ಐಕನಹಳ್ಳಿ ಗ್ರಾಮ ದೇವತೆ ಐಕನಹಳ್ಳಿ ಅಮ್ಮನರವರ ಜಾತ್ರಾ ಮಹೋತ್ಸವ

Oct 23, 2025 - 12:03
 0  8
ಐಕನಹಳ್ಳಿ ಗ್ರಾಮ ದೇವತೆ ಐಕನಹಳ್ಳಿ ಅಮ್ಮನರವರ ಜಾತ್ರಾ ಮಹೋತ್ಸವ

ಚನ್ನರಾಯಪಟ್ಟಣ: ತಾಲೂಕಿನ ಗಡಿ ಗ್ರಾಮವಾದ ಐಕನಹಳ್ಳಿ ಗ್ರಾಮ ದೇವತೆ ಐಕನಹಳ್ಳಿ ಅಮ್ಮನರವರ ಜಾತ್ರಾ ಮಹೋತ್ಸವ ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಐಕನಹಳ್ಳಿ ಗ್ರಾಮದ ಅದಿದೇವತೆ ಐಕನಹಳ್ಳಿ ಅಮ್ಮನವರ ದೇವಾಲಯದಲ್ಲಿ ಮೂಲ ವಿಶೇಷ ಪೂಜೆಯನ್ನು ನೆರವೇರಿಸಿದ ನಂತರ ಸುಂದರವಾಗಿ ಅಲಂಕೃತಗೊಂಡಿದ್ದ ಬಂಡಿ ರಥಕ್ಕೆ ಪೂಜೆ ಸಲ್ಲಿಸಿ, ಮೇಕೆ ಮರಿಯನ್ನು ಬಲಿ ಕೊಟ್ಟು ಬಂಡಿ ರಥವನ್ನು ಎಳೆದುಕೊಂಡು ಅಮ್ಮನವರ ಸನ್ನಿಧಾನಕ್ಕೆ ಹೋಗಲಾಯಿತು. ದೇವಸ್ಥಾನದ ಸುತ್ತ ಮೂರು ಸುತ್ತು ಪ್ರದಕ್ಷಣೆ ಮಾಡಿದ ನಂತರ ಸಿಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಸುತ್ತಲ-ಮುತ್ತಲಿನ ಗ್ರಾಮಗಳಾದ ಐಕನಹಳ್ಳಿ, ತೂಳಸಿ, ಭದ್ರನಕೊಪ್ಪಲು, ಐಕನಹಳ್ಳಿ ಕೊಪ್ಪಲು ಇತರೆ ಗ್ರಾಮದ ಸಾವಿರಾರು ಭಕ್ತರು ಹಾಗೂ ವಿವಿಧ ರಾಜ್ಯಗಳಲ್ಲಿ ನೆಲೆಸಿರುವ ಲಕ್ಷ್ಮೀದೇವಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ಐಕನಹಳ್ಳಿಅಮ್ಮನ ಶಕ್ತಿ ಅಪಾರವಾದದ್ದು,
ಹುಚ್ಚಮ್ಮರ ಪಂಗಡದವರಿಂದ ಜಾತ್ರಾ ಮಹೋತ್ಸವದ ಈ ವರ್ಷದ  ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಗ್ರಾಮದಿಂದ ಬಂಡಿ ರಥವು ದೇವಾಲಯದ ಆವರಣಕ್ಕೆ ತಲುಪಿದ ನಂತರ ಭಕ್ತಾದಿಗಳ ಬಾಯಿ ಬೀಗ ತೆಗೆದ ನಂತರ ಸಿಡಿ ಜಾತ್ರೆ ಆರಂಭವಾಯಿತು.ಐಕನಹಳ್ಳಿ ಗ್ರಾಮದ ಭಕ್ತರು ಹಸಿರು ಬಂಡಿಯ ಮೂಲಕ ತಳಿಗೆಯನ್ನು ತಂದು ಅಮ್ಮನವರಿಗೆ ಅರ್ಪಿಸುತ್ತಾರೆ.
ಬಲಿ ಪಾಂಡಮಿ ದಿನದಂದು ನಡೆಯುವ ಐಕನಹಳ್ಳಿ ಅಮ್ಮ ಜಾತ್ರೆ ಮಹೋತ್ಸವ ತುಂಬಾ ಸಂಭ್ರಮ ಸಡಗರದಿಂದ ಸಂಪನ್ನಗೊಂಡಿತು.

What's Your Reaction?

Like Like 3
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456