ಅದ್ದೂರಿ ಭರತನಾಟ್ಯ ನೃತ್ಯ ಪ್ರದರ್ಶನದ ಮೂಲಕ ಪೋಷಕರ ಮನಗೆದ್ದ ಶ್ವೇತಾಂಜಲಿ ಭರತನಾಟ್ಯ ಶಾಲೆ

Nov 19, 2025 - 12:46
 0  4
ಅದ್ದೂರಿ ಭರತನಾಟ್ಯ ನೃತ್ಯ ಪ್ರದರ್ಶನದ ಮೂಲಕ ಪೋಷಕರ ಮನಗೆದ್ದ ಶ್ವೇತಾಂಜಲಿ ಭರತನಾಟ್ಯ ಶಾಲೆ

  ಕಲಾಸೇವಾ, ಅನಿಕೇತನ, ಕನ್ನಡ ವೈಭವ, ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಶ್ವೇತನಾಗರಾಜ್ ಇವರ ಸಾರಥ್ಯದಲ್ಲಿ ಬೆಂಗಳೂರಿನ ಜೆ.ಸಿ ರಸ್ತೆಯಲ್ಲಿನ ನಯನ ಸಭಾಂಗಣ (ಕನ್ನಡ ಭವನ) ದ ಪ್ರಮುಖ ವೇದಿಕೆಯಲ್ಲಿ ಶಾಲೆಯ 13 ನೇ ವರ್ಷದ ವಾರ್ಷಿಕೋತ್ಸವ, ಭರತನಾಟ್ಯ ನೃತ್ಯ ಪ್ರದರ್ಶನ, ಹಾಗೂ ಮಕ್ಕಳಿಗೆ ನಾಟ್ಯ ಮಯೂರಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ  ಉದ್ಘಾಟಿಸಿದ ಕೋಲಾರದ ನಿವೃತ್ತ ಜಿಲ್ಲಾಧಿಕಾರಿಗಳು, ಚಿಂತಕರು, ಲೇಖಕರಾದ ಡಾ.ಡಿ.ಎಸ್ ವಿಶ್ವನಾಥ್ ರವರು ಮಾತನಾಡುತ್ತಾ "ಶ್ವೇತಾಂಜಲಿ ಭರತನಾಟ್ಯ ಶಾಲೆಯ ಸಾಂಸ್ಕೃತಿಕ ಸೇವೆ ವಿಶ್ವ ಮಟ್ಟದಲ್ಲಿ ತಲುಪಿರುವುದು ನಿಜಕ್ಕೂ ಹೆಮ್ಮೆ, ನಿರಂತರವಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಾವಿರಾರು ಗ್ರಾಮೀಣ ಪ್ರದೇಶದಲ್ಲಿನ ಸೂಪ್ತ ಪ್ರತಿಭೆಗಳ ಕಲೆಯನ್ನು ಅನಾವರಣ ಮಾಡುತ್ತಿರುವುದು ಶ್ಲಾಘನೀಯ.  ಭರತನಾಟ್ಯ ಕಲೆಯು ಭಾರತೀಯ ಸಂಸ್ಕೃತಿಯ ಪ್ರತೀಕ ಇದನ್ನು ಉಳಿಸಿ, ಬೆಳೆಸಿ ಉತ್ತಮ ಹಾದಿಯಲ್ಲಿ ಹೆಜ್ಜೆ ಇರಿಸುತ್ತಿರುವ ಶ್ರೀಮತಿ ಶ್ವೇತನಾಗರಾಜ್ ಹಾಗೂ ಲಕ್ಕೂರು ನಾಗರಾಜ್ ದಂಪತಿಗಳಿಗೆ ಅಭಿನಂದನೆ" ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ  ನಾಡಿನ ಹೆಸರಾಂತ ಲೇಖಕರು, ಚಿಂತಕರು,  ಜನಪ್ರಿಯ ಪತ್ರಕರ್ತರು, ಅಂಕಣಕಾರರು, ಹಾಗೂ  ಜ್ಞಾನ ಗಂಗಾ  ಸಾಹಿತ್ಯ ಹಾಗೂ ಸಾಂಸ್ಕೃತಿಕ ರಂಗ ಅಧ್ಯಕ್ಷರಾದ ಶ್ರೀ ಮಣ್ಣೆ ಮೋಹನ್ ರವರು ಮಾತನಾಡುತ್ತಾ "ದೇಶೀಯ ಸಂಸ್ಕೃತಿಯನ್ನು ಪ್ರತಿ ಬಿಂಬಿಸುವ ಭರತನಾಟ್ಯ ಕಲೆ, ನಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸುವ ಕಲೆಯಾಗಿದೆ, ಭಾರತೀಯ ಸಂಸ್ಕಾರ, ಸಂಸ್ಕೃತಿ ಮತ್ತು ಮಾನವೀಯ ಮೌಲ್ಯವರ್ಧನೆಗೆ ಕಲೆಯೇ ಆಧಾರ. ಈ ನಿಟ್ಟಿನಲ್ಲಿ ಸ್ಥಳೀಯ ಗ್ರಾಮೀಣ ಮಕ್ಕಳಿಗೆ ಭರತನಾಟ್ಯ ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಉತ್ತಮ ಹಾದಿಯಲ್ಲಿ ಬೆಳೆಸುತ್ತಿರುವುದು ಈ ನಾಡಿನ ಬಹುಮುಖ್ಯ ಅಸ್ಮಿತೆ ಆಗಿದೆ" ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಗೀತ ವಿದ್ವಾಂಸರು, ಹಾಗೂ ಕಲಾವಿದರಾದ ಶ್ರೀಮತಿ ಕಲಾ ಶ್ರೀನಿವಾಸ್ ರವರು ಮಾತನಾಡುತ್ತಾ "ಶ್ವೇತಾಂಜಲಿ ಭರತನಾಟ್ಯ ಶಾಲೆಯ ಇಂದಿನ ರಾಷ್ಟ್ರ ಮಟ್ಟದಲ್ಲಿನ ಪ್ರಗತಿ ನಿಜಕ್ಕೂ ಗಗನ ಕುಸುಮವಾದದ್ದು, ಪ್ರೀತಿಯ ಶಿಷ್ಯ ಶ್ರೀಮತಿ ಶ್ವೇತನಾಗರಾಜ್ ಇಂದು ಬಹು ಎತ್ತರದ ಮಟ್ಟದಲ್ಲಿ ಬೆಳೆದು ನಿಂತಿರುವುದು ಭರತನಾಟ್ಯ ಕಲೆಯನ್ನು ವಿಶ್ವಮಟ್ಟದಲ್ಲಿ ಬೆಳೆಸುತ್ತಿರುವುದು ಚರಿತ್ರೆಯಲ್ಲಿ ಶಾಶ್ವತವಾಗಿ ಉಳಿಯಲಿದೆ" ಎಂದರು.

