ಕೆಜಿಎಫ್ ನಲ್ಲಿ ಜೆಡಿಎಸ್ ಪಕ್ಷದ ವತಿಯಿಂದ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು

Dec 21, 2025 - 15:49
 0  18
ಕೆಜಿಎಫ್ ನಲ್ಲಿ ಜೆಡಿಎಸ್ ಪಕ್ಷದ ವತಿಯಿಂದ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು

ಕೆಜಿಎಫ್: ನಗರದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಪಕ್ಷ ಸ್ಥಾಪನೆ ಮಾಡಿ 25 ವರ್ಷಗಳ ಪೂರೈಸಿದ ಹಿನ್ನೆಲೆಯಲ್ಲಿ ರಜತ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪಕ್ಷದ ಬಾವುಟಗಳನ್ನು ಹಿಡಿದು ಸಾವಿರಾರು ಕಾರ್ಯಕರ್ತರು ಸ್ವರ್ಣ ನಗರ ದಿಂದ ಗಾಂಧಿ ವೃತ್ತ ಹಾಗೂ ಸಲ್ದಾನ ವೃತ್ತದಿಂದ ಕಿಂಗ್ ಜಾರ್ಜ್ ಹಾಲ್ ವರೆಗೂ ಜಾಥ ಮೂಲಕ ಆಗಮಿಸಿ ಕೇಕ್ ಕಟ್ ಮಾಡುವ ಮೂಲಕಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು .

ಕಾರ್ಯಕ್ರಮದಲ್ಲಿ ರಾಜ್ಯ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಜೆ.ಕೆ. ಕೃಷ್ಣಾರೆಡ್ಡಿ ಮಾತನಾಡಿ ಜೆಡಿಎಸ್ ಪಕ್ಷ ತನ್ನದೇ ಆದ ಇತಿಹಾಸವನ್ನು ಹೊಂದಿದ್ದು. ಇಂದು 25 ವರ್ಷಗಳ ಪೂರೈಸಿದೆ. ಪಕ್ಷವನ್ನು ಕಟ್ಟಿ ಬೆಳೆಸಲು ಅಷ್ಟೊಂದು ಸುಲಭದ ಮಾತಲ್ಲ. ನಮ್ಮ ದೇವೇಗೌಡರು ಹಲವಾರು ಕಷ್ಟ ಪಟ್ಟಿದ್ದಾರೆ. ನಮ್ಮ ಪಕ್ಷದಲ್ಲಿ ಹಲವಾರು ಮುಖಂಡರು ಬಂದು ಬೆಳೆದು ಹೋಗಿದ್ದಾರೆ. ಹಲವಾರು ರಾಜಕೀಯ ಮುಖಂಡರು ಪಕ್ಷಗಳನ್ನು ಕಟ್ಟಿದ್ದಾರೆ ಆದರೆ ಯಾವುದು ಯಶಸ್ಸು ಕಂಡಿಲ್ಲ. ನಮ್ಮ ಜೆಡಿಎಸ್ ಪಕ್ಷ ಮಾತ್ರ ಯಶಸ್ಸು ಕಂಡು ರೈತರ ಹಾಗೂ ಬಡವರ ಕಾಳಜಿ ಬಗ್ಗೆ ಗಮನಹರಿಸಿ ಹಲವಾರು ಸಮಾಜ ಸೇವೆಗಳನ್ನು ಮಾಡಿರುವ ಪಕ್ಷ ಅಂದರೆ ಅದು ಏಕೈಕ ಪಕ್ಷ ನಮ್ಮ ಜೆಡಿಎಸ್ ಎಂದರು. 

ಮುಂದಿನ ಚುನಾವಣೆಯಲ್ಲಿ ನಮ್ಮ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಕುಮಾರಣ್ಣ ಮುಖ್ಯಮಂತ್ರಿ ಆಗಲ್ಲಿದ್ದಾರೆ ಎಂದು ಭವಿಷ್ಯ ನುಡಿದರು. 

ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿರುವ ಡಾ. ರಮೇಶ್ ಬಾಬು ಮಾತನಾಡಿ ಕ್ಷೇತ್ರದ ಬಗ್ಗೆ ನನಗೆ ಕಾಳಜಿ ಇದ್ದು, ಇಲ್ಲೇ ನಾನು ಮನೆಯನ್ನು ಪಡೆದು ಕ್ಷೇತ್ರದ ಜನರ ಕಷ್ಟ ಸುಖಗಳ ಬಗ್ಗೆ ಗಮನಹರಿಸುತ್ತೇನೆ. 

ಕ್ಷೇತ್ರದಲ್ಲಿ ಸುತ್ತಾಡಿ ಪಕ್ಷ ಸಂಘಟನೆಯನ್ನು ಮಾಡುತ್ತೇನೆ.

ಇಲ್ಲಿನ ಜೆಡಿಎಸ್ ಪಕ್ಷದ ಹಳೆಯ ಕಾರ್ಯಕರ್ತರು ನಮ್ಮ ನಡುವೆ ಕೆಲವೊಂದು ಬಿನ್ನಾಭಿಪ್ರಾಯಗಳಿಗೆ ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಿಕೊಂಡು ಪಕ್ಷವನ್ನು ಕಟ್ಟಲು ಶ್ರಮ ವಹಿಸುತ್ತೇನೆ ಎಂದರು. ಸಂದರ್ಭದಲ್ಲಿ ಜೆಡಿಎಸ್ ನ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456