ಮಹಿಳಾ ಸಮಾನತೆ ನೀಡದೇ ದೇಶದ ಅಭಿವೃದ್ಧಿ ಅಸಾಧ್ಯ-ಗಂಗಾಧರ್ ಬಹುಜನ

Mar 10, 2026 - 15:13
Mar 10, 2026 - 15:14
 0  29
ಮಹಿಳಾ ಸಮಾನತೆ ನೀಡದೇ  ದೇಶದ ಅಭಿವೃದ್ಧಿ ಅಸಾಧ್ಯ-ಗಂಗಾಧರ್ ಬಹುಜನ
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ಚನ್ನರಾಯಪಟ್ಟಣ: ಯಾವುದೇ ಒಂದು ದೇಶ ಮಹಿಳೆಯರಿಗೆ ಎಲ್ಲಾ ರಂಗದಲ್ಲೂ ಸಮಾನತೆ ನೀಡದೇ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧಿಸುವುದು ಅಸಾಧ್ಯ ಎಂದು ವಕೀಲ ಗಂಗಾಧರ್ ಬಹುಜನ ತಿಳಿಸಿದರು.

ಮಾನಸ ಜಿಲ್ಲಾ ಸಂಪನ್ಮೂಲ ಕೇಂದ್ರ ಇವರ ವತಿಯಿಂದ ಚನ್ನರಾಯಪಟ್ಟಣ ಟೌನ್ ನ ವೀರಭದ್ರೇಶ್ವರ ಬಡಾವಣೆಯಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರಿಲ್ಲದೆ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ. ಮಹಿಳೆ ಕುಟುಂಬದ ಮೂಲಸ್ತಂಭವಾಗಿದ್ದು, ಸಮಾಜದ ಬೆಳವಣಿಗೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾಳೆ ಎಂದರು 

ಪ್ರತಿ ವರ್ಷ ಮಾರ್ಚ್ 8ರಂದು ವಿಶ್ವದಾದ್ಯಂತ ಅಂತರ ರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಮಹಿಳೆಯರ ಹಕ್ಕುಗಳು, ಅವರ ಸಾಧನೆಗಳು ಮತ್ತು ಸಮಾಜದಲ್ಲಿ ಅವರ ಮಹತ್ವದ ಪಾತ್ರವನ್ನು ಗೌರವಿಸುವ ದಿನವಾಗಿದೆ.

ಮಹಿಳಾ ದಿನಾಚರಣೆಯ ಇತಿಹಾಸವನ್ನು ನೋಡಿದರೆ ಅದು ಬಹಳ ಪ್ರೇರಣಾದಾಯಕವಾಗಿದೆ. 1908 ರಲ್ಲಿ ನ್ಯೂಯಾರ್ಕ್ ನಗರದಲ್ಲಿ ಸಾವಿರಾರು ಮಹಿಳಾ ಕಾರ್ಮಿಕರು ತಮ್ಮ ಕೆಲಸದ ಪರಿಸ್ಥಿತಿಯನ್ನು ಸುಧಾರಿಸಲು, ಸಮಾನ ವೇತನ ಪಡೆಯಲು ಮತ್ತು ಮತದಾನದ ಹಕ್ಕು ಪಡೆಯಲು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆ ಮಹಿಳಾ ಹಕ್ಕುಗಳ ಹೋರಾಟಕ್ಕೆ ಒಂದು ಮಹತ್ವದ ಆರಂಭವಾಗಿತ್ತು.

ಆನಂತರ 1910 ರಲ್ಲಿ ಕೋಪನ್ ಹೇಗನ್ ನಗರದಲ್ಲಿ ನಡೆದ ಅಂತರ ರಾಷ್ಟ್ರೀಯ ಮಹಿಳಾ ಸಮಾವೇಶದಲ್ಲಿ ಜರ್ಮನಿಯ ಪ್ರಸಿದ್ಧ ಸಮಾಜವಾದಿ ನಾಯಕಿ ಕ್ಲಾರಾ ಜೆಟ್ ಕಿನ್ ರವರು ಮಹಿಳೆಯರಿಗಾಗಿ ಒಂದು ವಿಶೇಷ ದಿನವನ್ನು ಆಚರಿಸಬೇಕೆಂದು ಪ್ರಸ್ತಾಪಿಸಿದರು. ಅವರ ಈ ಪ್ರಸ್ತಾವನೆಗೆ ಹಲವು ದೇಶಗಳ ಪ್ರತಿನಿಧಿಗಳು ಬೆಂಬಲ ನೀಡಿದರು.

