ಗಡಿನಾಡು ಕನ್ನಡ ಹೋರಾಟಗಾರ ಬಾ.ಹಾ. ಶೇಖರಪ್ಪಗೆ  ಕರ್ನಾಟಕ ರಾಜ್ಯ ರತ್ನ ಪ್ರಶಸ್ತಿ ಪ್ರಧಾನ

Jun 9, 2025 - 15:25
 0  4
ಗಡಿನಾಡು ಕನ್ನಡ ಹೋರಾಟಗಾರ ಬಾ.ಹಾ. ಶೇಖರಪ್ಪಗೆ  ಕರ್ನಾಟಕ ರಾಜ್ಯ ರತ್ನ ಪ್ರಶಸ್ತಿ ಪ್ರಧಾನ

ಕೆಜಿಎಫ್,ಜೂ.೯: ಗಡಿನಾಡು ಕನ್ನಡ ಚಳುವಳಿ ಹೋರಾಟಗಾರ, ಕೋಲಾರ ಜಿಲ್ಲೆಯ ಕನ್ನಡ ಶಕ್ತಿ ಕೇಂದ್ರದ ಅಧ್ಯಕ್ಷ ಬಾ.ಹಾ.ಶೇಖರಪ್ಪ ಅವರಿಗೆ ಬೆಂಗಳೂರಿನ ಆತ್ಮಶ್ರೀ ಕನ್ನಡ ಪ್ರತಿಷ್ಠಾನದ ಪ್ರತಿಷ್ಠಿತ ಕರ್ನಾಟಕ ರಾಜ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
 
ಬೆಂಗಳೂರು ಕನ್ನಡ ಭವನದಲ್ಲಿ ಆತ್ಮಶ್ರೀ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ಡಾ|| ಗುಣವಂತ ಮಂಜು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಡಾ|| ಎನ್. ಸಂತೋಷ್ ಹೆಗ್ಡೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಪ್ರಶಸ್ತಿ ಪ್ರಧಾನ ಮಾಡಿದರು.
 
ಗಡಿನಾಡು ಕೆಜಿಎಫ್‌ನಲ್ಲಿ ಕನ್ನಡದ ಅಭಿವೃದ್ದಿಗೆ ಬಾ.ಹಾ.ಶೇಖರಪ್ಪ ಅವರು ಸುಮಾರು ಐದು ದಶಕಗಳ ಕಾಲ ಸಲ್ಲಿಸಿರುವ ಕನ್ನಡದ ಸೇವೆಯನ್ನು ಗುರುತಿಸಿ ಬೆಂಗಳೂರಿನ ಆತ್ಮಶ್ರೀ ಕನ್ನಡ ಪ್ರತಿಷ್ಠಾನವು ಕರ್ನಾಟಕ ರಾಜ್ಯ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿ, ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮತ್ತು ತೋಟಗಾರಿಕೆ ಮಾರಾಟ ಮಹಾಮಂಡಳಿ ಅಧ್ಯಕ್ಷ ಡಾ|| ಬಿ.ಡಿ. ಭೂಕಾಂತ, ಆತ್ಮಶ್ರೀ ಕನ್ನಡ ಪ್ರತಿಷ್ಠಾನ ಬಳಗದ ವರಲಕ್ಷ್ಮೀ, ಶಶಿಧರ ಹಿರೇಮಠ, ಚೈತ್ರ ರಮೇಶ್, ಯಶಸ್, ಭಾರತಿ, ಮಹೇಶ್ ಸಾಗರ್ ಮತ್ತಿತರರು ಉಪಸ್ಥಿತರಿದ್ದರು.

ಬೆಂಗಳೂರು ದೂರದರ್ಶನದ ನಿರೂಪಕಿ ಸವಿಪ್ರಕಾಶ್ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

ಕರ್ನಾಟಕ ರಾಜ್ಯ ರತ್ನ ಪ್ರಶಸ್ತಿ ಪಡೆದಂತಹ ಬಾ.ಹಾ.ಶೇಖರಪ್ಪ ಅವರನ್ನು ಗಡಿನಾಡು ಕೆಜಿಎಫ್‌ನ ಕನ್ನಡ ಸಂಘ, ಬಸವ ಸಮಿತಿ, ಕಸಾಪ, ಬೆಮೆಲ್ ಕನ್ನಡ ಮಿತ್ರರು ಮೊದಲಾದ ಸಂಘ ಸಂಸ್ಥೆಗಳವರು ಅಭಿನಂದಿಸಿದ್ದಾರೆ.

ಚಿತ್ರಶೀರ್ಷಿಕೆ: ೦೯ಕೆಜಿಎಫ್೦೧: ಗಡಿನಾಡು ಕನ್ನಡ ಚಳುವಳಿ ಹೋರಾಟಗಾರರು ಬಾ.ಹಾ.ಶೇಖರಪ್ಪ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿದ ಚಿತ್ರದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಡಾ|| ಎನ್. ಸಂತೋಷ್ ಹೆಗ್ಡೆ ಮತ್ತಿತರರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456