ಮರಗಳನ್ನು ಕಡಿದ ಕೇಸ್: ಅರಣ್ಯ ಅಧಿಕಾರಿಗಳಿಂದ ಸೂಕ್ತ ಕ್ರಮ..?

Sep 5, 2025 - 10:48
 0  7
ಮರಗಳನ್ನು ಕಡಿದ ಕೇಸ್: ಅರಣ್ಯ ಅಧಿಕಾರಿಗಳಿಂದ ಸೂಕ್ತ ಕ್ರಮ..?

ಬೆಂಗಳೂರು: ಅನಧಿಕೃತವಾಗಿ ಮರಗಳನ್ನು ತುಂಡು ತುಂಡಾಗಿ ಕತ್ತರಿಸಿರುವ ಘಟನೆಗೆ ಸಂಬಂಧಿಸಿದಂತೆ ಡಾ.ಬಿ.ಆರ್ ಅಂಬೇಡ್ಕರ್ ಜನಪರ ರಕ್ಷಣಾ ವೇದಿಕೆ ಧ್ವನಿ ಎತ್ತಿತು.


ಬೆಂಗಳೂರಿನ 2ನೇ ಮುಖ್ಯರಸ್ತೆ ಭೂಪಸಂದ್ರದ ಹೊಸ ಬಡಾವಣೆಯಲ್ಲಿ ಸುಮಾರು ವರ್ಷಗಳಿಂದ ಬೆಳೆದಿದ್ದಂತ ಮರವನ್ನು ತಮ್ಮ ಸ್ವಾರ್ಥಕ್ಕೆ   ಬಿಲ್ಡರ್ ಮತ್ತು ಡೆವಲಪರ್ ರದ ಶಂಕರ್ ರಾಜು ಹಾಗೂ ನಿವೇಶನದ ಮಾಲೀಕ ಚಂದ್ರಶೇಖರ್ ಇವರು ತಮ್ಮ ವೈಯಕ್ತಿಕ ಉದ್ದೇಶಕ್ಕೆ  ಯಾವುದೇ ರೀತಿಯ ಅನುಮತಿ ಪಡೆಯದೆ ಸಾರ್ವಜನಿಕರಿಗೆ ನೆರಳಾಗಿದಂತ  ಮರಗಳನ್ನು ಏಕಾಏಕಿ ದುಷ್ಕರ್ಮಿಗಳದ ಡೆವಲಪರ್& ಬಿಲ್ಡರ್ ಆದ ಶಂಕರ್ ರಾಜು ಹಾಗೂ ನಿವೇಶನದ ಮಾಲೀಕನಾದ ಚಂದ್ರಶೇಖರ್  ರಸ್ತೆಯಲ್ಲಿ ಇದ್ದಂತ ಅತಿಗಾತ್ರದ 2 ರಿಂದ 3 ಮರಗಳನ್ನು  ತುಂಡು ತುಂಡಾಗಿ  ಕ್ರೂರವಾಗಿ ಕತ್ತರಿಸಿದರು. ಈ ಬಗ್ಗೆ ಪರಿಸರ ಪ್ರೇಮಿಗಳು ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಜನಪರ ರಕ್ಷಣಾ ವೇದಿಕೆಯವರು ಸಂಬಂಧಪಟ್ಟ ಅರಣ್ಯ ಇಲಾಖೆಗೆ  ದೂರು ಕೊಟ್ಟಿದ್ದರು. ಹಾಗೂ ಇದರ ಬಗ್ಗೆ ನ್ಯೂಸ್ 69 ಕನ್ನಡ ವಾಹಿನಿ ವರದಿ ಮಾಡಿತ್ತು. ವರದಿ ನೋಡಿದ ನಂತರ  ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳಳು ಎಚ್ಚೆತ್ತುಕೊಂಡು ಮರಗಳನ್ನು  ಕಡೆದಂತ ಜಾಗಗಳನ್ನು ಪರಿಶೀಲಿಸಿ ಸತ್ಯಂಸ ತಿಳಿದ ನಂತರ  ಆರೋಪಿಗಳಾದ ಡೆವಲಪರ್ & ಬಿಲ್ಡರ್ ಆದ ಶಂಕರ್ ರಾಜು ಹಾಗೂ ನಿವೇಶನದ ಮಾಲೀಕನಾದ ಚಂದ್ರಶೇಖರ್ ರವರ ಮೇಲೆ  ಅರಣ್ಯ ಅಧಿಕಾರಿಗಳು ಫೋಕಸ್ 69/25-26 ಕರ್ನಾಟಕ ವೃಕ್ಷ ಸಂರಕ್ಷಣಾ ಅಧಿನಿಯಮ 1976 ಸೆಕ್ಷನ್ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರಗಿಸಿದ್ದಾರೆ  ಆದರೆ ಇದುವರೆಗೂ ಅವರನ್ನು ಬಂಧಿಸದೇ ಇರುವುದೇ ಆಶ್ಚರ್ಯ ವಾಗುತ್ತಿದೆ, ಹಾಗೂ ಈ ಜಾಗದಲ್ಲಿ ಈ ಹಿಂದೆ ಒಂದು ಗಂಧದ ಮರವು ಸಹ ಇತ್ತು ಕಟ್ಟಡ ಕಟ್ಟುವಾಗ ಅದನ್ನು ಕಡೆದು ಹಾಕಿದರೂ ಎಂದು   ಸ್ಥಳೀಯರಿಂದ   ತಿಳಿದು ಬಂದಿದೆ.?  ಮರಗಳನ್ನು ಕ್ರೂರವಾಗಿ ಕತ್ತರಿಸಿದಂತ  ಈ ದುಷ್ಕರ್ಮಿ ಆರೋಪಿಗಳನ್ನು  ಅರಣ್ಯ ಅಧಿಕಾರಿಗಳು  ಬಂದಿಸುತ್ತಾರೋ ಅಥವಾ ಹಾಗೆ ಸುಮ್ಮನಾಗಿಬಿಡುತ್ತಾರಾ ಎನ್ನುವುದೇ  ಸಾರ್ವಜನಿಕರ ಅನುಮಾನ ಮೂಡಿಸುತ್ತಿದೆ.?

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456