ರಾಸಾಯನಮುಕ್ತ ಕೃಷಿ ಮಾಡಿ, ಭೂಮಿ ಉಳಿಸಿ: ಜಗದೀಶ ದಾಸಣ್ಣನವರ

Mar 25, 2026 - 13:37
 0  7
ರಾಸಾಯನಮುಕ್ತ ಕೃಷಿ ಮಾಡಿ, ಭೂಮಿ ಉಳಿಸಿ: ಜಗದೀಶ ದಾಸಣ್ಣನವರ

     ಹಾವೇರಿ: ಅತಿಯಾದ ರಾಸಾಯನಿಕ ಬಳಕೆಯಿಂದ ಭೂಮಿಯಲ್ಲಿರುವ ಸೂಕ್ಷ್ಮ ಜೀವಿಗಳು ನಾಶವಾಗಿ ರೈತನ ಆದಾಯವು ಕಡಿಮೆಯಾಗುತ್ತಿದೆ. ಆದ್ದರಿಂದ ರೈತರು ರಾಸಾಯನಿಕ ಮುಕ್ತ ಕೃಷಿ ಮಾಡಿ ಭೂಮಿ ಉಳಿಸಲು ಮುಂದಾಗಬೇಕೆಂದು ಪ್ರಗತಿಪರ ಕೃಷಿಕ ಜಗದೀಶ ದಾಸಣ್ಣನವರ ಹೇಳಿದರು.
        ತಾಲೂಕಿನ ತಿಮ್ಮೆನಹಳ್ಳಿ ಗ್ರಾಮದ ಪ್ರಗತಿಪರ ಕೃಷಿಕ ಶ್ರೀ ಶಂಕ್ರಪ್ಪ ದಾಸಣ್ಣನವರ ಅವರ ರೇಷ್ಮೆ ತೋಟದಲ್ಲಿ ಕಚುಸಾಪ ಹಾಗೂ ವೇದಾಂತ ಸಂಸ್ಥೆ ಆಯೋಜಿಸಿದ್ದರೈತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ರೈತರು ಭೂಮಿಗೆ ಕೊಟ್ಟಿಗೆ ಗೊಬ್ಬರ, ಕುರಿ -ಕೋಳಿ ಗೊಬ್ಬರ ಹಾಗೂ ಸಿಲಿಕಾನ್ ಮತ್ತು ಕಾರ್ಬನ್ ಇಂಗಾಲದಂತ ಉತ್ಪನ್ನಗಳನ್ನು ಉಪಯೋಗಿಸುವ ಮೂಲಕ ಸಾವಯವ ಕೃಷಿ ಮಾಡಿ ಉತ್ತಮ ಇಳುವರಿ ಪಡೆಯಬೇಕು ಎಂದರು.

      ಕೃಷಿ ಸಲಹೆಗಾರ ಡಾ. ಗಂಗಯ್ಯ ಕುಲಕರ್ಣಿ ಮಾತನಾಡಿ ಗುಣಮಟ್ಟದ ಇಳುವರಿಗೆ ಶುದ್ಧ ನೀರು ಹಾಗೂ ಫಲವತ್ತಾದ ಮಣ್ಣು ಬೇಕು.ಜವಳು ಮತ್ತು ಸವಳಿನಿಂದ ಮುಕ್ತವಾದ ಭೂಮಿ ಬೇಕು. ಭೂಮಿಯಲ್ಲಿ ಅಡಕವಾಗಿರುವ ಅನುಪಯುಕ್ತ ಪದಾರ್ಥವನ್ನು ಹೊರ ಹಾಕಿ ಇಳುವರಿ ಹೆಚ್ಚಿಸುವ ಸಿಲಿಕಾನ್ ಅಂಶವಿರುವ ಅಗ್ರೋಸಿಲ್, ಕಾರ್ಬನ್ ಇಂಗಾಲ್ ಇರುವ ಕಾರ್ಬೋಸಿಲ್ ಉತ್ಪನ್ ಉಪಯೋಗಿಸಿ ಉತ್ತಮ ಪಸಲು ಪಡೆಯಬೇಕು ಎಂದ ಅವರು ರೇಷ್ಮೆ ಬೆಳೆ ನಿರ್ವಹಣೆ ಕುರಿತಾದ ಮಾಹಿತಿ ನೀಡಿದರು.
        ವೇದಾಂತ ಉತ್ಪನ್ ಗಳಾದ ಆಗ್ರೋಸಿಲ್, ಕಾರ್ಬೋಸಿಲ್, ಕಾಂಬಿ ಕಿಟ್, ನೀಮ್ಉರ್ಜಾ, ನುಟ್ರಾಸಿಲ್ ಇತ್ಯಾದಿ ಉತ್ಪನ್ ಉಪಯೋಗಿಸಿ ಹುಲೂಸಾಗಿ ಬೆಳೆದ ರೇಷ್ಮೆ ತೋಟ ನೋಡಿ ಎಲ್ಲ ರೈತರು ಸಂತಸಪಟ್ಟರು.


     ಬ್ಯಾಡಗಿ, ಕೆರೂಡಿ, ಕುಡ್ಲಾ, ಹೊಸರಿತ್ತಿ, ಚನ್ನೂರ, ಅಗಡಿ, ಕಲ್ಲೇದೇವರ, ಬರಡಿ, ಹನುಮನಹಳ್ಳಿ, ಕನವಳ್ಳಿ, ಬೂದಗಟ್ಟಿ ಇತ್ಯಾದಿ ಹಳ್ಳಿಗಳಿಂದ ರೇಷ್ಮೆ ರೈತರು ಪಾಲ್ಗೊಂಡಿದ್ದರು.
      ಹಿರಿಯ ಪ್ರಗತಿಪರ ಕೃಷಿಕ ಶ್ರೀ ಶಂಕ್ರಪ್ಪ ದಾಸಣ್ಣನವರ ದಂಪತಿಗಳಿಗೆ ಹಾಗೂ ಔಷಧಿ ವಿತರಕರಾದ ಕೊಟ್ರಯ್ಯ ಹಾವೇರಿಮಠ ಹಾಗೂ ಉಮೇಶ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456