*“ಹುನಗುಂದದಲ್ಲಿ ಕರವೇ ಗರ್ಜನೆ: ಬಸ್ ಸೇವೆ ಅವ್ಯವಸ್ಥೆಗೆ ವಿರೋಧವಾಗಿ ಘಟಕ ಬಂದ್ – ರಸ್ತೆಗಿಳಿದ ಕಾರ್ಯಕರ್ತರು”*
ಹುನಗುಂದ ನಗರದಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿರುವ ಬಸ್ ಸೇವೆಯ ಅವ್ಯವಸ್ಥೆಯನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ವತಿಯಿಂದ ಇಂದು ಪ್ರತಿಭಟನೆ ನಡೆಸಲಾಯಿತು. ನಗರಕ್ಕೆ ಬಸ್‌ಗಳು ಒಳಗಡೆ ಪ್ರವೇಶಿಸದಿರುವುದು, ಬಸ್ ತಂಗುದಾಣಗಳಲ್ಲಿ ನಿಲ್ಲದಿರುವುದು ಹಾಗೂ ಹೊಸ ಮಾರ್ಗಗಳಲ್ಲಿ ಬಸ್‌ಗಳನ್ನು ಓಡಿಸದಿರುವುದನ್ನು ವಿರೋಧಿಸಿ ಕರವೇ ಕಾರ್ಯಕರ್ತರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಘಟಕವನ್ನು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ವೇಳೆ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ, ಸಾರಿಗೆ ವ್ಯವಸ್ಥೆಯ ನಿರ್ಲಕ್ಷ್ಯವನ್ನು ಖಂಡಿಸಿದರು. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ತಕ್ಷಣ ಪರಿಹರಿಸಬೇಕು ಹಾಗೂ ನಗರಕ್ಕೆ ಸರಿಯಾದ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಬಳಿಕ ಸಂಬಂಧಿತ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಒತ್ತಾಯಿಸಿದರು.
ಈ ಹೋರಾಟದಲ್ಲಿ ಹುನಗುಂದ ತಾಲೂಕು ಅಧ್ಯಕ್ಷರಾದ ರೋಹಿತ ಬಾರಕೇರ, ಇಳಕಲ್ ತಾಲೂಕು ಅಧ್ಯಕ್ಷರಾದ ಅಶೋಕ್ ಪೂಜಾರಿ, ಜಹಿರ ಸಂಗಮಕರ್, ಹಸನ ಕಲಕಬಂಡಿ, ಹುಸೇನ್ ಸಂದಿಮನಿ, ಪ್ರವೀಣ ವಾಲಿಕಾರ, ಮಹೇಬೂಬ ಅಳ್ಳೊಳ್ಳಿ, ಮಹಮ್ಮದ, ರವಿ ಕೊಪ್ಪದ, ಬಸವರಾಜ್ ತಿಮ್ಮಾಪುರ, ಪ್ರಮೋದ ಬಿರಾದರ, ಶ್ರವಣ, ಮುತ್ತು ದಾಸರ ಸೇರಿದಂತೆ ಅನೇಕ ಕರವೇ ಕಾರ್ಯಕರ್ತರು ಭಾಗವಹಿಸಿದ್ದರು.
ಸಾರಿಗೆ ಇಲಾಖೆಯು ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
