ಮಹನೀಯರ ಜಯಂತಿಗಳು ಅರ್ಥಪೂರ್ಣವಾಗಿ ಆಚರಿಸೋಣ-ತಹಶೀಲ್ದಾರ್ ಮನಿಷಾ ಮಹೇಶ್ ಪತ್ರಿ
ಬಾಗೇಪಲ್ಲಿ: ಮಹನೀಯರ ಜಯಂತಿಗಳು ಕೇವಲ ಆಡಂಬರ, ಅದ್ದೂರಿಯ ಸಂಕೇತವಾಗಬಾರದು, ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಂಡು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಾರ್ಥಕ ಆಚರಣೆ ಆಗಬೇಕೆಂದು ತಹಶೀಲ್ದಾರ್ ಮನಿಷಾ ಮಹೇಶ್ ಪತ್ರಿ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ನಾಡಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿಮಾತನಾಡಿದ ಅವರು ಇದೆ ಜೂ.27 ರಂದು ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಿಸಬೇಕಿದೆ. ಈ ಜಗತ್ತಿನಲ್ಲಿ ಉತ್ತಮ ಬದುಕನ್ನು ರೂಪಿಸಲು ಇರುವ ಏಕೈಕ ಉತ್ತಮ ಮಾರ್ಗ
ಶಿಕ್ಷಣವೊಂದೆ ಹಾಗಾಗಿ ಎಲ್ಲ ಸಮುದಾಯದವರೂ ಸಹ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಹಾಗೂ ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆಗೆ ಶಿಕ್ಷಣವೆ ಅಡಿಪಾಯವಾಗಿದೆ ಹಾಗಾಗಿ ಸಮುದಾಯದ ಹಿರಿಯ ಮುಖಂಡರು ತಮ್ಮಮ್ಮ ಸಮುದಾಯಗಳ ಬಡವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೈಜೋಡಿಸಿ ಉತ್ತೇಜನ ನೀಡಿ ಹಾಗೂ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳು ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಉತ್ತೇಜನ ನೀಡಿ ಸನ್ಮಾನಿಸುವ ಮೂಲಕ ನಾಡ ಪ್ರಭು ಕೆಂಪೇಗೌಡರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ ಎನ್ನುವ ತಹಶೀಲ್ದಾರರ ಅಭಿಪ್ರಾಯಕ್ಕೆ ಸಭೆಯಲ್ಲಿ ಎಲ್ಲರೂ ಸಹಮತ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಒಕ್ಕಲಿಗರ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ,ಕಾರ್ಯದರ್ಶಿ, ಸೋಮುಶೇಖರ್ ರೆಡ್ಡಿ,ವೆಂಕಟೇಶ್,ಸುಬ್ಬೀರೆಡ್ಡಿ, ವೆಂಕಟರಂಗಾರೆಡ್ಡಿ, ಬೈರೆಡ್ಡಿ, ವೆಂಕಟರೆಡ್ಡಿ, ವೆಂಕಟಶಿವಾರೆಡ್ಡಿ,ಚೌ ಡ ರೆಡ್ಡಿ, ಚೇಳೂರು ಶಿವಾ ರೆಡ್ಡಿ,ವೆಂಕಟರವಣಪ್ಪ,ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ,ಪುರಸಭೆ ಮುಖ್ಯಧಿಕಾರಿ ಶ್ರೀನಿವಾಸ್,ಲೋಕೋಪಯೋಗಿ ಇಲಾಖೆ ಪ್ರದೀಪ್,ತಾಲ್ಲೂಕು ಪ್ರಭಾರಿ ದೈಹಿಕ ಶಿಕ್ಷಕ ರಂಗನಾಥ್, ಕಾವ್ಯ,ತಾಲ್ಲೂಕು ಪಂಚಾಯಿತಿ ಜಾಕೀರ್ ಸೇರಿದಂತೆ ಮತ್ತಿತರರು ಇದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
