ಪುತ್ರ ಚೇತನ್ ನಾಯ್ಡು ಜ್ಞಾಪಕರ್ತವಾಗಿ ಉದ್ಯಾನವನ ಸ್ಥಾಪಿಸಿದ-ಮುಖಂಡ ನರಸಿಂಹ ನಾಯ್ಡು

Feb 17, 2026 - 16:17
 0  10
ಪುತ್ರ ಚೇತನ್ ನಾಯ್ಡು ಜ್ಞಾಪಕರ್ತವಾಗಿ ಉದ್ಯಾನವನ ಸ್ಥಾಪಿಸಿದ-ಮುಖಂಡ ನರಸಿಂಹ ನಾಯ್ಡು
ವರದಿ ಸುಬ್ಬು ಭಾಗ್ಯನಗರ

    ಭಾಗ್ಯನಗರ: ಸರ್ಕಾರಿ ಶಾಲೆ ಆವರಣದಲ್ಲಿ ಸುಂದರ ಕಡಲತಡಿಯನ್ನು ಹೊಂದಿದ ಕೋಡಿಯಲ್ಲಿ ಸುಂದರ ಉದ್ಯಾನವನ ನಿರ್ಮಾಣಗೊಂಡಿದೆ ಇದು ನನಗೆ ಮತ್ತು ನಮ್ಮ ಕುಟುಂಬಕ್ಕೆ ನೆಮ್ಮದಿ ತಂದಿದೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ನಾನು ಸದಾ ಕೈ ಜೋಡಿಸುತ್ತೇನೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಬಿ.ಆರ್.ನರಸಿಂಹನಾಯ್ದು ತಿಳಿಸಿದ್ದಾರೆ.

ಪಟ್ಟಣದ ಸರ್ಕಾರಿ  ಪಿಎಂ ಶ್ರೀ ಶಾಲಾ ಆವರಣದಲ್ಲಿ ಚೇತನ್ ಪೌoಡೇಷನ್  ವತಿಯಿಂದ ನಿರ್ಮಿಸಿದ ನೂತನ ಉದ್ಯಾನವನವನ್ನು ಮಾಜಿ ಪುರಸಭೆ ಅಧ್ಯಕ್ಷ ಹಾಗೂ ಚೇತನ್ ಪೌoಡೇಷನ್  ಅಧ್ಯಕ್ಷೆ ವಿಂದ್ಯ  ಕಿಶೋರ್ ಕುಮಾರ್  ಉದ್ಘಾಟಿಸಿ ಮಾತನಾಡಿದ ಅವರು ಫ್ರೆಬ್ರವರಿ 16 ನಮ್ಮ ಪುತ್ರ ಚೇತನ್ ನಾಯ್ಡು ಜನ್ಮ ದಿನವಾಗಿದ್ದು.ಈಗ ಆತ ನಮ್ಮನ್ನೆಲ ಆಗಲಿ ಸ್ವರ್ಗಾಸ್ತರಾಗಿದ್ದರೆ ಅವರ ಒಂದು ಜ್ಞಾಪಕರ್ತವಾಗಿ ಚೇತನ್ ನಾಯ್ಡು ಪೌoಡೇಷನ್ ವತಿಯಿಂದ  ಅನೇಕ ಸಮಾಜಮುಖಿ ಕಾರ್ಯ ಕ್ರಮಗಳನ್ನು ಅಯೋಜಿಸಲಾಗುತ್ತಿದೆ. ಅದರಂತೆ ಪಟ್ಟಣದ ಪ್ರಸಿದ್ಧ ಶ್ರೀ ಶಿರಡಿ ಸಾಯಿ ಬಾಬಾ ದೇವಸ್ಥಾನದ ಆವರಣದಲ್ಲಿ ಒಂದು ಸುಂದರವಾದ ಉದ್ಯಾನವನ, ಪಟ್ಟಣದ ಮುಖ್ಯ ರಸ್ತೆಯಲ್ಲಿ ಮದ್ಯಾಭಾಗದಲ್ಲಿ ಸುಮಾರು 5 ಸಾವಿರ ಗಿಡಗಳನ್ನು ನೆಡಲಾಗಿದೆ,ಅದರಂತೆ ಅನೇಕ ದೇವಾಲಯಗಳ ನಿರ್ಮಾಣಕ್ಕೆ  ಆರ್ಥಿಕ ಸಹಾಯ ಮಾಡಲಾಗಿದೆ, ಆದರೆ ಇವೆಲ್ಲವೂ ನನಗೆ ತೃಪ್ತಿ ತಂದಿಲ್ಲ ಆದರೆ ಸರ್ಕಾರಿ ಶಾಲೆಯ ಮಕ್ಕಳಿಗಾಗಿ ನನ್ನ ಕೈಯಲ್ಲಿ ಆದ ಒಂದು ಸಣ್ಣ ಅನುಕೂಲ ಮಾಡಲು ನನಗೆ ಅವಕಾಶ ಲಭಿಸಿದೆ, ಇದು ನನಗೆ ನೆಮ್ಮದಿ ತಂದಿದೆ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲಾ ಮಕ್ಕಳಿಗಾಗಿ  ಯಾವ ರೀತಿಯ ಸಹಾಯವಾದರೂ ನಾನು ಸಿದ್ದನ್ನಾಗಿದ್ದೇನೆ, ಹಾಗೂ ಪಿ,ಯು,ಸಿ  ಪರೀಕ್ಷೆ ಯಲ್ಲಿ ಉತ್ತಮ ಅಂಕಗಳು ಪಡೆದ ಮೂವರು ವಿದ್ಯಾರ್ಥಿಗಳಿಗೆ  ಪ್ರತಿ ವರ್ಷ ನಮ್ಮ ಚೇತನ್ ಪೌoಡೇಷನ್ ವತಿಯಿಂದ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದರು.

