ಸಂವಿಧಾನದ ಆಶಯಗಳಿಗೆ ತಕ್ಕಂತೆ ವಿವಿಧ ಬೇಡಿಕೆಗಳು ಈಡೇರಿಸುವಂತೆ ಬಾಗೇಪಲ್ಲಿ ವಕೀಲರು ಒತ್ತಾಯ
ಬಾಗೇಪಲ್ಲಿ: ವಕೀಲರ ಸಮಸ್ಯೆಗಳ ಹಾಗೂ ಸವಾಲುಗಳ ಕುರಿತು ನ್ಯಾಯಾಂಗ ಘನತೆಯನ್ನು ಸಂವಿಧಾನದ ಆಶಯಗಳಿಗೆ ತಕ್ಕಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಿರಿಯ ವಕೀಲಎ.ಜಿ.ಸುಧಾಕರ್ ಒತ್ತಾಯಿಸಿದ್ದಾರೆ.
ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ನ್ಯಾಯಾಲಯದ ಕಾರ್ಯಕಲಾಪಗಳಿಂದ ದೂರ ಉಳಿದು ಸಹಿ ಸಂಗ್ರಹಣೆ ಮಾಡಿ ಡಿವಿಜಿ ಮುಖ್ಯ ರಸ್ತೆ ಮೂಲಕ ಮೆರವಣಿಗೆ ನಡೆಸಿ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಶಿರಸ್ತೇದಾರ್ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಿದರು.
ನಂತರ ಮಾತನಾಡಿದ ಹಿರಿಯ ವಕೀಲಎ.ಜಿ.ಸುಧಾಕರ್ ಅವರು,ಪೊಲೀಸರ ಏಕೆ ಪಕ್ಷ ವರ್ತನೆಗಳಿಂದ ವಕೀಲರಿಗೆ ರಕ್ಷಣೆ ನೀಡಬೇಕು,ಮತ್ತು ವಕೀಲರ ಸಂರಕ್ಷಣೆ ಕಾಯ್ದೆ 2024ಕ್ಕೆ ತಿದ್ದುಪಡಿ ಆಗಬೇಕು,ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯದ ಮಾರ್ಗಸಚಿಗಳನ್ನು ತಪ್ಪದೆ ಪಾಲಿಸಬೇಕು,ಅವೈಜ್ಞಾನಿಕ ಅಖಿಲ ಭಾರತ ಪರೀಕ್ಷೆ ರದ್ದುಪಡಿಸಬೇಕು ಕಿರಿಯ ವಕೀಲರಿಗೆ ಎರಡು ವರ್ಷಗಳ ಕಾಲ 10,000 ಸಹಾಯಧನ ರಾಜ್ಯದ ಎಲ್ಲಾ ತಾಲೂಕು ವಕೀಲ ಸಂಘಗಳಿಗೆ ವರ್ಷಕ್ಕೆ 5 ಲಕ್ಷ ಅನುದಾನ ನೀಡಬೇಕು.
ಜಿಲ್ಲಾ ವಕೀಲ ಸಂಘಗಳಿಗೆ 10 ಲಕ್ಷ ಅನುದಾನ ನೀಡಬೇಕು ರಾಜ್ಯ ಸರ್ಕಾರವು ವಕೀಲರಿಗೆ ಕಡ್ಡಾಯವಾಗಿ ವೈದ್ಯಕೀಯ ಮತ್ತು ಜೀವ ವಿಮೆ ಸೌಲಭ್ಯಗಳನ್ನು ಒದಗಿಸಬೇಕು ವಕೀಲರಿಗೆ ಟೋಲ್ ಶುಲ್ಕ ರಹಿತ ಪ್ರಯಾಣ ಅವಕಾಶ ಕಳಿಸಬೇಕು ಹಾಗೂ ಮುಖ್ಯವಾಗಿ ಮಹಿಳಾ ವಕೀಲರಿಗೆ ಶೇಕಡ 33ರಷ್ಟು ಮೀಸಲಾತಿ ನೀಡಬೇಕು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿ ಅನುಸಾರ ಪ್ರಾಥಮಿತ್ಯ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ತಿಳಿಸಿದರು..
ವಕೀಲರ ಸಂಘದ ಉಪಾಧ್ಯಕ್ಷ ರವಿ ಮಾತನಾಡಿ ಅಖಿಲ ಭಾರತ ವಕೀಲರ ಒಕ್ಕೂಟ ರಾಜ್ಯ ಸಮಿತಿ ನೇತೃತ್ವದಲ್ಲಿ ರಾಜ್ಯದ ಎಲ್ಲಾ ತಾಲೂಕುಗಳಲ್ಲಿನ ವಕೀಲರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತಾಲೂಕು ಶಿರಸ್ತೆದಾರ್ ಮಂಜುನಾಥ್ ಅವರಿಗೆ ಮನವಿ ಪತ್ರ ನೀಡುತ್ತಿದ್ದೇವೆ ಎಂದರು.
ಇದಕ್ಕೂ ಮುನ್ನ ನ್ಯಾಯಾಲಯದ ವಕೀಲರ ಸಂಘದ ಆವರಣದಲ್ಲಿ ಗುಜರಾತಿನ ಅಲಹಾಬಾದ್ ನಲ್ಲಿ ನಡೆದ ಘೋರ ವಿಮಾನ ದುರಂತದಲ್ಲಿ ಮಡಿದಂತಹ ಎಲ್ಲರಿಗೂ ಕೆಳಕಾಲ ಶ್ರದ್ಧಾಂಜಲಿ ಘಟಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಜಯಪ್ಪ, ಖಜಾಂಚಿ ಬಿಂದು ಕುಮಾರಿ, ರಾಜ್ಯ ಸಮಿತಿ ಸದಸ್ಯ ಅರುಣ, ಕರುಣಸಾಗರೆಡ್ಡಿ, ಮಂಜುನಾಥ, ನಾಗಭೂಷಣ್, ಬಾಲನಾಯಕ್, ಚಂದ್ರಶೇಖರ್, ಲಕ್ಷ್ಮಣರೆಡ್ಡಿ, ರಾಧಾಕೃಷ್ಣ, ನರಸಿಂಹಮೂರ್ತಿ, ಸತ್ಯನಾರಾಯಣರಾವ್, ಜೆ.ಎನ್. ನಂಜಪ್ಪ, ನೂರಾರು ವಕೀಲರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
