ಪೋಷಕರು ಮಕ್ಕಳಿಗೆ ಸಂಸ್ಕಾರವನ್ನು ಕಳಿಸಿಕೊಡಬೇಕು: ಡಾ. ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮೀಜಿಗಳು
ಕೆಜಿಎಫ್: ಪೋಷಕರು ತಮ್ಮ ಮಕ್ಕಳಿಗೆ ಚಿಕ್ಕಂದಿನಿಂದ ಸಂಸ್ಕಾರವನ್ನು ಕಳಿಸಿಕೊಡಬೇಕು. ಪ್ರಮುಖವಾಗಿ ಮಠ ಮಂದಿರಗಳಿಗೆ ಕರೆದುಕೊಂಡು ಹೋಗಬೇಕು. ಆಗ ಮಕ್ಕಳಲ್ಲಿ ಅಧ್ಯಾತ್ಮಿಕ ಚಿಂತನೆಗಳು ಬರುತ್ತದೆ. ಮನಸ್ಸು ಏಕಾಗ್ರತೆಯಾಗುತ್ತದೆ. ಒಳ್ಳೆ ಸಂಸ್ಕಾರವಂತನಾಗುತ್ತಾನೆ ಎಂದು.
ಕೆಜಿಎಫ್ ಪಾಲಾರ್ ನಗರದಲ್ಲಿ ಜಗಜ್ಯೋತಿ ಬಸವೇಶ್ವರ ಹಾಗೂ ಅಕ್ಕಮಹಾದೇವಿ ಜಯಂತಿ ಮತ್ತು ನವೀನೀಕರಣಗೊಂಡ ಶ್ರೀ ಸರ್ಪಭೂಷಣ ಶಿವಯೋಗಿಗಳ ಮಠದ ವಿದ್ಯಾರ್ಥಿ ನಿಲಯದ ಉದ್ಘಾಟನಾ ಸಮಾರಂಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಡಾ. ಮಹಾಂತ ಲಿಂಗ ಶಿವಾಚಾರ್ಯ ಮಹಾ ಸ್ವಾಮೀಜಿಗಳು.
ಈಗಿನ ಕಾಲದಲ್ಲಿ ದಾನ ಮಾಡುವ ಗುಣ ಎಲ್ಲರಿಗೂ ಬರುವುದಿಲ್ಲ ದಾನ ಮಾಡಿದರು ತಮ್ಮ ಹೆಸರು ಬೇಕು ಎಂದು ಬಯಸುವವರೆ ಹೆಚ್ಚು ಇಂಥ ಕಾಲದಲ್ಲಿ ಶ್ರೀ ಸರ್ವಭೂಷಣ ಶಿವಯೋಗಿಗಳ ಮಠದ ಟ್ರಸ್ಟಿಗೆ ನಾಲ್ಕು ಎಕರೆ ಜಾಗವನ್ನು ನೀಡಿರುವ ಚಂದ್ರಶೇಖರ್ ಅವರು ನಿಜವಾದ ದಾನಿಗಳು. ಏಕೆಂದರೆ ಈ ಸಂದರ್ಭದಲ್ಲಿ ಅವರನ್ನು ಕರೆದರೂ ಕಾರ್ಯಕ್ರಮಕ್ಕೆ ಬಂದಿಲ್ಲ ಇದರಲ್ಲಿ ಅವರ ಮನಸ್ಸು ಯಾವ ರೀತಿ ಅನ್ನೋದು ನಮಗೆ ಗೊತ್ತಾಗುತ್ತದೆ ಇಂಥವರು ನೂರು ಜನರಲ್ಲಿ ಒಬ್ಬರಿರುತ್ತಾರೆ ಅವರೇ ಇವರು. ಎಷ್ಟೋ ಶ್ರೀಮಂತರಿರುತ್ತಾರೆ ಇರುತ್ತಾರೆ ಆದರೆ ಈ ರೀತಿ ದಾನ ಮಾಡುವ ಮನಸ್ಸು ಬರುವುದಿಲ್ಲ ಎಂದು ಕೊಂಡಾಡಿದರು.
