ರೈಲ್ವೆ ಮಾರ್ಗಕ್ಕಾಗಿ ಕರವೇ ವತಿಯಿಂದ ಉಪವಾಸ ಸತ್ಯಾಗ್ರಹ-ಕೇಂದ್ರ ಸರ್ಕಾರಕ್ಕೆ ಹೋರಾಟದ ಎಚ್ಚರಿಕೆ

Feb 24, 2026 - 18:14
 0  8
ರೈಲ್ವೆ ಮಾರ್ಗಕ್ಕಾಗಿ ಕರವೇ ವತಿಯಿಂದ ಉಪವಾಸ ಸತ್ಯಾಗ್ರಹ-ಕೇಂದ್ರ ಸರ್ಕಾರಕ್ಕೆ ಹೋರಾಟದ ಎಚ್ಚರಿಕೆ
ವರದಿ ಸುಬ್ಬು ಭಾಗ್ಯನಗರ

     ಭಾಗ್ಯನಗರ: ನಮ್ಮ ಗಡಿ ಭಾಗದ ಬಡವರ ಅನುಕೂಲಕ್ಕಾಗಿ ಕೂಡಲೇ ನಮ್ಮ ಭಾಗಕ್ಕೆ ರೈಲ್ವೆ ಮಾರ್ಗ ಕಲ್ಪಿಸಬೇಕು ಇಲ್ಲವಾದರೆ ನಮ್ಮ ಕರವೇ ರಾಜ್ಯಧ್ಯಕ್ಷರಾದ ನಾರಾಯಣಗೌಡರ ನೇತೃತ್ವದಲ್ಲಿ ನಮ್ಮ ಹೋರಾಟ ಡೆಲ್ಲಿ ವರಿಗೆ ಮುಟ್ಟುತ್ತದೆ ಎಂದು ಕರವೇ ಅಧ್ಯಕ್ಷ ಕೆ.ಎನ್.ಹರೀಶ್ ಕೇಂದ್ರ ಸರ್ಕಾರಕ್ಕೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಪಟ್ಟಣದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಭಾಗ್ಯನಗರ ಕರವೇ ಘಟಕದ ವತಿಯಿಂದ  ರೈಲ್ವೆ ಮಾರ್ಗಕ್ಕಾಗಿ ಒಂದು ದಿವಸ ಉಪವಾಸ ಸತ್ಯಗ್ರಹವನ್ನು ಹಮ್ಮಿಕೊಳ್ಳಲಾಗಿದ್ದು ತಾಯಿ ಭುವನೇಶ್ವರಿ ಮಾತೆಗೆ ಪುಷ್ಪರ್ಚನೆ ಮಾಡುವ ಮೂಲಕ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಬಾಗೇಪಲ್ಲಿ ಬಯಲು ಸೀಮೆ ಪ್ರದೇಶವಾಗಿದ್ದು ಇಲ್ಲಿಂದ ದೂರದ ಪ್ರಯಾಣ ಮಾಡುವಂತಹ ಕೂಲಿ ಕಾರ್ಮಿಕರಿಗೆ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಓಡಾಟದಿಂದ ಬಹಳ ತೊಂದರೆಯಾಗುತ್ತಿದ್ದು, ಪ್ರಯಾಣದಲ್ಲೇ ಅತ್ಯಂತ ಕಡಿಮೆ ವೆಚ್ಚದ ಪ್ರಯಾಣವಾಗಿರುವಂಥ ರೈಲು ಮಾರ್ಗವು ಸ್ವಾತಂತ್ರ್ಯ ಬಂದು 79 ವರ್ಷವಾದರೂ ಕೂಡ ಈ ಭಾಗಕ್ಕೆ ರೈಲು ಮಾರ್ಗ ಆಗದೆ ಇರುವುದು ವಿಪರ್ಯಾಸವಾಗಿದೆ ಹಾಗಾಗಿ ಈಗೇನು ಕೇಂದ್ರ ಸರ್ಕಾರ ಈ ಭಾಗಕ್ಕೆ 2009 ರಲ್ಲಿ ರೈಲು ಮಾರ್ಗವನ್ನು ಘೋಷಣೆ ಮಾಡಿದಿಯೋ ಅದು ಏನಾದರೂ ಈ ಭಾಗಕ್ಕೆ ಆದರೆ ಇಲ್ಲಿನ ಬಡ ಜನರಿಗೆ ವಿದ್ಯಾರ್ಥಿಗಳಿಗೆ ದೂರದ ಪ್ರಯಾಣವು ಕಡಿಮೆ ವೆಚ್ಚದಲ್ಲಿ ಮುಗಿಯುತ್ತದೆ. ಅದರ ಜೊತೆಗೆ ರೈಲು ಮಾರ್ಗ ಬಂದ ನಂತರ ಈ ಕಡೆ ಒಂದಷ್ಟು ಅಭಿವೃದ್ಧಿ ಆಗಲಿಕ್ಕೆ ಸಾಧ್ಯ ಆಗುತ್ತದೆ. ಹಾಗಾಗಿ ದಯವಿಟ್ಟು ಈ ಕೂಡಲೇ ಸಂಬಂಧಪಟ್ಟಂತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇದರ ಕಡೆ ಗಮನಹರಿಸಿ ಈ ರೈಲು ಮಾರ್ಗವು ಆದಷ್ಟು ಬೇಗನೆ ಪುಟ್ಟಪರ್ತಿಯಿಂದ ವಯಾ ಬಾಗೇಪಲ್ಲಿ ಮೇಲೆ ಚಿಕ್ಕಬಳ್ಳಾಪುರ ತಲುಪುವಂತೆ ಮಾರ್ಗ ಏನಿದೆ ಅದರ ಸ್ಕೆಚ್ ಕಾಪಿ ಕೂಡ ನಮ್ಮ ಬಳಿ ಇದ್ದು ತಾವು ಇದರ ಅನುಸಾರ ಈ ರೈಲು ಮಾರ್ಗ ಆಗಲಿಕ್ಕೆ ಆದಷ್ಟು ಬೇಗ ಕ್ರಮವಹಿಸಲು ಕರ್ನಾಟಕ ರಕ್ಷಣಾ ವೇದಿಕೆ ತಮ್ಮಲ್ಲಿ ಆಗ್ರಹಿಸುತ್ತದೆ ಎಂದು ತಿಳಿಸಿದರು

