ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ದಸರಾ ಮಹೋತ್ಸವ 

Sep 21, 2025 - 16:02
 0  6
ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ದಸರಾ ಮಹೋತ್ಸವ 

ಬೆಂಗಳೂರು : ನಾಗರಬಾವಿ ಮುಖ್ಯರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಕಾಲೋನಿಯ ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರ ವರೆಗೆ ದಸರಾ ಮಹೋತ್ಸವ ಆಚರಿಸಲಿದ್ದು ಪ್ರತಿದಿನ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ವಿಶೇಷ ಅಲಂಕಾರಗಳನ್ನು ಮಾಡಲಾಗುತ್ತದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ  6-30ಕ್ಕೆ : ಸೆಪ್ಟೆಂಬರ್ 22-ಶ್ರೀಮತಿ ಪ್ರಸನ್ನಲಕ್ಷ್ಮಿ ಮತ್ತು ಸಂಗಡಿಗರಿಂದ "ಕರ್ನಾಟಕ ಶಾಸ್ತ್ರೀಯ ಸಂಗೀತ", ಸೆಪ್ಟೆಂಬರ್ 23-ವಿಜಯನಗರದ ಸ್ಫೂರ್ತಿ ಮಹಿಳಾ ಮಂಡಲಿಯ ಸದಸ್ಯರಿಂದ "ದೇವರನಾಮಗಳು", ಸೆಪ್ಟೆಂಬರ್ 24-ವಿದುಷಿ ಶ್ರೀಮತಿ ದಿವ್ಯಾ ಗಿರಿಧರ್ ಮತ್ತು ಸಂಗಡಿಗರಿಂದ "ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ದಾಸರ ಪದಗಳ ಗಾಯನ", ಸೆಪ್ಟೆಂಬರ್ 25-'ಸಂಗೀತ ಕಲಾನಿಧಿ' ಡಾ|| ವಿದ್ಯಾಭೂಷಣ ಮತ್ತು ಸಂಗಡಿಗರು "ಹರಿನಾಮ ಸಂಕೀರ್ತನೆ", ಸೆಪ್ಟೆಂಬರ್ 26-ಗಾನ ಸೌರಭ ಶಾಲೆಯ ವಿದ್ಯಾರ್ಥಿಗಳಿಂದ "ಚಿತ್ರಾಕ್ಷಿ ಕಲ್ಯಾಣ" ಯಕ್ಷಗಾನ, ಸೆಪ್ಟೆಂಬರ್ 27-ಕೆನರಾ ಬ್ಯಾಂಕ್ ಕಾಲೋನಿ ಮಹಿಳಾ ಸದಸ್ಯರಿಂದ "ವೈವಿಧ್ಯ ಮನರಂಜನಾ ಕಾರ್ಯಕ್ರಮ", ಸೆಪ್ಟೆಂಬರ್ 28-ಶ್ರೀಮತಿ ಸುಗನ್ಯ ರಾಘವ್, ಶ್ರೀಮತಿ ಸುಪ್ರಿಯಾ ಅಶ್ವಿನ್ ಮತ್ತು ಸಂಗಡಿಗರಿಂದ "ನೃತ್ಯ ಪ್ರದರ್ಶನ", ಸೆಪ್ಟೆಂಬರ್ 29-ಗಾನಸಿರಿ ಟ್ರಸ್ಟ್ ದಿ ಸ್ಕೂಲ್ ಆಫ್ ಮ್ಯೂಸಿಕ್ ಕಲಾವಿದರಿಂದ "ಭಕ್ತಿ ಸಂಗೀತ", ಸೆಪ್ಟೆಂಬರ್ 30-"ದುರ್ಗಾ ನಮಸ್ಕಾರ", ಅಕ್ಟೋಬರ್ 1-ಕಲಾಂಷು ಕಲ್ಚರಲ್ ಟ್ರಸ್ಟಿನ ತಂಡದವರಿಂದ "ನೃತ್ಯ ಸಂಗೀತ" ಹಾಗೂ ಅಕ್ಟೋಬರ್ 2-ಶ್ರೀ ವರಸಿದ್ಧಿ ವಿನಾಯಕ ಭಜನಾ ಮಂಡಳಿಯ ಸದಸ್ಯರಿಂದ "ಭಜನಾಮೃತ" ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಾಲಯದ ಪದಾಧಿಕಾರಿಗಳು ತಿಳಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456