"ಹೊಳಲು ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆದ ಶ್ರೀ ಪಾರ್ವತಮ್ಮ ತಾಯಿ ಹಬ್ಬ"

May 3, 2025 - 18:50
 0  13
"ಹೊಳಲು ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆದ ಶ್ರೀ ಪಾರ್ವತಮ್ಮ ತಾಯಿ ಹಬ್ಬ"

ಮಂಡ್ಯ.ತಾಲೂಕು   ಹೊಳಲು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ  ಶ್ರೀ ಮುನೇಶ್ವರ ಸ್ವಾಮಿ,  ಶ್ರೀ ಪಾರ್ವತಮ್ಮ ದೇವಿ, ಶ್ರೀ ದೊಡ್ಡಮ್ಮತಾಯಿ ಹಾಗೂ ಶ್ರೀ ಚಿಕ್ಕಮ್ಮ ದೇವಿ, ನೂತನ ದೇವಸ್ಥಾನವು ಇತ್ತೀಚೆಗೆ ಲೋಕಾರ್ಪಣೆಯಾಯಿತು.


ಆದ್ದರಿಂದ ಶ್ರೀ ಪಾರ್ವತಮ್ಮ ದೇವಿಗೆ ದೊಡ್ಡಪರಮಾಡಲು ಗ್ರಾಮದವರೆಲ್ಲರೂ ಸೇರಿ ಈ ದಿನ ನಿಗದಿಪಡಿಸಿ, ದೇವಸ್ಥಾನಕ್ಕೆ ವಿದ್ಯುತ್ ದೀಪ ಅಲಂಕಾರ ಹಾಗೂ ಅಮ್ಮನಿಗೆ ವಿಶೇಷ ಹೂವಿನ ಅಲಂಕಾರ ಪೂಜೆ ನೆರವೇರಿಸಿ. ಮಹಾ ಮಂಗಳಾರತಿ ನಂತರ  ಈ ದಿನ ಬೆಳಗ್ಗೆ 8:00 ಗಂಟೆಗೆ ದೇವಸ್ಥಾನದ ಆವರಣ (ಕೆರೆ ಏರಿ ಮೇಲೆ) ದೇವರಿಗೆ ಹೂ-ಹೊಂಬಾಳೆ ಅಲಂಕಾರ ಮಾಡಿ, ತಂಬಿಟ್ಟಿನ ಆರತಿಯೊಂದಿಗೆ  ಬಸವನ ಸಮೇತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹರಕೆ ಹೊತ್ತ ಮಕ್ಕಳು ಮಹಿಳೆಯರು ಆರತಿಯೊಂದಿಗೆ ದೇವಸ್ಥಾನಕ್ಕೆ ಮೆರವಣಿಗೆ ಮುಖಾಂತರ ಪೂಜೆ ಸಲ್ಲಿಸಲಾಯಿತು. ಶ್ರೀ ಪಾರ್ವತಮ್ಮ ದೇವಿಯ ಉತ್ಸವ ಮೂರ್ತಿಯನ್ನು ತಮಟೆ ನಕಾರಿಯೊಂದಿಗೆ ಗ್ರಾಮದಲ್ಲಿ ಮೆರೆಸಲಾಯಿತು.


ದೇವಸ್ಥಾನದ ಪದಾಧಿಕಾರಿಗಳಾದ ಶಿವರಾಮ ಮಾತನಾಡುತ್ತಾ ಗ್ರಾಮದವರೆಲ್ಲರೂ ಸೇರಿ ಈ ದಿನ ಪಾರ್ವತಮ್ಮನ ಹಬ್ಬ ಆಚರಿಸುತ್ತಿದ್ದೇವೆ ಗ್ರಾಮಕ್ಕು ದೇಶದ ಸೈನಿಕರಿಗೂ ಒಳ್ಳೆಯದಾಗಲಿ ಮತ್ತು ಮಳೆ, ಬೆಳೆ ,ಬರಲೆಂದು ಹೇಳಿದರು. ಶ್ರೀ ಮುನೇಶ್ವರಸ್ವಾಮಿ ದೇವಸ್ಥಾನ ಸಮಿತಿಯ ಪದಾಧಿಕಾರಿಗಳಾದ ಗುಡ್ಡಪ್ಪ ಸಂತೋಷ್, ಶಿವರಾಂ, ಪವನ್, ವೆಂಕಟೇಶ್ , ದೊಡ್ಡಸಿದ್ದಯ್ಯ , ಮಧು,  ಆನಂದ್, ಸಂತೋಷ್,  ಶಂಕರ್,  ಏಳುಮಲೈ, ಶಿವಣ್ಣ, , ನಾಗೇಶ್, ನವೀನ, ಹಾಗೂ ಹೊಳಲು ಗ್ರಾಮಸ್ಥರು ಉಪಸ್ಥಿತರಿದ್ದರು. ದೇವಸ್ಥಾನಕ್ಕೆ ಬಂದ ಭಕ್ತಾದಿಗಳಿಗೆ ರಾಗಿ ಮುದ್ದೆ,  ಚಿಕನ್ ಸಾರು,  ಕುರಿಮಾಂಸದ ಊಟ   (ಅನ್ನ ಸಂತರ್ಪಣೆ) ಏರ್ಪಡಿಸಲಾಗಿತ್ತು. ಈ ದೇವಸ್ಥಾನದ ಕಾರ್ಯಕ್ರಮಕ್ಕೆ ಹೊಳಲು ಗ್ರಾಮದವರು ಅಕ್ಕಪಕ್ಕದ ಗ್ರಾಮದವರುದೇವರ ಕುಲದವರು  ಹಾಜರಿದ್ದರು. 

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456