ಮಂತ್ರಾಲಯ ಕ್ಷೇತ್ರದಲ್ಲಿ ಬೆಂಗಳೂರಿನ ನೃತ್ಯ ದಿಶಾ ಟ್ರಸ್ಟ್ ಕಲಾವಿದರಿಂದ "ನಾದನಮನ"
ಮಂತ್ರಾಲಯ: ಬೆಂಗಳೂರಿನ ಪ್ರಸಿದ್ಧ ನೃತ್ಯ ಸಂಸ್ಥೆಯಾದ ನೃತ್ಯ ದಿಶಾ ಟ್ರಸ್ಟಿನ ಗುರು ಡಾ|| ದರ್ಶಿನಿ ಮಂಜುನಾಥ್ ರವರು ಹಾಗೂ ಅವರ ಶಿಷ್ಯೆಯರಾದ ದಿಶಾ, ದೀಪರಾಣಿ, ನಮಿತ, ಮೈತ್ರಿ, ಪ್ರಿಯಾಂಕ, ಮೇಘ, ಸ್ಫೂರ್ತಿ, ಕೀರ್ತನ, ಮನಿಷಾ , ಜೀವಿತ, ಗಣಿಕ, ಅಪೂರ್ವ, ಹರಿಣಿ, ಗ್ರೀಷ್ಮ, ಪ್ರಿಯದರ್ಶಿನಿ, ಹನ್ಸಿಕಾ, ಲಕ್ಷಿತ, ವರ್ಷ, ದೀಕ್ಷಿತ, ಹರ್ಷಿಕ ಮತ್ತು ಚಂದನ ಈ ಎಲ್ಲಾ ಕಲಾವಿದರು ತಮ್ಮ ನೃತ್ಯ ಸೇವೆ ಮಾಡಿ ರಾಯರ ಆಶೀರ್ವಾದ ಪಡೆದು, ಕಲೆಯಿಂದ ಕಲಾರಸಿಕರ ಮನಸ್ಸನ್ನು ಸಂತೋಷಗೊಳಿಸಿದರು.
ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಎಲ್ಲಾ ಕಲಾವಿದರಿಗೂ ಫಲಮಂತ್ರಾಕ್ಷತೆ ಮತ್ತು ಅನುಗ್ರಹ ಪತ್ರ ನೀಡಿ ಆಶೀರ್ವದಿಸಿದರು. ಕಾರ್ಯಕ್ರಮದ ಸಂಚಾಲಕರಾದ ಶ್ರೀ ಪದ್ಮನಾಭಾಚಾರ್ಯ ಅವರು ಕಾರ್ಯಕ್ರಮದ ವ್ಯವಸ್ಥೆಯನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು.
What's Your Reaction?
Like
3
Dislike
0
Love
0
Funny
0
Angry
0
Sad
0
Wow
0