ಈ ಸಂಧರ್ಭದಲ್ಲಿ ಕರವೇ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಿಯಾಜ್ಉಲ್ಲಾ, ತಾಲ್ಲೂಕು ಉಪಾಧ್ಯಕ್ಷರು ಅಲೀಮ್, ಜಿಲ್ಲಾ ಮಹಿಳಾ ಅಧ್ಯಕ್ಷರು ಸುಜಾತಮ್ಮ, ತಾಲ್ಲೂಕು ಮಹಿಳಾ ಅಧ್ಯಕ್ಷರು ಗಂಗರತ್ನಮ್ಮ, ತಾಲ್ಲೂಕು ಉಪಾಧ್ಯಕ್ಷರು ರಘು, 
ನಗರ ಘಟಕ ಅಧ್ಯಕ್ಷರು ಜಾನಿ,ಜಿಲ್ಲಾ ಉಪಾಧ್ಯಕ್ಷರು ರಾಮರೆಡ್ಡಿ, ತಾಲ್ಲೂಕು ಸಂಚಾಲಕರು ಶಿವಕುಮಾರ್, 
ತಾಲ್ಲೂಕು ಕಾರ್ಯದರ್ಶಿ ಮಂಜುನಾಥ ನಾಯ್ಕ, 
ಜಿಲ್ಲಾ ಸಂಚಾಲಕರು ನರಸಿಂಹಮೂರ್ತಿ, 
ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಶಂಕರ್, ಕಾರ್ಮಿಕ ಘಟಕ ಅಧ್ಯಕ್ಷರು ಶಂಕರ್, ಅನ್ವರ್, ಬಾಬಾ, ರಹಮತ್ತುಲ್ಲಾ, ಮಂಜುನಾಥ, ರಾಜೇಶ್ವರಿ, ಜರೀನಮ್ಮ, ಚಾಂದ್ ಬಾಷ, ಅನಿಲ್, ಆಕೀಲ್, ಜಬಿ, ವೆಂಕಟೇಶ್, ಶಿವಪ್ಪ, ವಿದ್ಯಾರ್ಥಿ ಘಟಕ ಅಧ್ಯಕ್ಷರು ಗಂಗರಾಜು, ನವೀನ್, ವಿದ್ಯಾರ್ಥಿ ಘಟಕ ಪ್ರಧಾನ ಕಾರ್ಯದರ್ಶಿ ರಾಮಾಂಜಿ, ಕಿರಣ್ ಕುಮಾರ್, ಹಾಗೂ ಮತ್ತಿತರು ಇದ್ದರು.... ವರದಿ ಸುಬ್ಬು ಭಾಗ್ಯನಗರ

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456