ಶಿವಕುಮಾರ್ ನಾಯ್ಕ ಸಿಂಗನಪುರ ಗ್ರಾ ಪಂ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು
ಸಂತೆಮರಹಳ್ಳಿ: ಸಮೀಪದ ಕೆಂಪನಪುರ ಗ್ರಾಮ ಪಂಚಾಯ್ತಿ ಒಳಪಡುವ ಸಿಂಗನಪುರ ಗ್ರಾಮದ ತೆರವಾಗಿದ್ದ ಸ್ಥಾನಕ್ಕೆ ಮೇ 26 ರಂದು ಉಪಚುನಾವಣೆ ನಡೆಸಲಾಯಿತು.
ಈ ಚುನಾವಣೆಯಲ್ಲಿ 361 ಮತಗಳು ನಡೆದ ಸಂದರ್ಭದಲ್ಲಿ ಎಸ್ ಎಂ ಶಿವಕುಮಾರ್ ನಾಯಕ 275 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸುವ ಮೂಲಕ ನೂತನವಾಗಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದರೆ.
ಇವರ ಪ್ರತಿ ಸ್ಪರ್ಧಿ ಬಸವರಾಜ್ ನಾಯಕ 80 ಮತಗಳನ್ನು ಅಡೆದು ಸೋಲು ಅನುಭವಿಸಿದ್ದಾರೆ.
ಇದರಲ್ಲಿ 6 ಮತಗಳು ತಿರಸ್ಕೃತಗೊಂಡಿದೆ ಎಂದು ಚುನಾವಣೆ ಅಧಿಕಾರಿ ಘೋಷಣೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ನೂತನ ಗ್ರಾ ಪಂ ಸದಸ್ಯ ಶಿವಕುಮಾರ್ ನಾಯಕ್ ಮಾತನಾಡಿ ನಮ್ಮ ವಾರ್ಡ್ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸುವುದಾಗಿ ತಿಳಿಸಿದರು ಹಾಗೂ ನನ್ನನ್ನು ಆಯ್ಕೆ ಮಾಡಿದ ಸಿಂಗನಪುರ ಗ್ರಾಮದ ಎಲ್ಲಾ ಮತದಾರರಿಗೆಧನ್ಯವಾದಗಳನ್ನ ಸಲ್ಲಿಸುತ್ತೇನೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ವಕೀಲ ಉದಯ್, ಬಸವರಾಜ್ ನಾಯಕ್, ಶಿವರಾಜ್ ನಾಯಕ ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
