ಸುಮಾರು 1.5 ಕೋಟಿ ರೂ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಎಸ್ಎನ್ ಸುಬ್ಬಾರೆಡ್ಡಿ
ಭಾಗ್ಯನಗರ: ಗೊರ್ತಪಲ್ಲಿ ಗ್ರಾಮದ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ರಸ್ತೆ ಕಾಮಗಾರಿ ಸುಮಾರು 60 ಲಕ್ಷ ರೂಪಾಯಿ ಮತ್ತು ತಿಮ್ಮoಪಲ್ಲಿ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದ ಹೆಚ್ಚುವರಿ ಕಟ್ಟಡ ನಿರ್ಮಾಣ ಸುಮಾರು 80 ಲಕ್ಷ ರೂಪಾಯಿ ಸೇರಿದಂತೆ ಒಟ್ಟು ಸುಮಾರು 1.5 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಲಾಗಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದ್ದಾರೆ.
ತಾಲೂಕಿನ ಗೂಳೂರು ಹೋಬಳಿ ತಿಮ್ಮoಪಲ್ಲಿ ಗ್ರಾಮ ಪಂಚಾಯಿತಿ ಗೊರ್ತಪಲ್ಲಿ ಗ್ರಾಮದ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ರೂ 60 ಲಕ್ಷ ರೂ ರಸ್ತೆ ನಿರ್ಮಾಣ ಕಾಮಗಾರಿ ಮತ್ತು ತಿಮ್ಮoಪಲ್ಲಿ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದ ಹೆಚ್ಚುವರಿ ಕಟ್ಟಡ ನಿರ್ಮಾಣ 80 ಲಕ್ಷ ರೂ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಗೊರ್ತಪಲ್ಲಿ ಗ್ರಾಮದ ಜನರ ಅನೇಕ ವರ್ಷಗಳ ಬೇಡಿಕೆಯಂತೆ ಇಂದು ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ರಸ್ತೆ ನಿರ್ಮಾಣ ಸುಮಾರು 60 ಲಕ್ಷ ರೂಪಾಯಿ ಮತ್ತು ತಿಮ್ಮoಪಲ್ಲಿ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದ ಹೆಚ್ಚುವರಿ ಕಟ್ಟಡ ನಿರ್ಮಾಣ ಸುಮಾರು 80 ಲಕ್ಷ ರೂಪಾಯಿ ಸೇರಿದಂತೆ ಒಟ್ಟು ಸುಮಾರು 1.5 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಲಾಗಿದೆ,ಯಾವುದೇ ಕಟ್ಟಡಗಳ ಕಾಮಗಾರಿಯಾಗಲಿ ಹಾಗೂ ರಸ್ತೆ ನಿರ್ಮಾಣಗಳ ಕಾಮಗಾರಿಯಾಗಲಿ ಕಳಪೆ ಕಾಮಗಾರಿ ನಡೆಯದಂತೆ ಸಾರ್ವಜನಿಕರು ಎಚ್ಚರ ವಹಿಸಬೇಕು ಹಾಗೂ ಕಳಪೆ ಕಾಮಗಾರಿ ನಡಯದಂತೆ ಗುಣಮಟ್ಟದ ಅಂತರವನ್ನು ಕಾಯ್ದುಕೊಲ್ಲಬೇಕು ಎಂದು ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಸಂಧರ್ಭದಲ್ಲಿ ಕಾಂಗ್ರೇಸ್ ಮುಖಂಡರಾದ ಗೊರ್ತಪಲ್ಲಿ ಶಂಕರ್ ರೆಡ್ಡಿ,ಗುತ್ತಿಗೆದಾರರಾದ ಶ್ರೀನಿವಾಸ್ ನಾಯ್ಕ್,ಶ್ರೀರಾಮ ನಾಯ್ಕ್,ಗಡ್ಡಮ್ ರಮೇಶ್ ಗೊರ್ತಪಲ್ಲಿ ಭಿಕ್ಷವಾತಮ್ಮ,ಇಮಾಜ ಸುರೇಶ್ ಯಮಣ್ಣ,ಮೈತಾಳಮ್ಮ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ. ಆರ್. ನರೇಂದ್ರ, ಸೇರಿದಂತೆ ಮತ್ತಿತರರು ಇದ್ದರು.... ವರದಿ ಸುಬ್ಬು ಭಾಗ್ಯನಗರ
What's Your Reaction?
Like
3
Dislike
0
Love
0
Funny
0
Angry
0
Sad
0
Wow
0
