ಇಪ್ಪತ್ತೊಂದು ಪಲ್ಲಕ್ಕಿಗಳ ಮೆರವಣಿಗೆ
ತಾಳಿಕೋಟಿ:-ತಾಲೂಕಿನ ಬೆಕಿನಾಳ ಗ್ರಾಮದ ಶ್ರೀ ಪವಾಡ ಮಹಾಪುರುಷ ದೊಡ್ಡಪ್ಪ ಮುತ್ತ್ಯಾರವರ ಜಾತ್ರಾಮಹೋತ್ಸವದ ಅಂಗವಾಗಿ ಮಾರ್ಚ್ 24 ಮಂಗಳವಾರದಂದು ಇಪ್ಪತ್ತೊಂದು ಪಲ್ಲಕ್ಕಿ ಮೆರವಣಿಗೆ ಉತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ.
ಮುಂಜಾನೆ 10 ಗಂಟೆಗೆ ಇಪ್ಪತ್ತೊಂದು ಪಲ್ಲಕ್ಕಿಗಳನ್ಮು ಗಂಗಸ್ಥಳ ಮಾಡಿಕೊಂಡು ಗ್ರಾಮದ ಪ್ರಮುಖ ಬೀದಿಯಲ್ಲಿ ಡೊಳ್ಳು ವಾಲಗದೊಂದಿಗೆ ಮೆರವಣಿಗೆಯ ಮುಖಾಂತರ ದೇವಸ್ಥಾನಕ್ಕೆ ಬರಮಾಡಿಕೋಳ್ಳುವುದು.
ನಂತರ ಮಂಗಳವಾರದಂದು ಹಗಲು ಸುಪ್ರಸಿದ್ಧ ಜಿದ್ದಾಜಿದ್ದಿನ ಡೊಳ್ಳಿನ ಪದಗಳು ಜರಗುತ್ತದೆ. ಅಂದೆ ರಾತ್ರಿ 10 ಗಂಟೆಗೆ ಶ್ರೀ ಗುಡ್ಡಾಪುರ ದಾನಮ್ಮ ದೇವಿಯ ಮಹಾತ್ಮೆ ಎಂಬ ಸುಂದರ ಪೌರಾಣಿಕ ನಾಟಕ ಇರುತ್ತದೆ ಎಂದು ದೇವಸ್ಥಾನದ ಪಟ್ಟದ ಪೂಜಾರಿಯಾದ ಶ್ರೀ ಪ್ರಕಶಮುತ್ತ್ಯಾ ಅವರು ಪ್ರಕಟಣೆಯಲ್ಲಿ ತಿಳಿಸಿದರು.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
