ಕನ್ನಡ ಭಾಷೆ ಬೆಳಸಿ ಉಳಿಸಿ ನಮ್ಮ ಭಾಷೆ ನಮ್ಮ ತಾಯಿಗೆ ಸಮಾನ-ಶಾಸಕ ಎಸ್.ಏನ್.ಸುಬ್ಬಾರೆಡ್ಡಿ
ಭಾಗ್ಯನಗರ: ರಾಜ್ಯದಲ್ಲಿ ನಮಗೆ ಬಹಳ ಮುಖ್ಯವಾದ ಹಬ್ಬಗಳಲ್ಲಿ ಎಲ್ಲರೂ ಸೇರಿ ಒಗ್ಗಟ್ಟಿನಿಂದ ಸಂಭ್ರಮ ಸಡಗರದಿಂದ ಮಾಡುವ ಹಬ್ಬ ಎಂದರೆ ಅದು ನವೆಂಬರ್ ಒಂದರಂದು ಆಚರಣೆ ಮಾಡುವ ಕನ್ನಡ ರಾಜ್ಯೋತ್ಸವ ನಮ್ಮ ಪಾಲಿಗೆ ದೊಡ್ಡ ಹಬ್ಬ ಎಂದು ನಾನು ಭಾವಿಸುತ್ತೇನೆ ಎಂದು ಶಾಸಕ ಎಸ್. ಎನ್. ಸುಬ್ಬಾರೆಡ್ಡಿ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ 70 ನೇ ಕನ್ನಡ ರಾಜ್ಯೋತ್ಸವದ ದಿನಾಚರಣೆಯಉದ್ಘಾಟನೆ ಮಾಡಿ ಮಾತನಾಡಿದ ಅವರು ನಮ್ಮ ತಾಲ್ಲೂಕು ಆಂದ್ರಪ್ರದೇಶದ ಗಡಿ ಭಾಗಕ್ಕೆ ಹೊಂದಿ ಕೊಂಡಿದ್ದರು ಇಲ್ಲಿ ಕನ್ನಡ ಕಟ್ಟುವ ಕೆಲಸದಲ್ಲಿ ಕನ್ನಡ ಪರ ಸಂಘಟನೆಗಳು ಕ್ರಿಯಾ ಶೀಲ ವಾಗಿವೆ ಚಿತ್ರಾವತಿ ಬ್ಯಾರೇಜ್ ನಿರ್ಮಾಣಕ್ಕಾಗಿ ಬಾಗೇಪಲ್ಲಿ ಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿದ ಇತಿಹಾಸವಿದೆ ಮುಖ್ಯವಾಗಿ ಮನೆಗಳಲ್ಲಿ ನೀವು ನಮ್ಮ ಮಾತ್ರುಭಾಷೆ ಕನ್ನಡ ಮಾತನಾಡುವುದು ಅಭ್ಯಾಸ ಮಾಡಿಕೊಳ್ಳಬೇಕು ಎಂದರು.
ಕಳೆದ ವರ್ಷ ರಾಜ್ಯೋತ್ಸವದಲ್ಲಿ ಕನ್ನಡ ಭವನಕ್ಕೆ ಜಾಗ ಗುರುತಿಸಿ ನೀಡುತ್ತೇನೆ ಎಂದು ಭರವಸೆ ನೀಡಿದ್ದೆ ಕನ್ನಡ ಪರ ಹೋರಾಟಗಾರ ಬೇಡಿಕೆಯಂತೆ ಕನ್ನಡ ಭವನ ನಿರ್ಮಾಣಕ್ಕಾಗಿ ಸುಮಾರು 20 ಕುಂಟೆ ಜಮೀನನ್ನು ಮಂಜೂರು ಮಾಡಲಾಗಿದೆ ಒಂದು ವಾರದ ಒಳಗೆ ಆದೇಶ ಪತ್ರ ವಿತರಣೆ ಮಾಡಲಾಗುವುದು ಜೊತೆಗೆ ಅತ್ಯುತ್ತಮ ಭವ್ಯ ಭವನ ನಿರ್ಮಾಣ ಮಾಡಲು ಸಂಪೂರ್ಣ ಸಹಕಾರ ನೀಡುವುದಾಗಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭರವಸೆ ನೀಡಿದ್ದಾರೆ.