ಅದಾದ ನಂತರ 1911ರಲ್ಲಿ ಆಸ್ಟ್ರಿಯಾ ಡೆನ್ಮಾರ್ಕ್ ಜರ್ಮನಿ ಮತ್ತು ಸ್ವಿಡ್ಜರ್ಲ್ಯಾಂಡ್ ದೇಶಗಳಲ್ಲಿ ಮೊದಲ ಬಾರಿಗೆ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ನಂತರ ಕ್ರಮೇಣ ಈ ಆಚರಣೆ ವಿಶ್ವದ ಹಲವಾರು ದೇಶಗಳಿಗೆ ವ್ಯಾಪಿಸಿತು.

1975 ರಲ್ಲಿ ವಿಶ್ವಸಂಸ್ಥೆಯು ಮಾರ್ಚ್ 8 ಅನ್ನು ಅಧಿಕೃತವಾಗಿ ಅಂತರ ರಾಷ್ಟ್ರೀಯ ಮಹಿಳಾ ದಿನವೆಂದು ಘೋಷಿಸಿತು. ಅಂದಿನಿಂದ ಈ ದಿನವನ್ನು ಅಧಿಕೃತವಾಗಿ ಇಡೀ ವಿಶ್ವದಾದ್ಯಂತ ಅತ್ಯಂತ ಗೌರವದಿಂದ ಆಚರಿಸಲಾಗುತ್ತಿದೆ.

ಮಹಿಳೆಯರು ಕುಟುಂಬ, ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ತಾಯಿ, ಸಹೋದರಿ, ಪತ್ನಿ ಮತ್ತು ಮಗಳ ರೂಪದಲ್ಲಿ ಮಹಿಳೆ ನಮ್ಮ ಜೀವನದಲ್ಲಿ ಅಪಾರ ಮಹತ್ವವನ್ನು ಹೊಂದಿದ್ದಾಳೆ. ಒಂದು ಕುಟುಂಬವನ್ನು ಸುಸ್ಥಿರವಾಗಿ ಕಟ್ಟುವ ಶಕ್ತಿ ಮಹಿಳೆಯಲ್ಲಿದೆ. “ಒಬ್ಬ ಮಹಿಳೆಗೆ ಶಿಕ್ಷಣ ನೀಡಿದರೆ ಒಂದು ಕುಟುಂಬಕ್ಕೆ ಶಿಕ್ಷಣ ನೀಡಿದಂತೆ” ಎಂಬ ಮಾತು ಮಹಿಳೆಯ ಮಹತ್ವವನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಇಂದಿನ ಯುಗದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಅದ್ಭುತ ಸಾಧನೆಗಳನ್ನು ಮಾಡುತ್ತಿದ್ದಾರೆ. ಶಿಕ್ಷಣ, ವಿಜ್ಞಾನ, ವೈದ್ಯಕೀಯ, ಕ್ರೀಡೆ, ರಾಜಕೀಯ, ತಂತ್ರಜ್ಞಾನ ಮತ್ತು ಅಂತರಿಕ್ಷ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ.

ಉದಾಹರಣೆಗೆ ಕಲ್ಪನಾ ಚಾವ್ಲಾ, ಕಿರಣ್ ಬೇಡಿ, ಪ್ರತಿಭಾ ಪಾಟೀಲ್ ದ್ರೌಪದಿ ಮುರ್ಮು, ಮಾಯಾವತಿ, ಜಯಲಲಿತ ಮಮತಾ ಬ್ಯಾನರ್ಜಿ,

 ಸಮಾಜದಲ್ಲಿ ಮಾದರಿಯಾಗಿದ್ದಾರೆ. 

ಇನ್ನೂ ಸಾವಿತ್ರಿಬಾಯಿ ಫುಲೆ ಫಾತಿಮಾ ಶೇಕ್, ಮದರ್ ತೆರೇಸಾ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ರಾಣಿ ಅಬ್ಬಕ್ಕ ದೇವಿ, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ ಇಂತಹ ಅನೇಕ ಮಹಿಳೆಯರು ಅಮೋಘ ಸಾಧನೆ ನಮ್ಮ ಸಮಾಜಕ್ಕೆ ಪ್ರೇರಣೆಯಾಗಿದ್ದಾರೆ.

ಆದರೆ ಇಂದಿಗೂ ಮಹಿಳೆಯರು ಕೆಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಲಿಂಗ ಅಸಮಾನತೆ, ಮಹಿಳೆಯರ ಮೇಲಿನ ಹಿಂಸಾಚಾರ ಮತ್ತು ಶಿಕ್ಷಣದ ಕೊರತೆ ಇನ್ನೂ ಕೆಲ ಕಡೆಗಳಲ್ಲಿ ಕಂಡು ಬರುತ್ತಿದೆ. ಆದ್ದರಿಂದ ಮಹಿಳೆಯರಿಗೆ ಸಮಾನ ಹಕ್ಕುಗಳು ಮತ್ತು ಅವಕಾಶಗಳನ್ನು ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. 

ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ನಮಗೆ ಒಂದು ಮಹತ್ವದ ಸಂದೇಶವನ್ನು ನೀಡುತ್ತದೆ. ಅದು ಮಹಿಳೆಯರನ್ನು ಗೌರವಿಸುವುದು, ಅವರಿಗೆ ಸಮಾನ ಅವಕಾಶಗಳನ್ನು ನೀಡುವುದು ಮತ್ತು ಮಹಿಳಾ ಸಬಲೀಕರಣಕ್ಕೆ ಸಹಕರಿಸುವುದು. ಸಮಾಜದಲ್ಲಿ ನಿಜವಾದ ಅಭಿವೃದ್ಧಿ ಆಗಬೇಕಾದರೆ ಮಹಿಳೆಯರಿಗೂ ಪುರುಷರಂತೆ ಸಮಾನ ಸ್ಥಾನಮಾನ ದೊರಕಬೇಕು.

ಆದ್ದರಿಂದ ನಾವು ಪ್ರತಿಯೊಬ್ಬರೂ ಮಹಿಳೆಯರನ್ನು ಗೌರವಿಸಬೇಕು, ಅವರ ಕನಸುಗಳನ್ನು ಸಾಧಿಸಲು ಬೆಂಬಲಿಸಬೇಕು ಮತ್ತು ಮಹಿಳಾ ಸಬಲೀಕರಣದತ್ತ ಹೆಜ್ಜೆ ಹಾಕಬೇಕು. ಮಹಿಳೆಯರು ಬಲವಾಗಿದ್ದರೆ ಕುಟುಂಬ ಬಲವಾಗುತ್ತದೆ, ಕುಟುಂಬ ಬಲವಾಗಿದ್ದರೆ ಸಮಾಜ ಮತ್ತು ರಾಷ್ಟ್ರವೂ ಬಲವಾಗುತ್ತದೆ.

ಜಗತ್ತಿನ ಮಾನವ ಸಂಕುಲದಲ್ಲಿ ಅರ್ಧದಷ್ಟು ಇರುವ ಮಹಿಳೆಯರಿಗೆ ಎಲ್ಲಾ ರಂಗದಲ್ಲೂ 50% ಮೀಸಲಾತಿ ನೀಡುವುದು ನ್ಯಾಯ ಸಮ್ಮತವಾಗಿದೆ ಎಂದು ಆಗ್ರಹ ಪಡಿಸಿದರು. ಇದೇ ಸಂದರ್ಭದಲ್ಲಿ ಬಹುಜನ ಸಮಾಜ ಪಾರ್ಟಿಯ ರಾಜ್ಯ ಸಂಯೋಜಕರಾದ ಗಂಗಾಧರ್ ಬಹುಜನ್, ನಿವೃತ್ತ ಅಧಿಕಾರಿಗಳಾದ ವೆಂಕಟೇಶ್, ಶಿವಕುಮಾರ್, ಮಹದೇವ್ ದಾಸ್, ಪುರಸಭಾ ಮಾಜಿ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ರಘು, ಮಾಜಿ ಉಪಾಧ್ಯಕ್ಷರಾದ ಭಾರತೀಯ ರಂಗಸ್ವಾಮಿ, ವಕೀಲರಾದ ವಿರೂಪಾಕ್ಷ,ಭಾಗ್ಯ ಪದ್ಮಲತಾ, ಬಹುಜನ ಚಳುವಳಿಯ ಮುಖಂಡರಾದ ಸಿಜೆ ಸೋಮಶೇಖರ್, ಅರುಣ್ ಕುಮಾರ್, ಬದ್ದಿಕೆರೆ ಬಸವರಾಜ್, ಕಿರಣ್ ಕುಮಾರ್, ಶ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ಅಧ್ಯಕ್ಷರುಗಳಾದ ಶ್ರೀಮತಿ ತಿಮ್ಮಮ್ಮ, ಶ್ರೀಮತಿ ಜ್ಯೋತಿ ಲಕ್ಷ್ಮಿ ಅರುಣ್ ಕುಮಾರ್, ಶ್ರೀಮತಿ ಭವನ ಹರೀಶ್, ಶ್ರೀಮತಿ ಲಲಿತಾ ಶಿವಕುಮಾರ್, ಶ್ರೀಮತಿ ಜ್ಯೋತಿ ರಾಮಕೃಷ್ಣ, ಶ್ರೀಮತಿ ನಿಂಗಮ್ಮ, ಲೀಲಾವತಿ, ಶ್ರೀಮತಿ ನಂಜಮ್ಮಚಿಕ್ಕಯ್ಯ, ಶ್ರೀಮತಿ ವೇದಾವತಿ ಚಿದಂಬರ್, ಸೇರಿದಂತೆ ಇತರರು ಹಾಜರಿದ್ದರು.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456