ಕೆಜಿಎಫ್ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಶ್ರಾವಣ ಮಾಸದ ಪೂಜೆ
ಕೆಜಿಎಫ್: ನಗರದ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಶ್ರಾವಣ ಮಾಸದ 3ನೇ ಶನಿವಾರದ ಪ್ರಯುಕ್ತ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರಾವಣ ಮಾಸ ಪ್ರಯುಕ್ತ ದೇವಾಲಯಕ್ಕೆ ದೀಪದ ಅಲಂಕಾರಗಳು. ಹಸಿರು ತೋರಣಗಳಿಂದ ಮತ್ತು ಬಾಳೆ ಗಿಡಗಳಿಂದ ಅಲಂಕರಿಸಲಾಗಿತ್ತು. ಸ್ವಾಮಿಗೆ ಮೂಲ ವಿಗ್ರಹಕ್ಕೆ ಬೆಳಗಿನ ಅಭಿಷೇಕ. ವಿಶೇಷ ಹೂವುಗಳಿಂದ ಅಲಂಕಾರ. ಮಹಾಮಂಗಳಾರತಿ. ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.
ಭಕ್ತಾದಿಗಳು ದೇವರ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ನಿಂತು ದೇವರ ಕೃಪೆಗೆ ಪಾತ್ರರಾದರು.
ಮಾರುತಿ ಮಾರ್ಗದರ್ಶನ. ಅಧ್ಯಕ್ಷರು.ಎ. ಮುನಿಸ್ವಾಮಿ ಕುಟುಂಬದವರಿಂದ ಪ್ರತಿ ವರ್ಷದಂತೆ ಎರಡನೇ ಶ್ರಾವಣ ಶನಿವಾರ ಪ್ರಸಾದ ವಿನಿಯೋಗ ಮಾಡಲಾಯಿತು.
ಪೂಟ್ಟೆಪಲ್ಲಿ ಗ್ರಾಮದ ಮೇಸ್ತ್ರಿ ನಾರಾಯಣಸ್ವಾಮಿ ರವರ ಕುಟುಂಬದವರಿಂದ ದೇವಾಲಯಕ್ಕೆ ಹೂವು ಮತ್ತು ಬಾಳೆ ಗಿಡ ಅಲಂಕಾರ ಭಕ್ತಾದಿಗಳ ಪ್ರಸಾದ ವ್ಯವಸ್ಥೆ ಕಲ್ಪಿಸಿದರು. ನಂತರ ನಾರಾಯಣಸ್ವಾಮಿ ಮೇಸ್ತ್ರಿ ಮಾತನಾಡಿ ದೇವರ ಕಾರ್ಯಗಳಲ್ಲಿ ಪ್ರತಿಯೊಬ್ಬರೂ ಭಕ್ತಿಯಿಂದ ಭಾಗವಹಿಸಬೇಕು. ನಮ್ಮ ಕೈಯಲ್ಲಿ ಆಗುವ ಸಹಾಯ ಹಸ್ತ ನೀಡಬೇಕು. ನಮ್ಮ ಹಿಂದೂ ಸನಾತನ ಧರ್ಮವನ್ನು ರಕ್ಷಿಸಿ ಉಳಿಸಬೇಕು. ಪ್ರತಿಯೊಬ್ಬರೂ ತಮ್ಮ ಗ್ರಾಮದಲ್ಲಿ ಹಾಗೂ ನಗರಗಳಲ್ಲಿ ದೇವತಾ ಕಾರ್ಯಗಳಿಗೆ ತಮ್ಮ ಕೈಯಲ್ಲಿ ಆಗುವ ಆರ್ಥಿಕ ಸಹಾಯ ಮಾಡಬೇಕು ಎಂದು ಹೇಳಿದರು. ಅಂದಿನ ಕಾಲದಲ್ಲಿ ನಮ್ಮ ಹಿರಿಯರು ಕಟ್ಟಿರುವ ಹಳೆಯ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಸಾಕಾರ ನೀಡಬೇಕು. ಪ್ರತಿಯೊಂದು ಗ್ರಾಮದಲ್ಲೂ ದೇವಾಲಯಗಳು ತಲೆ ಎತ್ತಬೇಕು ಎಂದು ತಿಳಿಸಿದರು.
ದೇವಾಲಯದ ಪ್ರಮುಖ ಅರ್ಚಕರು ಆಗಿರುವ ರಂಜಿತ್ ರವರು ದೇವರಿಗೆ ವಿಶೇಷ ಅಲಂಕಾರಗಳನ್ನು ಮಾಡಿ ಭಕ್ತಾದಿಗಳಿಗೆ ಪ್ರಸಾದ ತೀರ್ಥವನ್ನು ನೀಡುವ ಮೂಲಕ ತಮ್ಮ ಸೇವೆ ಮುಂದುವರಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
