ಶ್ರೀ ಸರ್ಕಲ್ ಮಾರಮ್ಮ ದೇವಿ ದೇವಸ್ಥಾನ "ನವರಾತ್ರಿ ವೈಭವ"
ಬೆಂಗಳೂರು: ಶ್ರೀ ಸರ್ಕಲ್ ಮಾರಮ್ಮ ದೇವಿ ದೇವಸ್ಥಾನದಲ್ಲಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರ ವರೆಗೆ "ನವರಾತ್ರಿ ವೈಭವ" ಕಾರ್ಯಕ್ರಮ ಆಯೋಜಿಸಿದ್ದು, ಸಮಾರಂಭದ ಎಲ್ಲಾ ದಿನಗಳಲ್ಲೂ ದೇವಿಗೆ ವಿಶೇಷ ಅಲಂಕಾರ, ಮಧ್ಯಾಹ್ನ 1-30ಕ್ಕೆ ಸಾಮೂಹಿಕ ಲಲಿತ ಸಹಸ್ರನಾಮ ಜರುಗಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿದಿನ ಸಂಜೆ 6-30ಕ್ಕೆ :
ಸೆಪ್ಟೆಂಬರ್ 23 : ಶೃಂಗಾರ ಲಹರಿ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ "ಹಾಡುಗಾರಿಕೆ" ನಿರ್ದೇಶನ : ಶ್ರೀಮತಿ ವಾಣಿಶ್ರೀ ಸುಂದರೇಶ್. ಸೆಪ್ಟೆಂಬರ್ 24 : ದೇವಸ್ಥಾನದ ಲಲಿತ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ "ಭಕ್ತಿ ಗೀತೆಗಳ ಗಾಯನ" ನಿರ್ದೇಶನ : ಶ್ರೀಮತಿ ಶ್ರೀದೇವಿ ಗರ್ತಿಕೆರೆ. ಸೆಪ್ಟೆಂಬರ್ 25 : ಶ್ರೀಮತಿ ಭವಾನಿ ಎಂ. ರಾವ್ ಮತ್ತು ಸಂಗಡಿಗರಿಂದ "ಹರಿನಾಮ ಸಂಕೀರ್ತನೆ".
ಸೆಪ್ಟೆಂಬರ್ 26 : ಶ್ರೀಮತಿ ಚಾಂದನಿ ಗರ್ತಿಗರೆ ಮತ್ತು ಸಂಗಡಿಗರಿಂದ "ಸಂಗೀತ ಸಂಭ್ರಮ". ಸೆಪ್ಟೆಂಬರ್ 27 : ಶಿವಲೀಲಾ ಸಂಗೀತ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ "ನವದುರ್ಗೆ ವೈಭವ" ನೃತ್ಯ ರೂಪಕ. ಸೆಪ್ಟೆಂಬರ್ 28 : ಲಲಿತ ಕಲಾ ಕೇಂದ್ರದ ಮಕ್ಕಳಿಂದ "ಭರತನಾಟ್ಯ" ನಿರ್ದೇಶನ : ಶ್ರೀಮತಿ ರೂಪಾ ಹೇಮಂತ್. ಸೆಪ್ಟೆಂಬರ್ 29 : ಕು|| ದಿವ್ಯಶ್ರೀ ರಂಗನಾಥನ್ ಮತ್ತು ಸಂಗಡಿಗರಿಂದ "ಸ್ಯಾಕ್ಸೋಫೋನ್ ವಾದನ". ಸೆಪ್ಟೆಂಬರ್ 30 : ಶ್ರೀ ಕಿಶೋರ್ ಕುಲಕರ್ಣಿ ಮತ್ತು ತಂಡದವರಿಂದ "ಸೀತಾ ಕಲ್ಯಾಣ" ಹರಿಕಥೆ. ಅಕ್ಟೋಬರ್ 1 : ಜಪಮಾಲಾ ಸ್ವರ ತಂಡದವರಿಂದ "ಭಜನಾಮೃತ" ನಿರ್ದೇಶನ : ಶ್ರೀಮತಿ ರಾಧಾ. ಅಕ್ಟೋಬರ್ 2 : ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಶ್ರೀ ಗಣೇಶ ಮತ್ತು ಅಮ್ಮನವರ "ಪಲ್ಲಕ್ಕಿ ಉತ್ಸವ". ಸ್ಥಳ : ಶ್ರೀ ಸರ್ಕಲ್ ಮಾರಮ್ಮ ದೇವಿ ದೇವಸ್ಥಾನ, ಭಾರತ ವಿಜ್ಞಾನ ಮಂದಿರದ ಹತ್ತಿರ, 18ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
