ಶ್ರೀಲಂಕಾ ರಾಜಮಹಾ ವಿಹಾರದಲ್ಲಿ ಯಶಸ್ವಿಗೊಂಡ 69ನೇ ಅಂತರಾಷ್ಟ್ರೀಯ ನೃತ್ಯೋತ್ಸವ

Nov 22, 2025 - 16:43
 0  3
ಶ್ರೀಲಂಕಾ ರಾಜಮಹಾ ವಿಹಾರದಲ್ಲಿ ಯಶಸ್ವಿಗೊಂಡ 69ನೇ ಅಂತರಾಷ್ಟ್ರೀಯ ನೃತ್ಯೋತ್ಸವ

     ಬೆಂಗಳೂರು: ಭಾರತದ ನ್ಯಾಷನಲ್ ಕ್ಲಾಸಿಕಲ್ ಡಾನ್ಸ್ ಅಕಾಡೆಮಿ ಮತ್ತು ಶ್ರೀಲಂಕಾದ SUNFO ಗ್ಲೋಬಲ್ ಫೆಡರೇಶನ್ ಸಂಯುಕ್ತ ಆಶ್ರಯದಲ್ಲಿ  ಇತ್ತೀಚೆಗೆ ಸುನೇತ್ರಾ ದೇವಿ ಪುರಾತನ ರಾಜಮಹಾ ವಿಹಾರ – ಪೆಪಿಲಿಯಾನ ನಡೆದ 69ನೇ ಅಂತರ್ರಾಷ್ಟ್ರೀಯ ನೃತ್ಯೋತ್ಸವದ ಕಾರ್ಯಕ್ರಮವನ್ನು ಶ್ರೀಲಂಕಾ ಬೋಧ ವಿಹಾರದ ಗುರುಗಳಾದ ಸ್ವಾಮೀಜಿಯವರು ಉದ್ಘಾಟನೆ ಮಾಡಿ ಮಾತನಾಡಿದ ಭಾರತೀಯ ಸಾಂಸ್ಕೃತಿಕ ಕಲೆಗಳನ್ನು ಪ್ರೋತ್ಸಾಹಿಸುತ್ತಾ  ಬರುತ್ತಿರುವ ಭಾರತದ ಶ್ರೇಷ್ಠ ನೃತ್ಯ ಕಲಾವಿದೆ  ಗಿನ್ನೀಸ್ ದಾಖಲೆ ವಿದುಷಿ  ಡಾ. ಸ್ವಾತಿ ಪಿ. ಭಾರದ್ವಾಜ್  ಅವರು ಸತ್ಕಾರ್ಯಪೂರ್ಣವಾಗಿ ಆಯೋಜಿಸಿದರು.

ಅವರು ದೇಶ–ವಿದೇಶಗಳಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯದ ಪ್ರಚಾರಕ್ಕಾಗಿ ನೀಡುತ್ತಿರುವ ಕೊಡುಗೆಯನ್ನು ಗುರುತಿಸಿ ಶ್ರೀಲಂಕದ ವೇದಿಕೆಗೆ ಆಹ್ವಾನಿಸುತ್ತೇವೆ  ಇತ್ತೀಚಿನ ಮಕ್ಕಳು ಮತ್ತು ಯುವ ಪೀಳಿಗೆಗಳು ಭಾರತೀಯ ಸಂಸ್ಕೃತಿ , ಸಂಸ್ಕಾರಕ್ಕೆ ಒಳಪಡುವ ನೃತ್ಯ ಸಂಗೀತ ಇತ್ಯಾದಿ ಕಲೆಗಳನ್ನು ಮೈಗೂಡಿಸಿಕೊಂಡರೆ ದೇಶದ ಸಂಸ್ಕೃತಿಯನ್ನು ಉಳಿಸುವ ಜೊತೆಗೆ ಮಾದರಿ ಬದುಕು ಕಟ್ಟಿಕೊಳ್ಳಲು ಕಾಲ ಕಲಿಕೆಗಳು ಸಹಕರಿಸುತ್ತವೆ  ಭಾರತ ಮತ್ತು ಶ್ರೀಲಂಕಾ ಸಂಸ್ಕೃತಿಯ ಸ್ನೇಹ ಪಡೆಯ ಮತ್ತು ಜಾಗಲೀಕ ಶಾಂತಿ ಸಂದೇಶ ಹರಡುವ ಉದ್ದೇಶವನ್ನು ಹೊತ್ತ ಈ ದಿನದ ವೇದಿಕೆ ಯುವ ಕಲಾವಿದರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಕಲೆಯನ್ನ ಪ್ರದರ್ಶನಗೊಳಿಸಲು ಮಹತ್ವದ ಅವಕಾಶ  ನೃತ್ಯೋತ್ಸವದಲ್ಲಿ  ಶ್ರೀಮತಿ ಶಾಲಿನಿ ಹೆಬ್ಬಾರ್ ಅವರ ಶಿಷ್ಯರು ಹಾಗೂ ಶ್ರೀಮತಿ ಲಕ್ಷ್ಮಿ ತೇರ್ಡಲ್ಮಠ ಅವರ ಶಿಷ್ಯರು ನೃತ್ಯ ಪ್ರದರ್ಶನ ನೀಡಿದ್ದು, ನೃತ್ಯಬಿಂಬಗಳ ಮೂಲಕ ಭಾರತೀಯ ಶಾಸ್ತ್ರೀಯ ಕಲೆಯ ಭಾವಭರಿತ ಸೊಬಗು ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು.

ಕಾರ್ಯಕ್ರಮದ ಗೌರವ ಅತಿಥಿಗಳಾಗಿ SUNFO ಡೈರೆಕ್ಟರ್ ಜನರಲ್ ಹಾಗೂ ಪೀಸ್ ಅ್ಯಾಂಬಾಸಿಡರ್ ಡಾ. ಸರ್ ದೇಶಪ್ರಿಯಾ ಎಸ್. ವಿಜಯತುಂಗ, ಲಯನ್ ಬಿ. ಸರತ್ ಪ್ರೇಮಸಿರಿ ಪೆರೇರಾ (SFSUNFO), ಲಯನ್ ಇಂಜಿ. ಹೆಚ್.ಬಿ. ಪ್ರೇಮದಾಸ (SFSUNFO) ಮತ್ತು ಲಯನ್ ಎಂ.ಡಿ. ಪ್ರೇಮಚಂದ್ರ (SFSUNFO) ಅವರುಗಳು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಗೌರವದ ಕಳೆಗಳನ್ನು ಹೆಚ್ಚಿಸಿದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456