ಕಾರ್ಯಕ್ರಮದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಸಹ ನಿರಂತರವಾಗಿ ಸುಮಾರು 30 ಕ್ಕೂ ಅಧಿಕ ನೃತ್ಯಗಳಿಗೆ ನೃತ್ಯ ಮಾಡಿದ ಶ್ವೇತಾಂಜಲಿ ಭರತನಾಟ್ಯ ಶಾಲೆಯ ಮಕ್ಕಳಿಗೆ "ನಾಟ್ಯ ಮಯೂರಿ" ಪ್ರಶಸ್ತಿಯನ್ನು ರಮಣಶ್ರೀ ಪ್ರಶಸ್ತಿ ಪುರಸ್ಕೃತರು, ಸಗರನಾಡು ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಪ್ರಕಾಶ್ ಎಸ್ ಅಂಗಡಿ ಕನ್ನಳ್ಳಿ ಹಾಗೂ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ವಿಜಯ್ ಕುಮಾರ್ ಸೋನಾರೆ ರವರು ವಿತರಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಶ್ವೇತಾಂಜಲಿ ಭರತನಾಟ್ಯ ಶಾಲೆ ಹಾಗೂ ವಿಶ್ವಮಾನವ ಕುವೆಂಪು ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶ್ವೇತನಾಗರಾಜ್, ರಾಜ್ಯ ಅಧ್ಯಕ್ಷರದ ಲಕ್ಕೂರು ಎಂ.ನಾಗರಾಜ್, ಶ್ವೇತಾಂಜಲಿ ಭರತನಾಟ್ಯ ಶಾಲೆಯ ಪೋಷಕರು, ಮಕ್ಕಳು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456