ಕೆಜಿಎಫ್ ಹೊಸ ಡಿಪೋ ಹಿಂಭಾಗದಲ್ಲಿ ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿರುವುದು

Oct 31, 2025 - 13:07
 0  5
ಕೆಜಿಎಫ್ ಹೊಸ ಡಿಪೋ ಹಿಂಭಾಗದಲ್ಲಿ ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿರುವುದು

  ಕೆಜಿಎಫ್: ನಗರದ ಹೊಸ ಡಿಪೋ ಹಿಂಭಾಗದಲ್ಲಿ ಚರಂಡಿಯ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿರುವುದು. ನಿವಾಸಿಗರು ಪ್ರಯಾಣಿಕರು ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರಸಭೆ ವತಿಯಿಂದ ವಾರ್ಡಿನಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ಮನೆಗಳ ಯುಜಿಡಿ ಮತ್ತು ಮಳೆ ನೀರು ರಸ್ತೆಗಾಗಿ ಇದರಿಂದ ಸಾಂಕ್ರಮಿಕ ರೋಗ ಹರಡುವ ಭೀತಿಯಿಂದ ಸಾರ್ವಜನಿಕರು ವಾಸ ಮಾಡುತ್ತಿದ್ದಾರೆ.

ಈ ಕೂಡಲೇ ನಗರಸಭೆ ಅಧಿಕಾರಿಗಳು ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಿ ಕೊಡಬೇಕು. ಚರಂಡಿ ನೀರು ರಸ್ತೆ ಹರಿಯದಂತೆ ಕ್ರಮ ಕೈಗೊಳ್ಳಬೇಕೆಂದು ದಲಿತ ರಕ್ಷಣಾ ವೇದಿಕೆ. ಜಿಲ್ಲಾಧ್ಯಕ್ಷರು. ಅನ್ಬಾರ್ಸನ್ ಒತ್ತಾಯಿಸಿದ್ದಾರೆ. 

ಕೆಜಿಎಫ್ ನಲ್ಲಿ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿ ನಗರಸಭೆ ವಿಫಲವಾಗಿದೆ. ಮೈನಿಂಗ್ ಪ್ರದೇಶದಲ್ಲಿ ಪಾರ್ಕ್ ಗಳು ನಿರ್ವಹಣೆ ಇಲ್ಲದೆ ಗಿಡ ಗಂಟೆಗಳು ಬೆಳೆದು ವಿಷ ಜಂತುಗಳ ಸ್ಥಾನವಾಗಿ ಪರಿಣಮಿಸಿದೆ. ನಗರ ಪ್ರದೇಶದಲ್ಲಿ ಎಲ್ಲಿ ನೋಡಿದರೂ ಕಸದ ರಾಶಿಯಲ್ಲಿ ಕಂಡು ಬರುತ್ತದೆ ನಗರಸಭೆ ವತಿಯಿಂದ ಬ್ಲಾಕ್ ಸ್ಪಾಟ್ ಗಳೆಂದು ಸಿಸಿ ಕ್ಯಾಮೆರಾ ಅಳವಡಿಸಿದ್ದರು.

ಯಾವುದೇ ಪ್ರಯೋಜನವಾಗಿಲ್ಲ ನೂರಾರು ಕೋಟಿಗಳು ಅನುದಾನ ಬಿಡುಗಡೆಯಾದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ಇನ್ನಾದರೂ ನಗರಸಭೆ ಪೌರಾಯುಕ್ತರು ಆಂಜನೇಯಲು. ನಗರ ಪ್ರದೇಶದಲ್ಲಿ ಪ್ರದಕ್ಷಣೆ ಮಾಡಿ ಕ್ರಮ ಕೈಗೊಳ್ಳಬೇಕು. ಮುಖ್ಯ ರಸ್ತೆಯ ಬದಿಗಳಲ್ಲಿ ಡಿವೈಡರ್ ಮೇಲೆ ಹುಲ್ಲು ಬೆಳೆದಿದೆ. ಗೌತಮ್ ನಗರ ಮರಿಯ ಹಾಸ್ಟೆಲ್ ಮುಂಬಾಗ ಫುಟ್ಬಾತ್ ನಲ್ಲಿ ಗಿಡಗಂಟಿಗಳು ಬೆಳೆದು ನಿಂತಿದೆ  ಇದೇ ರಸ್ತೆಯಲ್ಲಿ ನಗರಸಭೆ ಸದಸ್ಯರು. ನಗರಸಭೆ ಅಧಿಕಾರಿಗಳು ದಿನನಿತ್ಯ ಸಂಚಾರಿಸುತ್ತಾರೆ. ಇದು ಅವರಿಗೆ ಕಣ್ಣಿಗೆ ಕಾಣಿಸುವುದಿಲ್ಲವೇ ಎಂದು ಪ್ರಶ್ನಿಸಿದರು. ಇನ್ನಾದರೂ ನಗರ ಸಭೆ ಸ್ವಚ್ಛತಾ ಕಾರ್ಯವನ್ನು ಮಾಡಲಿ ಎಂದು ಒತ್ತಾಯಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456