ಕೆಜಿಎಫ್ ತಾಲೂಕಿಗೆ ಜಿಲ್ಲಾಧಿಕಾರಿಗಳು ಎಂ ರವಿ ಭೇಟಿ ಪ್ರಗತಿ ಪರಿಶೀಲನೆ

Jun 3, 2025 - 17:40
 0  6
ಕೆಜಿಎಫ್ ತಾಲೂಕಿಗೆ ಜಿಲ್ಲಾಧಿಕಾರಿಗಳು ಎಂ ರವಿ ಭೇಟಿ ಪ್ರಗತಿ ಪರಿಶೀಲನೆ

ಕೆಜಿಎಫ್: ಕೆಜಿಎಫ್ ತಾಲೂಕಿನಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು ಜಿಲ್ಲಾಧಿಕಾರಿಗಳು ಡಾ. ಎಂ. ರವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಅವರು ಕೆಜಿಎಫ್ ಕ್ಷೇತ್ರವನ್ನು ಶಾಸಕಿ ರೂಪಕಲಾ ಶಶಿಧರ್. ಅಭಿವೃದ್ಧಿಯ ಪದದತ್ತ ಕೊಂಡೊಯ್ಯುತ್ತಿದ್ದಾರೆ. ಅವರಿಗೆ ನಮ್ಮಿಂದ ಆಗುವ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದರು. ಈ ಆರ್ ಟಿ ಓ ಕಚೇರಿ ಆವರಣದಲ್ಲಿ ಡಿಜಿಟಲ್ ಟ್ರಾಕಿಂಗ್ ವ್ಯವಸ್ಥೆ ಅದ್ಭುತವಾಗಿ ಕಲ್ಪಿಸಿದ್ದಾರೆ. ಅದೇ ರೀತಿಯಾಗಿ ಅಂಬೇಡ್ಕರ್ ಮ್ಯೂಸಿಯಂ ನಿರ್ಮಾಣಕ್ಕೆ ಜಾಗ ಮೀಸಲಿದ್ದಾರೆ. ನಗರಸಭೆ ವತಿಯಿಂದ ರಾಜೇಶ್ ಕ್ಯಾಂಪ್ನಲ್ಲಿ ಹೈಟೆಕ್ ಸೌಲಭ್ಯಗಳನ್ನು ಒಳಗೊಂಡ ಅದ್ಭುತವಾದ 500ಕ್ಕೂ ಹೆಚ್ಚು ನಿವೇಶನಗಳನ್ನು ಬಡವರಿಗೆ ಹಂಚಲು ವ್ಯವಸ್ಥೆ ಕಲ್ಪಿಸಿದ್ದಾರೆ. ಇಂದಿರಾ ಕ್ಯಾಂಟೀನ್ ಅತಿ ಶೀಘ್ರದಲ್ಲಿ ಕಾರ್ಯರೂಪಕ್ಕೆ ಬರಲಿದೆ. ಜಿಲ್ಲಾ ಉಸ್ತುವಾರಿ ಸಚಿವರ ಮುಖಾಂತರ ಉದ್ಘಾಟನೆ ಮಾಡಲಾಗುತ್ತದೆ. ರಸ್ತೆಗಳ ಅಭಿವೃದ್ಧಿಯು ನಡೆಯುತ್ತಿದೆ. ಒಟ್ಟಾರೆಯಾಗಿ ಕೆಜಿಎಫ್ ತಾಲೂಕು ಅಭಿವೃದ್ಧಿ ಹೊಂದಿರುವುದು ನಿಜ ಎಂದರು. ನಮ್ಮ ಕೈಯಲ್ ಆಗುವ ಎಲ್ಲಾ ರೀತಿಯ ಸಹಕಾರವನ್ನು ಶಾಸಕರಿಗೆ ನೀಡುತ್ತೇವೆ. ಅತಿ ಶೀಘ್ರವಾಗಿ ಕೈಗಾರಿಕೆಗಳು ಪ್ರಾರಂಭವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಶಾಸಕಿ ರೂಪಕಲಾ ಶಶಿಧರ್. ನಗರ ಸಭೆ ಪೌರಾಯುಕ್ತರು. ಪವನ್ ಕುಮಾರ್. ನಗರಸಭೆ ಅಧ್ಯಕ್ಷರು ಇಂದಿರಾಗಾಂಧಿ ನಗರಸಭೆ ಸ್ಥಾಯಿ ಸಂಧಿ ಅಧ್ಯಕ್ಷರು ವಲ್ಲಳ್ಳ ಮುನಿಸ್ವಾಮಿ. ಎ.ಎ.ಇ. ಮಂಜುನಾಥ್. ಪಿಡಬ್ಲ್ಯೂ ಇಲಾಖೆ ರಾಜಶೇಖರ್. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ .ಅಂಜಲಿ ನಗರಸಭೆ ಸದಸ್ಯರು ಮಾಣಿಕ್ಯಂ. ಪ್ರವೀಣ್. ಇದ್ದರು

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456