ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಾಧಕರಿಗೆ ಸನ್ಮಾನ ಅಭಿನಂದನೆ
ಕೆಜಿಎಫ್: ನಗರದ ಹೃದಯ ಭಾಗದಲ್ಲಿರುವ ಎಸ್ ಬಿ ಐ ಹಾಗೂ ಗಂಗಾ ನಿಕೇತನ ಫೌಂಡೇಶನ್ ಮತ್ತು ಸಿರಿಗನ್ನಡ ವೇದಿಕೆ ಕೋಲಾರ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ. ಪರಿಸರ ಸಾಧಕರಿಗೆ ಸನ್ಮಾನಿಸಲಾಯಿತು. ನಂತರ ಮಾತನಾಡಿದ ಗಂಗಾ ನಿಕೇತನ ಫೌಂಡೇಶನ್ ನ ಅಧ್ಯಕ್ಷರು. ಎಚ್ .ರಾಮಚಂದ್ರಪ್ಪ ಮಾತನಾಡಿ ಪ್ಲಾಸ್ಟಿಕ್ ಮುಕ್ತ ಜೀವನ ಶೈಲಿಯನ್ನು ಅಳವಡಿಸಿಕೊಂಡರೆ. ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ಹೆಚ್ಚಾಗಿ ಜಾಗೃತಿ ಮೂಡಿಸಿದರೆ ಉತ್ತಮ ಪರಿಸರ ಸಂರಕ್ಷಣೆ ಮಾಡುವ ಸಾಧ್ಯವಾಗುತ್ತದೆ. ಪರಿಸರಕ್ಕೆ ಆನೆಯಾಗುವ ಪ್ಲಾಸ್ಟಿಕ್ ವಸ್ತುಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಇದೇ ಸಂದರ್ಭದಲ್ಲಿ ಪ್ರತಿಯೊಬ್ಬ ನಾಗರಿಕನು ಒಂದೊಂದು ಗಿಡವನ್ನು ನೆಟ್ಟು ಪೋಷಿಸಿದರೆ. ಪರಿಸರವನ್ನು ಸಂರಕ್ಷಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರೆ. ಹಸಿರೇ ಉಸಿರು ಕಾಡು ಬೆಳೆಸಿ ನಾಡು ಉಳಿಸಿ ಮರ ಕಡಿದರೆ ಬರುವುದು ಬರ ಸ್ವಚ್ಛತೆಯ ಸ್ವರ್ಗ ಕೊಳಕು ನರಕ ಔಷಧಿಗಳಿಂದ ದೂರವಿರಲು ಸ್ವಚ್ಛತೆಯ ದಾರಿ ದೀಪ ಅಕ್ಷರ ಅನ್ನ ಪರಿಸರ ಚಿನ್ನ ಎಂಬಂತೆ ಮನೆಗೊಂದು ಮರವನ್ನು ಬೆಳೆಸಿದರೆ ಊರಿಗೊಂದು ಹಣವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಪರಿಸರವನ್ನು ಸಂರಕ್ಷಿಸಿ ಹಾಗೂ ಪ್ಲಾಸ್ಟಿಕ್ ಮುಕ್ತ ರಾಕ್ಷಸ ನಿರ್ಮಾಣ ಮಾಡಲು ಪ್ರತಿಯೊಬ್ಬರ ಜಾಗೃತಿಯನ್ನು ವಹಿಸಿ ಕಂಕಣ ಬದ್ಧರಾಗಿ ಗಾಂಧೀಜಿಯವರ ಕನಸನ್ನು ಮನಸು ಮಾಡಲು ಸಾಧ್ಯವಾಗುತ್ತದೆ. ಅದೇ ರೀತಿಯಾಗಿ ಶತಾಯುಷಿ ಆಗಿರುವ ಸಾಲುಮರ ತಿಮ್ಮಕ್ಕನವರ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಉತ್ತಮ ಪರಿಸರವನ್ನು ನಿರ್ಮಾಣ ಮಾಡಲು ಸಾಧ್ಯ. ಎಂದು ಗಂಗಾ ನಿಕೇತನ ಫೌಂಡೇಶನ್ ಅಧ್ಯಕ್ಷರು ಹೆಚ್. ರಾಮಚಂದ್ರಪ್ಪ ತಿಳಿಸಿದರು. ಪರಿಸರ ಪ್ರೇಮಿಯಾಗಿರುವ ಪ್ರೊಫೆಸರ್ ಸುಬ್ರಮಣಿ ಮಾತನಾಡಿ. ಈಗ ಪ್ರಪಂಚದಲ್ಲಿ ಅಭಿವೃದ್ಧಿ ವಿಚಾರದಲ್ಲಿ ಕಾಡುಗಳನ್ನು ನಾಶ ಮಾಡುತ್ತಿದ್ದಾರೆ ಇದು ಹೀಗೆ ಮುಂದುವರೆದರೆ ಮುಂದಿನ ಪೀಳಿಗೆಗೆ ತುಂಬಾ ನಷ್ಟವಾಗುತ್ತದೆ. ಆದ್ದರಿಂದ ನಾವು ಈಗಲೇ ಪ್ರತಿಯೊಬ್ಬ ವ್ಯಕ್ತಿ ಒಂದು ಗಿಡವನ್ನು ನೆಟ್ಟರೆ ಮುಂದಿನ ಭವಿಷ್ಯಕ್ಕೆ ಒಳ್ಳೆಯ ದಾರಿ ದೀಪ ಆಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು . ಬ್ಯಾಂಕ್ನ ವ್ಯವಸ್ಥಾಪಕರು ಮಾತನಾಡಿ ಮೋಹನ್ ಸಿಂಗ್. ರವರು ಮಾತನಾಡಿ. ಸ್ವಚ್ಛ ಭಾರತ ಅಭಿಯಾನದಲ್ಲಿ ಪ್ರತಿಯೊಬ್ಬ ನಾಗರಿಕನು ಪ್ಲಾಸ್ಟಿಕ್ ಮುಕ್ತ ದೇಶವನ್ನು ನಿರ್ಮಾಣ ಮಾಡಲು ಜಾಗ್ರತರಾದರೆ. ಮುಂದಿನ ಪರಿಸರವನ್ನು ನಾವು ಸಂರಕ್ಷಣೆ ಮಾಡಲು ಸಾಧ್ಯವಾಗುತ್ತದೆ. ಆ ಹಿನ್ನೆಲೆಯಲ್ಲಿ ಇಂದು ನಮ್ಮ ಕಚೇರಿ ಆವರಣದಲ್ಲಿ ಗಂಗಾ ನಿಕೇತನ್ ಫೌಂಡೇಶನ್ ಹಾಗೂ ಸಿರಿಗನ್ನಡ ವೇದಿಕೆ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಅತಿ ವಿಜೃಂಭಣೆ ಇಂದ ಆಚರಣೆ ಮಾಡುತ್ತಿದ್ದು, ನಮಗೆ ಸಂತಸ ತಂದಿದೆ. ಇದೆ ಸಂದರ್ಭದಲ್ಲಿ ಆವರಣದಲ್ಲಿ ಹಲವಾರು ಸಸಿಗಳನ್ನು ನೆಟ್ಟು ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿರುವ ಗಣ್ಯ ವ್ಯಕ್ತಿಗಳಿಗೆ ಕಲ್ಪವೃಕ್ಷ ಸಸಿಗಳನ್ನು ವಿತರಣೆ ಮಾಡಲಾಯಿತು. ಇದೆ ಸಂದರ್ಭದಲ್ಲಿ ಸನ್ಮಾನಿತರಾದ. ಡಾಕ್ಟರ್. ಮುರಳಿಧರ್. ಶ್ರೀಧರ್. ಡಾಕ್ಟರ್ ರಾಧಾ ಪ್ರಕಾಶ್. ಪಣಿರಾವ್. ಕರವೇ ತಾಲೂಕು ಸಾಮಾಜಿಕ ಜಾಲತಾಣಗಳ ಅಧ್ಯಕ್ಷರು. ಮಂಜುನಾಥ್. ನಗರ ಸಭೆ ಆರೋಗ್ಯ ಅಧಿಕಾರಿ. ಮಂಗಳ ಗೌರಿ ಮುಂತಾದವರಿಗೆ ಸನ್ಮಾನಿಸಲಾಯಿತು. ಬ್ಯಾಂಕ್ ಕಚೇರಿಯ ಎಲ್ಲಾ ಸಿಬ್ಬಂದಿ ವರ್ಗ ಹಾಜರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
