ಸಂಗೀತ ಪ್ರಿಯರ ಮನಸೂರೆಗೊಂಡ ಶಿಶಿರ ಗಾಯನ 

Jul 26, 2025 - 10:32
 0  4
ಸಂಗೀತ ಪ್ರಿಯರ ಮನಸೂರೆಗೊಂಡ ಶಿಶಿರ ಗಾಯನ 
ಬೆಂಗಳೂರು: ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ (ಜುಲೈ 24ರಂದು) ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯುವಪ್ರತಿಭೆ ಶ್ರೀ ಶಿಶಿರ ಕೆ.ಪಿ. ಅವರು ಅಪರೋಕ್ಷ ಜ್ಞಾನಿಗಳಿಂದ ರಚಿಸಲ್ಪಟ್ಟ ಅಪರೂಪದ ಹರಿದಾಸರ ಪದಗಳ ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಶ್ರೀ ಪುರಂದರದಾಸರ "ಗಜವದನ ಬೇಡುವೆ" ಎಂಬ ವಿಘ್ನನಿವಾರಕನ ಕೃತಿಯೊಂದಿಗೆ ಗಾಯನ ಆರಂಭಿಸಿದ ಶಿಶಿರ "ಗುರು ರಾಘವೇಂದ್ರರ ಚರಣ ಕಮಲವನ್ನು" (ಗೋಪಾಲದಾಸರು),
"ವಾಸುದೇವನ ಚರಣ" (ಪುರಂದರದಾಸರು), "ಶಿವನೇ ನಾ ನಿನ್ನ ಸೇವಕನಯ್ಯ (ಶ್ರೀಧವಿಠ್ಠಲದಾಸರು), "ನಂಬಿದೆ ನಿನ್ನ ಪಾದವ" (ಗುರು ವಿಜಯವಿಠ್ಠಲದಾಸರು), "ಬಾರೆ ಭಾಗ್ಯದ ನಿಧಿಯೇ" (ಅನಂತಾದ್ರೀಶದಾಸರು), 
"ಸ್ಮರಣೆ ಒಂದೇ ಸಾಲದೆ ಗೋವಿಂದನ" (ಪುರಂದರದಾಸರು), "ಬನ್ನಿ ಮುರಳಿಯ ನಾದವ ಕೇಳಿ" (ಶ್ರೀ ವಿದ್ಯಾಪ್ರಸನ್ನತೀರ್ಥರು), "ಈ ಪರಿಯ ಸೊಬಗಾವ ದೇವರಲಿ ನಾ ಕಾಣೆ" (ಪುರಂದರದಾಸರು), "ನಾರಸಿಂಹ ಶ್ರೀ ನಾರಸಿಂಹ" (ಶ್ರೀ ಸಂಕರ್ಷಣ ಒಡೆಯರು),:"ಶ್ರೀಪತಿಯ ಕಟಾಕ್ಷ ವೀಕ್ಷಣ" (ಪುರಂದರದಾಸರು),
"ಆಡಿದನೋ ರಂಗ"(ಪುರಂದರದಾಸರು)
"ಕರೆದು ತಾರೆಲೆ ರಂಗನ"(ಶ್ರೀ ವ್ಯಾಸರಾಜರು), "ಕರುಣಿಸೋ ರಂಗ ಕರುಣಿಸೋ" (ಪುರಂದರದಾಸರು), "ಶ್ರೀನಿಕೇತಾನ ಪಾಲಯಮಾಂ" (ಜಗನ್ನಾಥದಾಸರು), "ಕರಿಯ ಕಾಯ್ದವನ" (ಶ್ರೀ ವಾದಿರಾಜರು), "ನೀ ಕರುಣಿಸೋ ವಿಠ್ಠಲ" (ಪ್ರಸನ್ನ ವೆಂಕಟದಾಸರು), "ಹರೇ ವಿಠ್ಠಲ ಪಾಂಡುರಂಗ" (ವಿಜಯದಾಸರು) ಕೃತಿಗಳನ್ನು ಪ್ರಸ್ತುತ ಪಡಿಸಿ, ಸಂದರ್ಭಕ್ಕೆ ತಕ್ಕಂತೆ ಕೆಲವು ಉಗಾಭೋಗಗಳನ್ನೂ ಹಾಡಿದ್ದು ಅಂದಿನ ಕಾರ್ಯಕ್ರಮಕ್ಕೆ ಮೆರುಗು ತಂದುಕೊಟ್ಟಿತು. ಇವರ ಗಾಯನಕ್ಕೆ ಕು|| ಸಂಸ್ಕೃತಿ ಎಸ್. ಬಾಣಾವರ್ (ಹಾರ್ಮೋನಿಯಂ), ಶ್ರೀ ಅವೀಕ್ಷಿತ್ ಶ್ರೀನಿವಾಸನ್ (ತಬಲಾ) ಮತ್ತು ಕು|| ಇಂಚರ ಎಸ್.ಆರ್ (ತಾಳ) ಸಾಥ್ ನೀಡಿದರು. ಎಲ್ಲಾ ಕಲಾವಿದರೂ ಭಕ್ತಿಭಾವಪರವಶರಾಗಿ ಕಾರ್ಯಕ್ರಮವನ್ನು ಗುರುಗಳಿಗೆ ಸಮರ್ಪಣೆ ಮಾಡಿದರು.
ಶ್ರೀಮಠದ ವಿಚಾರಣಾಕರ್ತರಾದ ಶ್ರೀ ಗಿರಿರಾಜಾಚಾರ್ಯರು ಕಲಾವಿದರನ್ನು ಸನ್ಮಾನಿಸಿ, ಗುರುಗಳ ಪ್ರಸಾದವನ್ನು ನೀಡಿ. ಶುಭಕೋರಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456