ಚೇತನ್ ಪೌoಡೇಷನ್  ಅಧ್ಯಕ್ಷೆ ವಿಂದ್ಯ  ಕಿಶೋರ್ ಮಾತನಾಡಿ ನಾವು ನಮ್ಮ ಜೀವನದಲ್ಲಿ ಮರೆಯಲಾರದ ವ್ಯಕ್ತಿಗಳು ಮತ್ತು ಶಕ್ತಿಗಳು ಎಂದರೆ ತಪ್ಪಾಗಲಾರದು ಮೊದಲನೇದಾಗಿ ತಾಯಿ ಎರಡನೇದಾಗಿ ಗುರು,ತಾಯಿಗೆ ಮೊದಲು ನಾವು ಎಂದರೆ ತಾಯಿಯೇ ನಮ್ಮ ಪ್ರಥಮ ದೈವ, ಮೊದಲ ಗುರು ಮತ್ತು ಅತ್ಯಂತ ನಿಸ್ವಾರ್ಥ ಪ್ರೀತಿಯ ಜೀವ. ಆಕೆ ನಮ್ಮ ಬಾಳಿನ ಮೊದಲ ಪಾಠಶಾಲೆ, ನಮಗೆ ಜೀವನದ ಮೌಲ್ಯಗಳನ್ನು ಕಲಿಸಿ, ಬೆಳವಣಿಗೆಯ ಹಾದಿಯಲ್ಲಿ ಬೆನ್ನೆಲುಬಾಗಿ ನಿಲ್ಲುವವಳು ಮಾತೆ,ಮಾತು ಕಲಿಸಿದವಳು, ಆಸೆಗಳನ್ನು ಈಡೇರಿಸುವವಳು, ಆಕೆಯೇ ಮೊದಲ ಸ್ನೇಹಿತೆ ಹಾಗಾಗಿ ತಾಯಿಯನ್ನು ಗೌರವಿಸುವುದು ಮತ್ತು ಪ್ರೀತಿಸುವುದು ನಮ್ಮ ಅತ್ಯಂತ ಮುಖ್ಯ ಕರ್ತವ್ಯವಾಗಿದೆ, ಮುಖ್ಯವಾಗಿ ಮುಂದೆ ಗುರಿ, ಹಿಂದೆ ಗುರು ಎಂಬುದು ಜೀವನದಲ್ಲಿ ಯಶಸ್ಸು ಸಾಧಿಸಲು ಅತ್ಯಗತ್ಯವಾದ ಮಾರ್ಗದರ್ಶನವಾಗಿದೆ. ಇದರರ್ಥ ಭವಿಷ್ಯದ ಗುರಿ ಅಥವಾ ಧೇಯದ ಮೇಲೆ ಗಮನವಿರಬೇಕು ಮತ್ತು ನಮ್ಮನ್ನು ಸರಿಯಾದ ಹಾದಿಯಲ್ಲಿ ನಡೆಸುವ, ಜ್ಞಾನವನ್ನು ನೀಡುವ ಗುರು-ಶಿಕ್ಷಕರು ಮತ್ತು ಮಾರ್ಗದರ್ಶಕರು ನಮ್ಮ ಬೆನ್ನ ಹಿಂದೆ ಮಾರ್ಗದರ್ಶನಕ್ಕಾಗಿ ಇರಬೇಕು ಅವರನ್ನು ನಾವು ಗೌರವಿಸಬೇಕು,ಗುರಿ ನಮ್ಮನ್ನು ಉತ್ತೇಜಿಸಿದರೆ, ಗುರು ನಮ್ಮನ್ನು ತಿದ್ದಿ ತೀಡಿ ಸಾಧನೆಯ ಹಾದಿಯಲ್ಲಿ ಸಾಗುವಂತೆ ಶಕ್ತಿ ತುಂಬುತ್ತಾರೆ ಅಂತಃ ಮಹಾ ಶಕ್ತಿ ಹೊಂದಿರುವವರು ಗುರುಗಳು ಎಂದು ಮಕ್ಕಳಿಗೆ ತಾಯಿಯ ಪ್ರಾಮುಖ್ಯತೆ ಮತ್ತು ಗುರುವಿನ ಪ್ರದಾನ್ಯತೆ ಬಗ್ಗೆ ಪಾಠ ಮಾಡಿದರು.

