ಸಮಾರೋಪ ಸಮಾರಂಭ

Nov 22, 2025 - 12:42
 0  7
ಸಮಾರೋಪ ಸಮಾರಂಭ

  ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಮಲ್ಲೇಶ್ವರದ ಈಜುಕೊಳ ಬಡಾವಣೆಯ ಸುಧೀಂದ್ರನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನವೆಂಬರ್ 18 ರಿಂದ 4 ದಿನಗಳ ಕಾಲ ಏರ್ಪಡಿಸಿದ್ದ ಕಾರ್ಯಕ್ರಮದ ಸಮಾರೋಪ ಸಮಾರಂಭವು ನವೆಂಬರ್ 21 ರಂದು ಜರುಗಿತು.
ಮೊದಲ ಮೂರು ದಿನಗಳು ವಿವಿಧ ಭಜನಾ ಮಂಡಳಿಗಳಿಂದ "ಭಜನಾಮೃತ" ಮತ್ತು ಪಂ|| ಶ್ರೀ ಪ್ರಸನ್ನಾಚಾರ್ ತಂತ್ರಸಾರ ಇವರಿಂದ "ಕಾರ್ತೀಕ ಮಾಸ ಮಹಾತ್ಮೆ" ವಿಷಯವಾಗಿ ಉಪನ್ಯಾಸ ನಡೆಯಿತು. 21ರ ಸಂಜೆ ಯುವ ಗಾಯಕ ಶ್ರೀ ಪ್ರಾಣೇಶ್ ಪಿ‌. ಭಾರಧ್ವಾಜ್ ಸಂಕೀರ್ತನೆ ಕಾರ್ಯಕ್ರಮ ನಡೆಸಿಕೊಟ್ಟರು.

ಇವರಿಗೆ ಕೀಬೋರ್ಡ್ ವಾದನದಲ್ಲಿ ವಿದ್ವಾನ್ ಶ್ರೀ ರಾಜೇಂದ್ರ ಬೆಂಡೆ, ತಬಲಾ ವಾದನದಲ್ಲಿ ವಿದ್ವಾನ್ ಶ್ರೀ ಮಧುಸೂದನ್ ಕೊಪ್ಪ ಮತ್ತು ತಾಳದಲ್ಲಿ ಹಿರಿಯರಾದ ಶ್ರೀ ಗೋಪಿನಾಥದಾಸರು ಸಹಕರಿಸಿದರು.

ಟಿಟಿಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ಸ್ವಾಗತ ಮಾಡಿದರು. ಶ್ರೀಮಠದ ಪದಾಧಿಕಾರಿಗಳಲ್ಲೊಬ್ಬರಾದ ಶ್ರೀ ಪುರುಷೋತ್ತಮ ಅವರು ವಂದನಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು  ಶ್ರೀಮಠದ ಪದಾಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456