದ ಆಸ್ವಾದನೆ

Jun 2, 2025 - 11:56
 0  7
ಭರತನಾಟ್ಯ ರಂಗಪ್ರವೇಶ : ಕಲಾಸಕ್ತರಿಂದ ಆಸ್ವಾದನೆ

ಬೆಂಗಳೂರು: ನಾಟ್ಯೇಶ್ವರ ನೃತ್ಯ ಶಾಲೆ ಹಾಗೂ ನೃತ್ಯ ಕುಟೀರ ಇವುಗಳ ಸಂಯುಕ್ತಾಶ್ರಯದಲ್ಲಿ ಮೇ 31ರಂದು ಮಲ್ಲೇಶ್ವರ ಶ್ರೀಕೃಷ್ಣದೇವರಾಯ ಕಲಾಮಂದಿರ(ತೆಲುಗು ವಿಜ್ಞಾನ ಸಮಿತಿ)ದಲ್ಲಿ ಗುರು  ಕೆ.ಪಿ ಸತೀಶ್ ಬಾಬುರವರ ಹಿರಿಯ ವಿದ್ಯಾರ್ಥಿನಿ ಕು|| ಕೆ. ಹರಿಣಿ  ಹಾಗೂ ನೃತ್ಯ ಕುಟೀರದ ಗುರು ವಿ|| ಲಿಖಿತಾರವರ ಶಿಷ್ಯೆ ಕು|| ಕೆ. ಪ್ರಗತಿ ಇವರುಗಳ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮೂಡಿಬಂತು.
ವಾದ್ಯವೃಂದದಲ್ಲಿ :  ಗುರುಗಳಾದ ಕಲಾಯೋಗಿ  ಶ್ರೀ ಕೆ.ಪಿ. ಸತೀಶ್ ಬಾಬು ಮತ್ತು ವಿ|| ಯು.ಕೆ. ಲಲಿತಾ (ನಟುವಾಂಗ), ವಿದ್ವಾನ್ ಶ್ರೀವತ್ಸ (ಹಾಡುಗಾರಿಕೆ), ವಿ|| ಪಿ. ಜನಾರ್ದನ (ಮೃದಂಗ), ವಿ|| ಆರ್ ಪಿ ಪ್ರಶಾಂತ್ (ವೀಣೆ), ವಿ|| ರಘುಸಿಂಹ {ಕೊಳಲು},  ವಿ|| ಧನುಷ್ (ರಿದಂ ಪ್ಯಾಡ್). ಕಾರ್ಯಕ್ರಮ ನಿರ್ವಹಣೆ ಮತ್ತು ನಿರೂಪಣೆ ವಾಣಿ ಸತೀಶ್ ಬಾಬು.  ಪಾರಂಪರಿಕ ನೃತ್ಯ  ಬಂಧಗಳಾದ ಪುಷ್ಪಾಂಜಲಿ, ವಿನಾಯಕ ಸ್ತುತಿ, ಗುರುಶ್ಲೋಕ, ರಸಿಕಪ್ರಿಯ, ಜತಿಸ್ವರ, ದಶಾವತಾರ, ವೆಂಕಟೇಶ್ವರ ಪದವರ್ಣ, ಶಿವಕೀರ್ತನೆ, ದೇವಿಸೃತಿ ಹಾಗೂ ಕೊನೆಯಲ್ಲಿ ಕದನ ಕೂತೂಹಲ ತಿಲ್ಲಾನ, ಶ್ರೀರಾಮಚಂದ್ರನ ಮಂಗಳದೊಂದಿಗೆ  ಸುಸಂಪನ್ನವಾಯಿತು. ಅತಿಥಿಗಳಾಗಿ ಕಲಾಯೋಗಿ ಶ್ರೀಮತಿ ರೇಖಾ ಜಗದೀಶ್ (ನಿರ್ದೇಶಕರು, ಶ್ರೀ ಲಲಿತ ಕಲಾ ನಿಕೇತನ), 'ಕಲಾಯೋಗಿ' ಶ್ರೀ ಎಸ್ . ರಘುನಂದನ್   (ನಿರ್ದೇಶಕರು ಕೇಶವ ಸಂಗೀತ ಮತ್ತು ನೃತ್ಯ ಶಾಲೆ ಹಾಗೂ ಡಾ॥ ಶ್ರೀಮತಿ ಮಾನಸಿ ರಘುನಂದನ್ (ನಿರ್ದೇಶಕರು, ಅಭಿವ್ಯಕ್ತಿ ಸಾಂಸ್ಕೃತಿಕ ಸಂಸ್ಥೆ)  ನೃತ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇಡೀ ಸಭಾಂಗಣ ಕಿರಿಯ, ಹಿರಿಯ ವಿದ್ಯಾರ್ಥಿ ವೃಂದ , ಕಲಾರಸಿಕರು ಪೋಷಕರಿಂದ ತುಂಬಿ ಕರತಾಡನದಿಂದ ಕಂಗೊಳಿಸಿತು. ಕಾರ್ಯಕ್ರಮವನ್ನು ಪೋಷಕರಾದ ಡಾ॥ ಕುಮಾರ್ ಮತ್ತು ಶ್ರೀಮತಿ ಎಸ್. ಜಯಶ್ರೀ ಅಚ್ಚುಕಟ್ಟಾಗಿ ನಿರ್ವಹಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456