ಖುದ್ದಾಗಿ ಸ್ಥಳದಲ್ಲೇ ನಿಂತು ರಾಜಕಾಲುವೆ ಒತ್ತುವರಿ ತೆರುವುಗೊಳಿಸಿದ ಶಾಸಕಿ ರೂಪಕಲಾ

Jun 17, 2025 - 17:19
 0  3
ಖುದ್ದಾಗಿ ಸ್ಥಳದಲ್ಲೇ ನಿಂತು ರಾಜಕಾಲುವೆ ಒತ್ತುವರಿ ತೆರುವುಗೊಳಿಸಿದ ಶಾಸಕಿ ರೂಪಕಲಾ

ಬೇತಮಂಗಲ: ಎನ್.ಜಿ.ಹುಲ್ಕೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಣ್ಣಕುಪ್ಪ ಗ್ರಾಮದಲ್ಲಿ 35 ವರ್ಷಗಳಿಂದ ರಾಜಕಾಲುವೆಯನ್ನು ಅಲ್ಲಿನ ಅಕ್ಕಪಕ್ಕ ರೈತರು ಒತ್ತುವರಿ ಮಾಡಿಕೊಂಡಿದ್ದು ಶಾಸಕಿ ರೂಪಕಲಾ ಸ್ಥಳಕ್ಕೆ ಭೇಟಿ ನೀಡಿ ಖುದ್ದಾಗಿ ಸ್ಥಳದಲ್ಲೇ ನಿಂತು ಜೆಸಿಬಿ ಮೂಲಕ ರಾಜ ಕಾಲುವೆಯನ್ನು ತೆರವುಗೊಳಿಸಲಾಯಿತು.

 ಪಟ್ಟಣದ ಸಮೀಪದ ಎನ್‌ಜಿ ಹುಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಣ್ಣಕುಪ್ಪ ಗ್ರಾಮಕ್ಕೆ  ಶಾಸಕಿ ರೂಪಕಲಾ ಭೇಟಿ ನೀಡಿ ರಾಜಕಾಲುವೆ ಒತ್ತುವರಿ ತೆರುವುಗೊಳಿಸಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
 ಬಹಳ ದಿನಗಳಿಂದ ಗ್ರಾಮದ ರೈತರು ತಮ್ಮ ತೋಟಗಳಿಗೆ ಹೋಗಲು ಮತ್ತು ತೋಟದಲ್ಲಿ ಬೆಳೆ ಬೆಳೆದರೆ  ಬೆಳೆಯನ್ನು ಸಾಗಿಸಲು ಸೂಕ್ತ ರಸ್ತೆ ಇಲ್ಲದ ಕಾರಣ ಗ್ರಾಮದ ರೈತರು ಹಾಗೂ ಮುಖಂಡರು ಸೇರಿ ನನ್ನ ಬಳಿ ಬಂದು ತಮ್ಮ ಸಮಸ್ಯೆಯ ಬಗ್ಗೆ ತಿಳಿಸಿದರು.ಅದರಂತೆಯ ಗ್ರಾಮದ ಮುಖಂಡರ ಜೊತೆ ಚರ್ಚಿಸಿ ಕಂದಾಯ ಅಧಿಕಾರಿಗಳೊಂದಿಗೆ ಸರ್ವೇ ಕಾರ್ಯ ಮಾಡಿಸಿದಾಗ ಆ ಸ್ಥಳದಲ್ಲಿ ಸುಮಾರು 60 ಅಡಿಯಷ್ಟು ರಾಜಕಾಲುವೆ ಹಾದುಹೋಗುತ್ತದೆ ಎಂದು ಕಂಡುಬಂದಿತು. ಈ ರಾಜಕಾಲುವೆ 2 ಗ್ರಾಮಗಳ ಮೂಲಕ ಹಾದುಹೋಗುತ್ತದೆ ಮತ್ತು ಈ ರಾಜಕಾಲುವೆ ಮುಚ್ಚುಹೋಗಿರುತ್ತದೆ ಕೆಲವರು ರೈತರು ಒತ್ತುವರಿ ಸಹ ಮಾಡಿಕೊಂಡಿರುತ್ತಾರೆ ಎಂದು ತಿಳಿಸಿದರು.
 ಆದ್ದರಿಂದ ಈ ದಿನ ಗ್ರಾಮಕ್ಕೆ ಭೇಟಿ ಗ್ರಾಮಸ್ಥರ ಸಮ್ಮುಖದಲ್ಲಿ ಮೊದಲಿಗೆ ರಾಜಕಾಲುವೆ ಒತ್ತುವರಿ ತೆರುವುಗೊಳಿಸಿ 20 ಅಡಿಯಷ್ಟು ರಾಜಕಾಲುವೆಯನ್ನು ಮಾಡಲಾಗುತ್ತದೆ. ಹಾಗೂ ತಹಸೀಲ್ದಾರ್ ಮತ್ತು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ಜೊತೆ ಚರ್ಚಿಸಿ ಮತ್ತೊಂದು ದಿನ ಗ್ರಾಮಕ್ಕೆ ಭೇಟಿ ನೀಡಿ ರೈತರು ತೋಟಗಳಿಗೆ ಹೋಗಲು ರಸ್ತೆ ಮಾಡಿಕೊಡಲು ಅನುಕೂಲ ಮಾಡಿಕೊಡುತ್ತೇವೆ ಎಂದು ರೈತರಿಗೆ ಭರವಸೆ ಕೊಟ್ಟರು.

