ಮಾನವೀಯ ಮೌಲ್ಯಗಳ ದೀಪ ಡಾ ಚನ್ನಬಸವ ಪಟ್ಟದೇವರು ಅನೀಲಕುಮಾರ ಸಿಂಧೆ

Dec 24, 2025 - 12:47
Dec 24, 2025 - 21:34
 0  18
ಮಾನವೀಯ ಮೌಲ್ಯಗಳ ದೀಪ ಡಾ ಚನ್ನಬಸವ ಪಟ್ಟದೇವರು ಅನೀಲಕುಮಾರ ಸಿಂಧೆ

ಚಿಟಗುಪ್ಪ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಚಿಟಗುಪ್ಪ ವತಿಯಿಂದ ಇಂದು ಸರಕಾರಿ ಕನ್ಯಾಪ್ರೌಢ ಶಾಲೆಯಲ್ಲಿ ಶ್ರೀ ಡಾ ಚನ್ನಬಸವ ಪಟ್ಟದೇವರು136ನೇ ಜಯಂತೋತ್ಸವವನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಮಹಾರುದ್ರಪ್ಪ ಅಣದೂರ ಮಾತನಾಡಿ ವೈಚಾರಿಕ ಚಿಂತಕರು, ನೂತನ ಅನುಭವ ಮಂಟಪದ ರೂವಾರಿ, ಕಾಯಕ ನಿಷ್ಠೆ-ದಾಸೋಹ ಮನೋಧರ್ಮದ ಕರುಣಾಮೂರ್ತಿ, ಅನಾಥರ ನೊಂದವರ ಧ್ವನಿ, ಗಡಿ ಭಾಗದಲ್ಲಿ ಕನ್ನಡ ಉಳಿಸಿ ಬೆಳೆಸಿದ ಕನ್ನಡ ಭಾಷಾ ಪ್ರೇಮಿ, ವಚನ ಸಾಹಿತ್ಯ ತತ್ವಗಳನ್ನು ಸಾಗರದಾಚೆಗೂ ಕೊಂಡೊಯ್ದ ಮೇಧಾವಿ ಸಂತರ ಸಂತ ಕಲ್ಯಾಣದ ಪ್ರಜ್ವಲ್ ಜ್ಯೋತಿ ಭಾಲ್ಕಿ ಹಿರೇಮಠ್ ಸಂಸ್ಥಾನದ ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದೇವರ ನಿಸ್ವಾರ್ಥ ಸೇವೆ ಅನನ್ಯವಾದುದ್ದು. ಎಂದು ನುಡಿದರು ಜಗನಾಥ ಗಾದರವರು ಮಾತನಾಡಿ ಡಾ.ಚನ್ನಬಸ ವ ಪಟ್ಟದೇವರು 21ನೆಯ ಶತಮಾನದ ಮಹಾಶಿವಶರಣರು, ಸಾಮಾಜಿಕ ಸಮಾನತೆ, ದೀನ ದಲಿತರು, ಶೋಷಿತರ, ಬಡವರ- ನೊಂದವರ ದನಿಯಾಗಿ ಹಗಲಿರುಳು ದುಡಿದು, ಬಸವಾದಿ ಶರಣರ ಹಾದಿಯಲ್ಲಿ ಸಾಗುವ ಕಾಯಕವನ್ನು ನಿತ್ಯ ನಿರಂತರವಾಗಿ ಮಾಡಿಕೊಂಡು ಬಂದಿರುತ್ತಾರೆ ಅಂತೆಯೇ ಗಡಿಭಾಗದಲ್ಲಿ ಕನ್ನಡ ಭಾಷೆ ಅವನತಿಯ ಹಂತದಲ್ಲಿ ಇದ್ದಾಗ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಇವರ ಶ್ರಮ ದೊಡ್ಡದು ಯೆಂದು ನುಡಿದ್ದರು ಸಂಜೀವನ ಬೋಸ್ಲೆರವರು ಮಾತನಾಡಿ ಕನ್ನಡತನವನ್ನು ಸಂರಕ್ಷಣೆ ಮಾಡಿ, ಕನ್ನಡ ಭಾಷೆಗೆ ಹೊಸ ಆಯಾಮ ನೀಡಿದವರು.ಕನ್ನಡ ಭಾಷಾ ಸಾಹಿತ್ಯ ಲೋಕಕ್ಕೆ ಮರೆಯಲಾಗದ ಹೃದಯಸ್ಪರ್ಶಿ ಸೇವೆಯನ್ನು ಸಲ್ಲಿಸಿರುತ್ತಾರೆ. ಕನ್ನಡವನ್ನು ವಿಶ್ವ ಭಾಷೆಗಳಿಗೆ ಸಮಾನವಾಗಿ ಬೆಳೆಸುವ ನಿಟ್ಟಿನಲ್ಲಿ ಇವರ ಅನುಪಮ ಸೇವೆ ಎಂದೆಂದಿಗೂ ಮರೆಯಲಾಗದು ಯೆಂದು ನುಡಿದ್ದರು ಬಸವರಾಜ ಮೈತ್ರೆರವರು ಮಾತನಾಡಿ.ಇದಲ್ಲದೆ ಈ ಭಾಗದ ಶರಣರ ಸಾಮಾಜಿಕ ಸಾಮರಸ್ಯದ ಸೇತುವೆಗಳಾದ ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಸಂಗೀತ ಸೇರಿದಂತೆ ಜನಪದ ಕ್ಷೇತ್ರಗಳಿಗೆ ಹೆಚ್ಚು ಒತ್ತುಕೊಟ್ಟುವರು ಯೆಂದು ನುಡಿದ್ದವರು ರಾಜೇಂದ್ರ ಚವ್ಹಾನ ಪ್ರಾರ್ಚಾಯರು ಮಾತನಾಡಿ ಜನಸಾಮಾನ್ಯರ ದನಿಗೆ ದನಿಯಾಗಿ, ಅವರುಗಳ ಮಾನಸಿಕ ನೆಮ್ಮದಿಗೆ ಕಾರಣೀಭೂತರಾಗಿದ್ದಾರೆ.ಹೀಗೆ ಹತ್ತು ಹಲವು ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪ್ರೇರಣದಾಯಕ ಕೆಲಸಗಳನ್ನು ಮಾಡಿದ್ದಾರೆಯೆಂದು ನುಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅನೀಲಕುಮಾರ ಸಿಂಧೆ ಮಾತನಾಡಿ ಕಷ್ಟದ ಸಮಯದಲ್ಲಿಯೂ ನಾಡು ನುಡಿ, ಭಾಷೆ, ಸಂಸ್ಕೃತಿಯ, ಆಚಾರ-ವಿಚಾರಗಳು ಬಂದಾಗ, ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳದೆ ಆತ್ಮಸಾಕ್ಷಿಯಾಗಿ ಕೆಲಸ ಕಾರ್ಯಗಳು ಮಾಡಿಕೊಂಡು ಬಂದಿದ್ದಾರೆಯೆಂದು ನುಡಿದ್ದರು ಕಾರ್ಯಕ್ರಮದಲ್ಲಿ ಶಿಕ್ಷಕರು ಉಪನ್ಯಾಸಕರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಮಕ್ಕಳು ಉಪಸ್ಥಿತರಿದ್ದರು 

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456