ಶ್ರೀ ನರಸಿಂಹ ಜಯಂತಿ ಮತ್ತು ಶ್ರೀ ಶ್ಯಾಮಸುಂದರದಾಸರ ಆರಾಧನೆ

May 11, 2025 - 12:18
 0  13
ಶ್ರೀ ನರಸಿಂಹ ಜಯಂತಿ ಮತ್ತು ಶ್ರೀ ಶ್ಯಾಮಸುಂದರದಾಸರ ಆರಾಧನೆ

ಬೆಂಗಳೂರು : ಶ್ರೀ ಶ್ರೀಪಾದರಾಜ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ 1008 ಶ್ರೀ ಸುಜಯೀಂದ್ರತೀರ್ಥ ಶ್ರೀಪಾದಂಗಳವರ ಅನುಗ್ರಹದೊಂದಿಗೆ ದಾಸವಾಣಿ ಕರ್ನಾಟಕ ಸಂಸ್ಥೆ ವತಿಯಿಂದ ಮೇ 10 ರಂದು ರಾಘವೇಂದ್ರ ಕಾಲೋನಿಯ ಶ್ರೀ ಶ್ರೀಪಾದರಾಜರ ಮಠದಲ್ಲಿ ಶ್ರೀ ಶ್ಯಾಮಸುಂದರದಾಸರ ಆರಾಧನೆ ಮತ್ತು ನರಸಿಂಹ ಜಯಂತಿಯನ್ನು ಆಚರಿಸಲಾಯಿತು.

 ದಾಸವಾಣಿ ಕರ್ನಾಟಕದ ಸಂಸ್ಥಾಪಕರಾದ ಶ್ರೀ ಜಯರಾಜ ಕುಲಕರ್ಣಿ ಮತ್ತು ಶ್ರೀ ಶ್ಯಾಮಸುಂದರದಾಸರ ಮರಿಮಗಳಾದ ಶ್ರೀಮತಿ ಮಾನಸ ಕುಲಕರ್ಣಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾಸವಾಣಿ ಕರ್ನಾಟಕ ಮತ್ತು ಸ್ವರಾತ್ಮಿಕ ಸಂಗೀತ ವೃಂದದವರಿಂದ ಶ್ರೀ ಶ್ಯಾಮಸುಂದರದಾಸರ ಅನೇಕ ಕೃತಿಗಳ ಗಾಯನ ಸೇವೆ ನಡೆಯಿತು. 

ಇದೇ ಸಂದರ್ಭದಲ್ಲಿ ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್ ನ ಅಧ್ಯಕ್ಷರಾದ ಡಾ|| ಸುಧಾ ದೇಶಪಾಂಡೆ ಮತ್ತು ಪ್ರಧಾನ ಕಾರ್ಯದರ್ಶಿ ಡಾ|| ವೃಂದಾ ಸಂಗಮ್ ಅವರು ಶ್ರೀ ಶ್ಯಾಮಸುಂದರ ದಾಸರ ಜೀವನ ಚರಿತ್ರೆ ಮತ್ತು ಅವರ ಕೃತಿಗಳ ವಿಶೇಷತೆ ಬಗ್ಗೆ ತಿಳಿಸಿಕೊಟ್ಟರು. 

ಶ್ರೀ ಶ್ಯಾಮಸುಂದರದಾಸರು ವರಕವಿ ದ. ರಾ. ಬೇಂದ್ರೆ ಅವರಿಗೆ ಮಾನವಿಯಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಬರಲು ಅವರಿಗೆ ಬರೆದ ವಿಶೇಷ ಪತ್ರವನ್ನು ಸಂಸ್ಕೃತಿ ಚಿಂತಕರಾದ ಡಾ|| ಗುರುರಾಜ್ ಪೊಶೆಟ್ಟಿಹಳ್ಳಿ ಅವರು ಓದಿದರು. ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456