ಮುಖಂಡ ಎಂ ಬಿ ಕೃಷ್ಣಪ್ಪ ಮಾತನಾಡಿ ಸುಮಾರು 35 ವರ್ಷಗಳಿಂದ ರಾಜ ಕಾಲುವೆಯನ್ನು ಗ್ರಾಮದ ಅಕ್ಕಪಕ್ಕ ರೈತರು ಒತ್ತುವರಿ ಮಾಡಿಕೊಂಡಿದ್ದು ಮತ್ತು 30 40 ರೈತರು ತಮ್ಮ ತೋಟಗಳಲ್ಲಿ ಬೆಳೆದ ಬೆಳೆಯನ್ನು ಸಾಗಿಸಲು ಸೂಕ್ತ ರಸ್ತೆ ಇಲ್ಲದೆ ರೈತರಿಗೆ ಸಮಸ್ಯೆಯಾಗಿತ್ತು. ಶಾಸಕರಿಗೆ ಮನವಿಯನ್ನು ಸಲ್ಲಿಸಿದಾಗ ನಮ್ಮ ಸಮಸ್ಯೆಗೆ ಸ್ಪಂದಿಸಿ ಇಂದು ಗ್ರಾಮಕ್ಕೆ ಬೇಟಿ ನೀಡಿ ರಾಜಕಾಲುವೆ ಒತ್ತುವರಿ ತೆರುವುಗೊಳಿಸದಕ್ಕೆ ಗ್ರಾಮಸ್ಥರ ಪರವಾಗಿ ಧನ್ಯವಾದಗಳು ತಿಳಿಸಿದರು.