ತಾಲ್ಲೂಕು ದಂಡಾಧಿಕಾರಿ ಶ್ರೀಮತಿ ಮನಿಷಾ ಮಹೇಶ್ ಪತ್ರಿ ಮಾತನಾಡಿ ಹಳೆ ಮೈಸೂರು ನಾಲ್ಕು ಪ್ರಾಂತ್ಯಗಳನ್ನು ಏಕಿಕಣ ಮಾಡಿ ಕರ್ನಾಟಕ ರಾಜ್ಯ ಎಂದು ನಾಮಕರಣ ಮಾಡಿ 69. ವರ್ಷಗಳಾಗಿವೆ ನವೆಂಬರ್ ಒಂದರಂದು ಇಡಿ ರಾಜ್ಯದಲ್ಲಿ ಸಂಭ್ರಮ ಸಡಗರದಿಂದ ಸಾಮೂಹಿಕವಾಗಿ ಎಲ್ಲರೂ ಸೇರಿ ಒಗ್ಗಟ್ಟಿನಿಂದ ನಾಡ ದೇವತೆ ತಾಯಿ ಭುವನೇಶ್ವರಿ ದೇವಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತವೆ, ಮುಖ್ಯವಾಗಿ ಸರ್ಕಾರಿ ಕಚೇರಿಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಕನ್ನಡದಲ್ಲೇ ಮಾತನಾಡಬೇಕು ಗಡಿಭಾಗವಾದರು ಇಲ್ಲಿ ನೆಲ, ಜಲ, ಭಾಷೆ, ಸಮಸ್ಯೆಗಳು ಬಂದಾಗ ಕನ್ನಡವನ್ನು ಕಟ್ಟಿ ಉಳಿಸಿ ಬೆಳೆಸುವಲ್ಲಿ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿವೆ ಎಂದರು.
ಮುಖ್ಯ ಭಾಷಣಕಾರರಾಗಿ ಕಸಾಪ ಅಧ್ಯಕ್ಷ ಚಿನ್ನ ಕೈವಾರಮಯ್ಯ ವ್ಯವಹರಿಸಿದರು,ಇದೆ ಸಂದರ್ಭದಲ್ಲಿ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಹಾಗೂ ಸರ್ಕಾರಿ ಶಾಲೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಪುರಸಭೆ ಅಧ್ಯಕ್ಷ ಎ.,ಶ್ರೀನಿವಾಸ್, ಉಪಾಧ್ಯಕ್ಷೆ ಸುಜಾತ ನರಸಿಂಹನಾಯ್ಡು, ಗ್ಯಾರಂಟಿ ಯೋಜೆನಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್. ಎಸ್. ನರೇಂದ್ರ, ಪುರಸಭೆ ಸದಸ್ಯರಾದ ಶ್ರೀನಿವಾಸ್ ರೆಡ್ಡಿ, ಗಡ್ಡಮ್ ರಮೇಶ್,ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ರಮೇಶ್,ಪುರಸಭೆ ಮುಖ್ಯಧಿಕಾರಿ ಶ್ರೀನಿವಾಸ್,ಪೊಲೀಸ್ ಇನ್ಸ್ಪೆಕ್ಟರ್ ಪ್ರಶಾಂತ್ ವರ್ಣಿ, ಪಶುಇಲಾಖೆ ಕೃಷ್ಣಾ ಮೂರ್ತಿ,ಹಿಂದುಳಿದ ವರ್ಗಗಳ ಕಾಲ್ಯಾಣ ಇಲಾಖೆ ಶಿವಪ್ಪ,ಕರವೇ ಅಧ್ಯಕ್ಷ ಕೆ. ಎನ್. ಹರೀಶ್, ಬಾಬಾಜಾನ್, ಬಿಟಿಸಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
