ಶ್ರೀ ಮಾರಿಯಮ್ಮ ದೇವಿ 18ನೇ ವರ್ಷದ ತಂಬಿಟ್ಟು ದಿಪೋತ್ಸವ ಜಾತ್ರೆಯಲ್ಲಿ ನೂರಾರು ಮಹಿಳೆಯರು ಭಾಗಿ
ಬಾಗೇಪಲ್ಲಿ: ಪಟ್ಟಣದ ವಿವಿಧ ವಾರ್ಡ್ ಗಳಿಂದ ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿ ಶ್ರದ್ದಾ ಭಕ್ತಿಯಿಂದ ಮಾರೆಮ್ಮ ದೇವಿ ಅಮ್ಮನವರ ತಂಬಿಟ್ಟಿನ ದೀಪೋತ್ಸವ ಆಚರಿಸಿದರು.
ಪಟ್ಟಣದ 1ನೇ ವಾರ್ಡಿನ ಶಿರಡಿ ಸಾಯಿ ಬಾಬಾ ಮಂದಿರದ ಹಿಂಬಾಗದಲ್ಲಿರುವ ತಾಯಿ ಮಾರಿಯಮ್ಮ ದೇವಾಲಯದಲ್ಲಿ 18ನೇ ವರ್ಷದ ತಂಬಿಟ್ಟು ದಿಪೋತ್ಸವ ಜಾತ್ರೆಯಲ್ಲಿ ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿ ಪಟ್ಟಣದ ವಿವಿಧ ವಾರ್ಡ್ ಗಳಿಂದ ಶ್ರದ್ದಾ ಭಕ್ತಿಯಿಂದ ಭಕ್ತರು ತಂಬಿಟ್ಟು ಜಾತ್ರಾ ಮಹೋತ್ಸವ ಆಚರಿಸಲಾಯಿತು.
ಮಳೆಗಾಗಿ ಜಾತ್ರಾ ಮಹೋತ್ಸವಪಟ್ಟಣದ 1, 2,5 ನೇ ವಾರ್ಡ್ ನ ಮಹಿಳೆಯರು ಶ್ರದ್ದಾಭಕ್ತಿಯಿಂದ ತಂಬಿಟ್ಟಿನ ಆರತಿ ದೀಪಗಳನ್ನು ಬೆಳಗುವ ಮೂಲಕ ಗ್ರಾಮ ಶ್ರೀ ಮಾರೆಮ್ಮ ದೇವಿಗೆ ಆರತಿ ಪೂಜೆ ಸಲ್ಲಿಸಿದರು.ತೆಂಗು ಹಾಗೂ ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿದ್ದ ಆರತಿಗಳು ಎಲ್ಲರ ಆಕರ್ಷಣೆಯಾಗಿತ್ತು.
ಅದರಲ್ಲೂ ವಿಶೇಷವಾಗಿ ದೀಪಗಳನ್ನು ಹೊತ್ತ ಮಹಿಳೆಯರು ಈ ವರ್ಷ ಉತ್ತಮ ಮಳೆ ಬೆಳೆ ಬರಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿ ತಮ್ಮ ತನು,ಮನ, ಧನ ಅರ್ಪಿಸಿ ತೀರ್ಥ ಪ್ರಸಾದ ಸ್ವೀಕರಿಸಿ ಶ್ರೀ ಮಾರಿಯಮ್ಮ ದೇವಿಯ ಕೃಪಗೆ ಪಾತ್ರರಾದರು.
ವಿಶೇಷವೆಂದರೆ ತಮಟೆ ನಾದಕ್ಕೆ ಮನಸೋತ ಪುಟಾಣಿ ಮಕ್ಕಳು ತಮಟೆ ಶಬ್ದಕ್ಕೆ ಕುಣಿದು ಕುಪ್ಪಳಿಸಿದ್ದು ಎಲ್ಲಾರ ಗಮನ ಸೆಳೆಯಿತು.
ಈ ಸಂಧರ್ಭದಲ್ಲಿ ಜಾತ್ರೆ ನೇತೃತ್ವವನ್ನು ವಹಿಸಿದ ಲಂಬಾನಿ ಗೋರ್ ಬಂಜಾರ ಅಭಿವೃದ್ದಿ ಸಂಘದ ಅಧ್ಯಕ್ಷ ವೆಂಕಟರವಣನಾಯ್ಕ್,ಉಪಾಧ್ಯಕ್ಷ ಬಾಂಬೆನಾರಾಯಣನಾಯಕ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ನಾಯಕ್, ನಾರಾಯಣ ನಾಯಕ್, ಶ್ರೀರಾಮನಾಯಕ್, ಗೋಪಿನಾಯಕ್, ನಾಗಭೂಷಣನಾಯಕ್ ಸೇರಿದಂತೆ ನೂರಾರು ಭಕ್ತಾಧಿಗಳು ಇದ್ದರು....
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