ಗ್ರಾಮದ ಯುವ ಮುಖಂಡ ಚಂದ್ರಕಾಂತ್ ಮಾತನಾಡಿ. ಗ್ರಾಮದಲ್ಲಿ ಕೆಲವರು ರೈತರು ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದು ಮತ್ತು ರೈತರು ತಮ್ಮ ತೋಟಗಳಿಗೆ ತೆರಳಲು ದಾರಿ ಇಲ್ಲದೆ ತೊಂದರೆಯಾಗುತ್ತಿದ್ದು ಶಾಸಕಿ ರೂಪಕಲಾ ರವರು ನಮ್ಮ  ಸಮಸ್ಯೆಯನ್ನು ಅರಿತು ಕೊಂಡು ಗ್ರಾಮಕ್ಕೆ ಭೇಟಿ ನೀಡಿ ರಾಜ ಕಾಲುವೆ ಒತ್ತುವರಿ ತೆರವುಗೊಳಿಸಿ ಮತ್ತು ರೈತರಿಗೆ ದಾರಿ ಮಾಡಿಕೊಡುವುದಾಗಿ ಭರವಸೆ ನೀಡಿರುತ್ತಾರೆ ಅವರಿಗೆ ಧನ್ಯವಾದಗಳು ಸಲ್ಲಿಸುತ್ತೇನೆ ಎಂದು ತಿಳಿಸಿದರು.

 ರೈತರಿಂದ ಒಪ್ಪಿಗೆ ಪತ್ರ: ರಾಜ ಕಾಲುವೆಯನ್ನು ಒತ್ತುವರಿ ಮಾಡಿಕೊಂಡಿರುವ ಕೆಲವರು ರೈತರು ಸ್ವ ಇಚ್ಛೆಯಿಂದ ತಾವೇ ಒಪ್ಪಿಕೊಂಡು ಒಪ್ಪಿಗೆ ಪತ್ರ ಬರೆಸಿಕೊಂಡು ರಾಜಕಾಲುವೆ ಒತ್ತುವರಿ ತೆರುವುಗೊಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ರೈತರ ತೋಟಗಳಿಗೆ ಮತ್ತು ಗ್ರಾಮದ ಸ್ಮಶಾನಕ್ಕೆ ರಸ್ತೆ ಮಾಡಿಕೊಡುವುದಾಗಿ ಆಶ್ವಾಸನೆ :
 ಈ ದಿನ ಸದ್ಯಕ್ಕೆ ರಾಜ ಕಾಲುವೆ ಒತ್ತುವರಿ ತೆರವುಗೊಳಿಸುವ ಕಾರ್ಯ ನಡೆಯುತ್ತಿದ್ದು ಮತ್ತೊಂದು ದಿನ ಗ್ರಾಮಕ್ಕೆ ಭೇಟಿ ನೀಡಿ ರೈತರಿಗೆ ಅನುಕೂಲವಾಗುವಂತೆ ರಸ್ತೆ ಮಾಡಿಕೊಡುವುದಾಗಿ ಮತ್ತು ಗ್ರಾಮದಲ್ಲಿ ಸ್ಮಶಾನಕ್ಕೆ ಸೂಕ್ತ ರಸ್ತೆ ಮಾಡಿಕೊಡುವುದಾಗಿ ಶಾಸಕ ರೂಪಕಲಾ ರವರು ಗ್ರಾಮಸ್ತರಿಗೆ ಆಶ್ವಾಸನೆ ನೀಡಿದರು

 ಈ ಸಂದರ್ಭದಲ್ಲಿ ತಹಸೀಲ್ದಾರ್ ನಾಗವೇಣಿ. ತಾಲೂಕು ಪಂಚಾಯಿತಿ ಅಧಿಕಾರಿ ವೆಂಕಟೇಶಪ್ಪ. ಪಿ ಡಿ ಓ ಎಜಾಜ್. ಗ್ರಾಮ ಪಂಚಾಯತಿ ಅಧ್ಯಕ್ಷರಾದ ಭವಾನಿ ಜಯಪಾಲ್. ಗ್ರಾಪಂ ಸದಸ್ಯರಾದ ಸುಬ್ಬಯ್ಯ ನಾಯ್ಡು. ಮುರಳಿ. ಮುಖಂಡರಾದ ಎಂಬಿಎ ಕೃಷ್ಣಪ್ಪ.ಚಂದ್ರಕಾಂತ್ ಮತ್ತು ಎಲ್ಲಾ ಗ್ರಾಮಸ್ಥರು ಹಾಗೂ ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456