ಬೆಂಗಳೂರು: ಕುಲದಲ್ಲಿ ಕೀಳ್ಯಾವದೋ ಚಲನಚಿತ್ರದ ನಟ, ನಟಿಯರು ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದರು ಇದರಲ್ಲಿ ನಟ ಕರಿಸುಬ್ಬುರವರು ಮಡೆನೂರು ಮನು ಕುರಿತು ಮಾತನಾಡುವ ಸಂದರ್ಭದಲ್ಲಿ ಊರು ಎಂದರೆ ಹೊಲಗೇರಿ ಇರುತ್ತದೆ, ಹೊಲಗೇರಿ ಸೇರಿಕೊಂಡಿದೆ ಎಂಬ ಮಾತನ್ನಾಡುತ್ತಾರೆ ಇದರ ವಿವಾದತ್ಮಕ ಹೇಳಿಕೆ ಖಂಡಿಸಿ ಡಾ||ಬಿ.ಆರ್.ಅಂಬೇಡ್ಕರ್ ಜನಪದ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಬಾಲಕೃಷ್ಣ ನಾಯಕ ರವರು ಖಂಡನೆ ವ್ಯಕ್ತಪಡಿಸಿದ್ದರು.
ಇದೇ ಸಂದರ್ಭದಲ್ಲಿ * ಬಾಲಕೃಷ್ಣ ನಾಯಕ್ ರವರು* ಮಾತನಾಡಿ ಹೊಲೆಯರು ಎಂದರೆ ಹೊಲದ ಒಡೆಯ ಎಂಬರ್ಥ ಇದೆ, ನಮ್ಮ ಸಮುದಾಯಕ್ಕೆ ತನ್ನದೇ ಆದ ಇತಿಹಾಸ ಹೊಂದಿದೆ.
2000 ಸಾವಿರ ವರ್ಷಗಳಿಂದ ನಮ್ಮ ಸಮುದಾಯಕ್ಕೆ ಶೋಷಣೆ ಮಾಡಿದರು, ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರು ನಮ್ಮ ಮೇಲೆ ಅಪಮಾನ ,ಶೋಷಣೆ ಇನ್ನು ಯಾಕೆ ನಿಲ್ಲುತ್ತಿಲ್ಲ ಎಂಬುದು ವಿಷಾದಕರ ಸಂಗತಿ.
ನಟ ಕರಿಸುಬ್ಬು ರವರ ಅವಹೇಳನಕಾರಿ ಮಾತನಾಡುವಾಗ ಜೊತೆಯಲ್ಲಿ ಇದ್ದಂತ ನಟಿ ಮೌನ, ಹಿರಿಯ ನಟ ಉಮೇಶ್ ಮತ್ತು ಭೀಮ ಚಿತ್ರದಲ್ಲಿ ಖ್ಯಾತಿಯಾಗಿ ಕಾಣಿಸಿಕೊಂಡಿರುವ ಡ್ಯಾಗನ್ ಮಂಜುರವರು ಉಪಸ್ಥಿತರಿದ್ದರು ಇವರೆಲ್ಲರೂ ಸಹ ಮೌನವಹಿಸಿರುವುದು ಖಂಡನೀಯ.
ನಟ ಕರಿಸುಬ್ಬುರವರು ಕೊಡಲೆ ಕ್ಷಮೆ ಕೇಳಬೇಕು ಇಲ್ಲ ಅಂದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.