ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ 

Aug 5, 2025 - 17:05
 0  12
ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ 
ಬೆಂಗಳೂರು: ಪ್ರಕಾಶನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಅಂಗವಾಗಿ ಆಗಸ್ಟ್ 7 ರಿಂದ 13ರ ವರೆಗೆ "ಆರಾಧನಾ ಸಪ್ತಾಹ" ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು (ಪ್ರತಿದಿನ ಸಂಜೆ 7-00ಕ್ಕೆ): ಆಗಸ್ಟ್ 7ರಂದು "ದಾಸರ ಪದಗಳ ಗಾಯನ"-ಕುಮಾರಿಯರಾದ ಮನಸ್ವಿ ಜಿ. ಕಶ್ಯಪ್, ಅನನ್ಯ ಬೆಳವಾಡಿ, ದೀಪ್ತಿ ಶ್ರೀನಿವಾಸನ್, ಶ್ರೇಯಾ ರಾವ್ ಮತ್ತು ನಿಶಿತಾ ಪ್ರಸಾದ್. ಕೀ-ಬೋರ್ಡ್ : ಶ್ರೀ ಟಿ.ಎಸ್. ರಮೇಶ್, ತಬಲಾ : ಶ್ರೀ ಮಧುಸೂದನ್ ಕೊಪ್ಪ. ಆಗಸ್ಟ್ 8ರಂದು : ವಿದ್ವಾನ್ ಮೈಸೂರು ರಾಮಚಂದ್ರಾಚಾರ್ ಮತ್ತು ಸಂಗಡಿಗರಿಂದ "ದಾಸವಾಣಿ". ಆಗಸ್ಟ್ 9ರಂದು : ವಿದುಷಿ ರೂಪಶ್ರೀ ಮಧುಸೂದನ್ ಮತ್ತು ಸಂಗಡಿಗರಿಂದ "ಭರತನಾಟ್ಯ ಪ್ರದರ್ಶನ". ಆಗಸ್ಟ್ 10ರಂದು : ವಿದ್ವಾನ್ ಶಶಾಂಕ್ ಎಸ್. ಗಿರಿ ಮತ್ತು ಸಂಗಡಿಗರಿಂದ "ಕೊಳಲು ವಾದನ". ಆಗಸ್ಟ್ 11ರಂದು : ವಿದುಷಿ ಇಂದು ನಾಗರಾಜ್ ಹಾಗೂ ವಿದುಷಿ ಲಕ್ಷ್ಮೀ ನಾಗರಾಜ್ ಮತ್ತು ಸಂಗಡಿಗರಿಂದ "ಹರಿನಾಮ ಸಂಕೀರ್ತನೆ". ಆಗಸ್ಟ್ 12ರಂದು : ವಿದುಷಿ ನಂದಿನಿ ಗುಜಾರ್ ಮತ್ತು ಸಂಗಡಿಗರಿಂದ "ಹರಿದಾಸ ಮಂಜರಿ".
ದಿನಾಂಕ 13-8-2025, ಬುಧವಾರ : ಬೆಳಗ್ಗೆ 9-00ಕ್ಕೆ ಸೋಸಲೆ ಶ್ರೀ ವ್ಯಾಸರಾಜ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದಂಗಳವರ ಅಧ್ಯಕ್ಷತೆಯಲ್ಲಿ ಪವನ ಪರಿಮಳ ಪ್ರಸಿರಿಣೀ ಸಭಾ ವಾಚಿಕ ಪರೀಕ್ಷೆಗಳು, ವಿದ್ಯಾರ್ಥಿಗಳಿಂದ ಶಾಸ್ತ್ರಾನುವಾದ. ಸಂಜೆ 6-30ಕ್ಕೆ ಆರಾಧನಾ ಸಮಾರೋಪ ಸಮಾರಂಭ : ವಿದ್ಯಾರ್ಥಿಗಳಿಗೆ ದಿ|| ನಂದಗುಡಿ ರಾಮಚಂದ್ರ ರಾವ್ ಸ್ಮಾರಕ ಪಾರಿತೋಷಕ ವಿತರಣೆ. ವಿದ್ವಾಂಸರಾದ ಶ್ರೀ ರಾಮವಿಠಲಾಚಾರ್ಯ ಮತ್ತು ಡಾ|| ಹೆಚ್. ಸತ್ಯನಾರಾಯಣಾಚಾರ್ಯ ಇವರಿಂದ ಉಪನ್ಯಾಸ. ನಂತರ ಶ್ರೀಪಾದಂಗಳವರ ಅನುಗ್ರಹ ಸಂದೇಶ ಮತ್ತು ಫಲ ಮಂತ್ರಾಕ್ಷತೆ ವಿತರಣೆ. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಪ್ರಕಾಶನಗರ, ಬೆಂಗಳೂರು-560021

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456