ಕೆ.ಜಿ.ಎಫ್ ತಾಲ್ಲೂಕು ಆಡಳಿತ ವತಿಯಿಂದ ಶಿಕ್ಷಕರ ಗೌರವ ಧನ ನೀಡಲು ವಿಳಂಬ-ಶಿಕ್ಷಕರ ಅಸಮಾಧಾನ
ಕೆ.ಜಿ.ಎಫ್: ರಾಜ್ಯ ಸರ್ಕಾರ ಕಳೆದ ಬೇಸಿಗೆ ರಜೆಯಲ್ಲಿ ಪರಿಶಿಷ್ಟ ಜಾತಿಗಳ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆ ನಡೆಸಲು ಪ್ರಾಥಮಿಕ ಶಾಲಾ ಶಿಕ್ಷಕರನ್ನು ನಿಯೋಜಿಸಿತ್ತು. ಇದರಿಂದ ಶಿಕ್ಷಕರಿಗೆ ಹಲವಾರು ಸಮಸ್ಯೆಗಳು ಎದುರಾಗಿತ್ತು. ಆದರೂ ಸಹ ಪ್ರತಿಯೊಬ್ಬರೂ ಎಂತಹದೇ ಕಠಿಣ ಸಮಸ್ಯೆಯಾದರೂ ತಮ್ಮ ಕುಟುಂಬವನ್ನು ಬಿಟ್ಟು ಬಿಸಿಲು, ಗಾಳಿಯನ್ನದೆ ಸಮೀಕ್ಷಾ ಕಾರ್ಯದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿರುತ್ತಾರೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಪಿ.ವಿ. ಶ್ರೀನಿವಾಸ್ ಹೇಳಿದರು.ಆದರೆ ಇದುವರೆಗೂ ನಮಗೆ ನೀಡುವ ಗೌರವಧನ ನಮ್ಮ ಖಾತೆಗಳಿಗೆ ಜಮಾ ಆಗಿಲ್ಲ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಈಗಾಗಲೇ ಬೇರೆ ತಾಲ್ಲೂಕುಗಳಲ್ಲಿ ಸಮೀಕ್ಷೆಯಲ್ಲಿ ಪಾಲ್ಗೊಂಡ ಎಲ್ಲಾ ಶಿಕ್ಷಕರಿಗೆ ಎಸ್. ಸಿ. ಸಮೀಕ್ಷೆ ಗೌರವಧನ ನೀಡಲಾಗಿದೆ. ಆದರೆ ನಮ್ಮ ತಾಲ್ಲೂಕು ಆಡಳಿತ ವತಿಯಿಂದ ಸಮೀಕ್ಷೆಯ ಗೌರವಧನ ನಮ್ಮ ಖಾತೆಗಳಿಗೆ ಜಮಾ ಆಗದೇ ಇರುವುದು ನಮ್ಮ ದುರಾದೃಷ್ಟ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ರವಿಚಂದ್ರನಾಯ್ಡು ಮಾತನಾಡಿ ಶಿಕ್ಷಕರ ಮೇಲೆ ಒತ್ತಡ ಹೇರಬೇಡಿ, ಇದು ಮಕ್ಕಳ ಕಲಿಕೆ ಮೇಲೆ ಪ್ರಭಾವ ಬೀರುತ್ತದೆ. ಶಿಕ್ಷಕರ ಮೇಲೆ ಒತ್ತಡ ಹಾಕುವುದು ಕಡಿಮೆ ಮಾಡಿ. ಸಮೀಕ್ಷೆ ಮಾಡುವಾಗ ನಮ್ಮ ಮೇಲೆ ಅತಿಯಾದ ಒತ್ತಡ ಹಾಕಿದ ತಹಸೀಲ್ದಾರ್ ಅವರು ಇಂದು ಗೌರವಧನ ಬಿಡುಗಡೆ ಮಾಡುವಲ್ಲಿ ಆಸಕ್ತಿ ತೋರಿಸುತ್ತಿಲ್ಲ. ಶಿಕ್ಷಕರ ಬಗ್ಗೆ ಈ ಅಸಡ್ಡೆ ಏಕೆ? ನಮಗೆ ಸೇರಬೇಕಾದ ಗೌರವಧನವನ್ನು ಆದಷ್ಟು ಬೇಗ ನೀಡಿ. ಕಚೇರಿಯಲ್ಲಿ ಬಂದು ಕೇಳಿದಾಗ ಕೇಸ್ ವರ್ಕರ್ ಇದ್ರೆ ತಹಶೀಲ್ದಾರ್ ಇರೋದಿಲ್ಲ ಅವರಿದ್ದರೆ ಇವರಿರಲ್ಲ. ಹೀಗೆ ಮಾಡಿದರೆ ಹೇಗೆ, ಆದಷ್ಟು ಬೇಗ ನಮಗೆ ನೀಡುವ ಗೌರವದನವನ್ನು ನೀಡಿ. ನಿಮಗೆ ಮಾಹಿತಿ ಇಲ್ಲದಿದ್ದರೆ ಮೇಲಾಧಿಕಾರಿಗಳನ್ನು ವಿಚಾರಿಸಿ ಮಾಹಿತಿ ಪಡೆದುಕೊಳ್ಳಿ. ಶಿಕ್ಷಕರನ್ನು ಇದೇ ರೀತಿ ನೋಯಿಸಿದರೆ ಸರಿ ಇಲ್ಲ ಎಂದರು.
ಗೆನೇರಹಳ್ಳಿ ಶ್ರೀನಿವಾಸ ಮೂರ್ತಿ ಮಾತನಾಡಿ ಗೌರವಧನವನ್ನು ಬಿಡುಗಡೆ ಮಾಡಬೇಕೆಂದು ನಾವು ತಾಲೂಕು ಕಚೇರಿಯಲ್ಲಿ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೂ ತಹಸೀಲ್ದಾರ್ ರವರು ಸ್ಪಂದಿಸುತ್ತಿಲ್ಲ. ಈಗ ಪ್ರತಿಯೊಂದು ಕಾರ್ಯಗಳಿಗೆ ಸರ್ಕಾರ ನಮ್ಮನ್ನು ಬಳಸಿಕೊಳ್ಳುತ್ತಿದೆ. ಆದರೂ ಸಹ ನಾವು ಎಲ್ಲೂ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ಹಾಗಂತ ನಮಗೆ ಈ ರೀತಿ ಮಾಡೋದು ಸರಿ ಇಲ್ಲ. ಇದು ಹೀಗೆ ಮುಂದುವರೆದರೆ ಮುಂದಿನ ಕಾರ್ಯಕ್ರಮಗಳಿಗೆ ನಮ್ಮ ಸಹಕಾರ ಇರುವುದಿಲ್ಲ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ತೂಕಲ್ ಶ್ರೀನಿವಾಸ್, ಕೃಷ್ಣಮೂರ್ತಿ, ಸುಬ್ರಮಣಿ ಹಾಗೂ ವಿವಿಧ ವೃಂದಗಳ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