ಪುರಸಭೆ ಉಪಾಧ್ಯಕ್ಷೆ ಸುಜಾತ ನರಸಿಂಹ ನಾಯ್ದು ಮಾತನಾಡಿ ಉದ್ಯಾನವನದಲ್ಲಿ ಮಕ್ಕಳ ಆಟಿಕೆ ಸಾಮಗ್ರಿಗಳ ಅಳವಡಿಕೆ ಕಾರ್ಯಕ್ರಮದಲ್ಲಿ ಮಕ್ಕಳ ಉಯ್ಯಾಲೆ ತೂಗಿ ಚಾಲನೆ ನೀಡಿ ಮಾತನಾಡಿದರು. ‘ಉದ್ಯಾನವನಗಳಿಗೆ ಜಾತಿ–ಧರ್ಮಗಳ ಭೇದವಿಲ್ಲ. ಮನಸ್ಸಿಗೆ ಹಿತ ನೀಡುವುದರೊಂದಿಗೆ ಪರಿಸರ ಕಾಪಾಡುವುದು ಮತ್ತು ಉದ್ಯಾವನವನ್ನು ಸ್ವಚ್ಚವಾಗಿಡುವಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು.

ಉದ್ಯಾನವನಗಳ ಸ್ವಚ್ಚತೆಗೆ ಸಾರ್ವಜನಿಕರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.ಸುಮಾರು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಉದ್ಯಾನವನದಲ್ಲಿ ಮಕ್ಕಳ ಜೋಕಾಲಿ, ಜಾರುಗುಂಡಿ, ಇತರ ಆಟಿಕೆ ಸಾಮಗ್ರಿಗಳನ್ನು ಆಳವಡಿಸಿ ಮಕ್ಕಳಿಗೆ ಆಹ್ಲಾದಕರ ವಾತಾವರಣ ಸೃಷ್ಟಿಸಲು ಒತ್ತು ನೀಡಿದೆ. ವಾರ್ಡ್ ನಾಗರಿಕರು ಸದೃಢ ಆರೋಗ್ಯ ದೃಷ್ಟಿಯಿಂದ, ಮನಸ್ಸಿನ ಉಲ್ಲಾಸಕ್ಕೆ ಸಂತೋಷದಿಂದ ಉದ್ಯಾನವನದಲ್ಲಿ ಕಾಲ ಕಳೆಯಬೇಕು. ಅದಕ್ಕಾಗಿ ಉದ್ಯಾನವನ್ನು ನಂದನವನ್ನಾಗಿ ಮಾರ್ಪಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಎ.ಶ್ರೀನಿವಾಸ್,ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎ. ನಂಜುಂಡಪ್ಪ,ಪಿ ಎಲ್ ಡಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಟಿ.ಡಿ ಮೂರ್ತಿ,ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ, ಕ್ಷೇತ್ರ ಸಮನ್ವಯ ಅಧಿಕಾರಿ ವೆಂಕಟರಾಮ್,ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ರೂಪ ಪೈ,ಪಿ. ಎಂ. ಶ್ರೀ
ಶಾಲೆ ಮುಖ್ಯ ಶಿಕ್ಷಕ ಆರ್.ಹನುಮಂತರೆಡ್ಡಿ,ಶಿಕ್ಷಕಿ ಪ್ರಭಾವತಿ,ಶಿಕ್ಷಕ ಮಂಜುನಾಥ್, ಮುಖಂಡರಾದ ಶಿವರಾಮರೆಡ್ಡಿ,ನಾರಾಯಣಸ್ವಾಮಿ,ಜೆ. ಡಿ. ಎಸ್.ಸೂರ್ಯನಾರಾಣ ರೆಡ್ಡಿ,ನಾಗಿರೆಡ್ಡಿ,ವೆಂಕಟರಾಮರೆಡ್ಡಿ,ಎಸ್.ಜಿ.ಟಿ.ಸುರೇಶ್ ಸೇರಿದಂತೆ ಶಿಕ್ಷಕ -ಶಿಕ್ಷಕಿಯರು ವಿದ್ಯಾರ್ಥಿನಿಯರು ಇದ್ದರು...

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456