ನಾಗಲಾಪುರ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ . ಮಠಗಳು ಸಮಾಜಕ್ಕೆ ಏನು ನೀಡುತ್ತದೆ ಎಂದು ಕೆಲವರು ಪ್ರಶ್ನೆ ಮಾಡುತ್ತಾರೆ. ವೀರಶೈವ ಮಠಗಳು ತನ್ನದೇ ಆದ ಇತಿಹಾಸವನ್ನು ಹೊಂದಿದ್ದು, ಮಠಗಳಲ್ಲಿ ಸಾವಿರಾರು ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ಅನ್ನದಾಸೋಹಗಳನ್ನು ನೀಡುತ್ತಾ ಬಂದಿದೆ. ಎಷ್ಟೋ ಮಕ್ಕಳು ತಮ್ಮ ಓದಿ ನಿಂದ ಮುಂದೆ ಬಂದು ಸಮಾಜಕ್ಕೆ ಎಷ್ಟು ಸೇವೆಯನ್ನು ಮಾಡಿದ್ದಾರೆ. ಅದನ್ನು ನಾವು ಎಂದು ಮರೆಯಬಾರದು ಮಠದಲ್ಲಿ ಮಕ್ಕಳು ಓದುವ ಕಡೆಗೆ ಸಂಸ್ಕಾರವನ್ನು ಕಲಿಯುತ್ತಾರೆ ವೀರಶೈವ ಮಠ ಶ್ರದ್ದ ಕೇಂದ್ರವಾಗಿ ತನ್ನದೇ ಆದ ಇತಿಹಾಸವನ್ನು ಹೊಂದಿದೆ ಇದರಲ್ಲಿ ಬೆಂಗಳೂರಿನಲ್ಲಿರುವ ಶ್ರೀ ಸರ್ಪ ಭೂಷಣ ಶಿವಯೋಗಿಗಳ ಮಠ ಈಗಲೂ ಹಲವಾರು ಕಾರ್ಯಕ್ರಮಗಳನ್ನು ಮಾಡಿಕೊಂಡು ನಮ್ಮ ಹಿಂದೂ ಧರ್ಮವನ್ನು ಈಗಿನ ಯುವ ಪೀಳಿಗೆಗಳಿಗೆ ತಿಳಿಸಿಕೊಡಲು ಮುಂದೆ ಬರುತ್ತಿದೆ . ಮಠ ಸಮಾಜಕ್ಕೆ ನನ್ನದೇ ಆದ ಅಪಾರ ಸೇವೆಯನ್ನು ಮಾಡುತ್ತಿದೆ ಎಂದರು. ಸಂದರ್ಭದಲ್ಲಿ ಶ್ರೀ ಸರ್ಪಭೂಷಣ ಶಿವಯೋಗಿಗಳ ಮಠ ಶ್ರೀ ಶ್ರೀ ಮಲ್ಲಿಕಾರ್ಜುನ ದೇವರು ರವರು. ಮಾದೇವ ಮಹಾಸ್ವಾಮಿಗಳು. ಪರಮಶಿವಯ್ಯ ಶ್ರೀ ಸರ್ಪಭೂಷಣ ಶಿವಯೋಗಿಗಳ ಮಠದ ಟ್ರಸ್ಟ್. ಪ್ರವೀಣ್ ಪಿ ಬಾಗೇವಾಡಿ. ಟಿ .ಎಂ. ನಂಜಪ್ಪನವರ್. ಮಂಜುನಾಥ್ ಅಧ್ಯಕ್ಷರು ಬಸವ ಸಮಿತಿ ಕೆಜಿಎಫ್. ಸಂಗೀತ ನರೇಂದ್ರ ಅಧ್ಯಕ್ಷರು ಅಕ್ಕನ ಬಳಗ ಕೆಜಿಎಫ್. ಮಂಜುನಾಥ್ ಬಳೆ ಮಂಜು. ವೀರಶೈವ ಪ್ರಗತಿಶೀಲ ಯುವಕರ ಸಂಘ ಬಂಗಾರಪೇಟೆ. ಎಂ .ಎನ್. ರವೀಂದ್ರ ವೀರಶೈವ ಲಿಂಗಾಯತ ಯುವಕರ ಸಂಘ ಬಂಗಾರಪೇಟೆ. ಬಾ ಹ ಶೇಖರಪ್ಪ ಇನ್ನು ಮೊದಲಾದವರು ಇದ್ದಾರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
