ಹಳೇ ಮೀಸಲಾತಿ ಜಾರಿಗೆ ಒತ್ತಾಯ: ಕೆಜಿಎಫ್‌ ಗ್ರಾಮಾಂತರದಿಂದ ಬೆಂಗಳೂರಿನತ್ತ ತೆರಳಿದ ಬಲಗೈ ಸಮುದಾಯದ ಮುಖಂಡರ ದಂಡು

Mar 25, 2026 - 21:30
 0  62
ಹಳೇ ಮೀಸಲಾತಿ ಜಾರಿಗೆ ಒತ್ತಾಯ: ಕೆಜಿಎಫ್‌ ಗ್ರಾಮಾಂತರದಿಂದ ಬೆಂಗಳೂರಿನತ್ತ ತೆರಳಿದ ಬಲಗೈ ಸಮುದಾಯದ ಮುಖಂಡರ ದಂಡು
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ಬೇತಮಂಗಲ: ಒಳಮೀಸಲಾತಿ ರಹಿತ ಹಳೇ ಮೀಸಲಾತಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟವು ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಲು ಕೆಜಿಎಫ್ ಗ್ರಾಮಾಂತರ ಭಾಗದ ನೂರಾರು ಮುಖಂಡರು ಹಾಗೂ ಕಾರ್ಯಕರ್ತರು ಇಂದು ರಾಜಧಾನಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು. 

ಕೆಜಿಎಫ್ ಗ್ರಾಮಾಂತರ ಪ್ರದೇಶದ ವಿವಿಧ ಗ್ರಾಮಗಳಿಂದ ಬೆಳಿಗ್ಗೆಯೇ ಒಂದೆಡೆ ಸೇರಿದ ಮುಖಂಡರು, ಸಮುದಾಯದ ಹಕ್ಕುಗಳ ರಕ್ಷಣೆಗಾಗಿ ಘೋಷಣೆಗಳನ್ನು ಕೂಗುತ್ತಾ ಬಸ್ ಗಳ ಮೂಲಕ ಸಮಾವೇಶಕ್ಕೆ ತೆರಳಿದರು.

ಈ ವೇಳೆ ಕೆಜಿಎಫ್ ಗ್ರಾಮಾಂತರ ಭಾಗದ ಬಲಗೈ ಸಮುದಾಯದ ಮುಖಂಡ ಸಾಮ್ರಾಟ್ ಕೃಷ್ಣ ಮೂರ್ತಿ ಮಾತನಾಡಿ, ಒಳಮೀಸಲಾತಿಯಿಂದ ಬಲಗೈ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಯಾವುದೇ ಬದಲಾವಣೆ ಇಲ್ಲದ ಹಳೇ ಮೀಸಲಾತಿ ಪದ್ಧತಿಯನ್ನೇ ಮುಂದುವರಿಸಬೇಕು ಎಂದರು ಆದ್ದರಿಂದ ಇಂದು ಬೆಂಗಳೂರಿನ ಪ್ರೀಡಮ್ ಪಾರ್ಕ್ ನಲ್ಲಿ ನಡೆಯಲಿರುವ ಬಲಗೈ ಸಮುದಾಯಗಳ ಒಕ್ಕೂಟ ಬೃಹತ್ ಪ್ರತಿಭಟನಾ ಸಮಾವೇಶಕ್ಕೆ ಕೆಜಿಎಫ್ ಗ್ರಾಮಾಂತರ ಬಾಗದಿಂದ ನೂರಾರು ಮುಖಂಡರು ಹಾಗೂ ಕಾರ್ಯಕರ್ತರು ಹೋಗುತ್ತಿದ್ದೇವೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಆರ್ .ಕೆಂಚಪ್ಪ, ರಾಧಾಕೃಷ್ಣ, ಸಾಮ್ರಾಟ್ ಕೃಷ್ಣಮೂರ್ತಿ, ಕೆ.ವಿ.ಸುಬ್ರಮಣಿ, ಶ್ರೀನಾಥ್ ನಾಸ್ತಿಕ್, ಚಂದ್ರಪ್ಪ , ಕೆ .ವಿ ಆನಂದ್, ಈಶ್ವರಪ್ಪ, ಶಿವಮಣಿ, ಸಂಜೆವಪ್ಪ, ಶ್ರೀನಿವಾಸ್, ಚಲಪತಿ ಸೇರಿದಂತೆ ನೂರಾರು ಬಲಗೈ ಸಮುದಾಯದ ಮುಖಂಡರು ಹಾಗೂ ಉಪಸ್ಥಿತರಿದ್ದರು.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456