ರಾಷ್ಟ್ರ ಮಟ್ಟದಲ್ಲಿ ಎನ್ ಸಿ ಸಿ ವಿದ್ಯಾರ್ಥಿಗಳ ಸಾಧನೆ
ಕೆಜಿಎಫ್: ಆಂಧ್ರಪ್ರದೇಶದ ಕಾಕಿ ನಾಡ ರಾಜಮಂಡ್ರಿ ಜಿಲ್ಲೆಯಲ್ಲಿ ಒಂದು ವಾರಗಳ ಕಾಲ ನಡೆದ NCC DTEAP &T ಕೇಂದ್ರದಲ್ಲಿ ನಡೆದ ರಾಷ್ಟ್ರದ (ಸ್ಪೆಷಲ್ ನ್ಯಾಷನಲ್ ಇಂಟರ್ಗ್ರೇಷನ್ ಕ್ಯಾಂಪ್) ನಲ್ಲಿ ದೇಶ್ಯಾದ್ಯಂತ 17 ರಾಜ್ಯಗಳ NCC ವಿದ್ಯಾರ್ಥಿಗಳು ಭಾಗವಹಿಸಿದ್ದು, ಕರ್ನಾಟಕ ರಾಜ್ಯದ 10 KAR BN .KOLAR ಪರವಾಗಿ ಕೆಜಿಎಫ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜುನ ಎನ್ ಸಿಸಿ ವಿದ್ಯಾರ್ಥಿಗಳಾದ ಸೌಂದರ್ಯ. ಎಸ್. ಧರಣಿ ದೇವಿ. ಎನ್. ಶಾಲಿನಿ .ಎಸ್ ಹಾಗೂ ಗೋಕುಲ್ ಕೃಷ್ಣ. ಕ್ಯಾಂಪಿನಲ್ಲಿ ಭಾಗವಹಿಸಿ ಸಾಂಸ್ಕೃತಿಕ ಸ್ಪರ್ಧೆಯಲ್ಲಿ. ಪ್ರಥಮ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಕ್ರೀಡೆ ಸ್ಪರ್ಧೆಯಲ್ಲಿ (ವಾಲಿಬಾಲ್) ಪ್ರಥಮ ಪ್ರಶಸ್ತಿ ಗಳಿಸಿ ಕರ್ನಾಟಕ ರಾಜ್ಯಕ್ಕೆ ಹಾಗೂ ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ . ಈ ವಿದ್ಯಾರ್ಥಿಗಳಿಗೆ ಹಾಗೂ ANO - ಏಲಕ್ಕಿಯಾ. ಆರ್. ಮತ್ತು ಡಾ. ಮಂಜುನಾಥ್. ಎಸ್ ರವರಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ .ಕೆ .ನಾರಾಯಣ್. ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಯನ್ನು ಕೊಂಡಾಡಿದ ಪ್ರಾಂಶುಪಾಲರು. ಡಾ. ಕೆ. ನಾರಾಯಣ್ ಸರ್ಕಾರಿಪ್ರಥಮ ದರ್ಜೆ ಕಾಲೇಜಿನಲ್ಲಿ ಸರ್ಕಾರದಿಂದ ಎಲ್ಲಾ ಸೌಲತ್ತುಗಳ ದೊರೆಯುತ್ತದೆ.
ವಿದ್ಯಾರ್ಥಿಗಳು ಓದುವ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಓದಿದರೆ ಸಾಲದು ಜೊತೆಯಲ್ಲಿ ಕ್ರೀಡಾ ಮನೋಭಾವ ಬೆಳೆಸಿಕೊಂಡು ಇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಆಗ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಉತ್ತಮ ಚೇತರಿಕೆ ಆಗುತ್ತದೆ . ಜೊತೆಗೆ ಕ್ರೀಡೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಪ್ರಶಸ್ತಿ ಪಡೆದು ಕಾಲೇಜಿಗೆ ಕೀರ್ತಿ ತಂದರೆ. ನಮ್ಮ ಸರ್ಕಾರಿ ಕಾಲೇಜಿಗೆ ಹೆಮ್ಮೆ. ಸರ್ಕಾರಿ ಕಾಲೇಜುಗಳಲ್ಲಿ ನುರಿತ ಉಪನ್ಯಾಸಕರು. ಇದ್ದು. ಉತ್ತಮವಾಗಿ ಪಾಠ ಪ್ರವಚನವನ್ನು ವಿದ್ಯಾರ್ಥಿಗಳು ಪಡೆಯಬಹುದು. ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡುತ್ತದೆ ಎಂದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
