ಟಿಟಿ ವಾಹನ ಭೀಕರ ಅಪಘಾತ-ದುರಂತದಲ್ಲಿ ಬಾಗೇಪಲ್ಲಿ ಮೂಲದ ಮೂವರು ಸಾವು ಇಬ್ಬರಿಗೆ ಸ್ಥಿತಿ ಗಂಭೀರ
ಬಾಗೇಪಲ್ಲಿ: ನೆರೆಯ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆ ತಂಬಾಳಪಳ್ಳಿ ತಾಲೂಕು ಕುರುಬಲಕುಂಟೆ ಕ್ರಾಸ್ ಬಳಿ ಟೆಂಪೋ ಟ್ರಾವೆಲರ್ ವಾಹಣಕ್ಕೆ ಅಪರಿಚಿತ ಲಾರಿ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ನಡೆದಿದ್ದು ಬಾಗೇಪಲ್ಲಿ ತಾಲೂಕಿಗೆ ಸೇರಿದ ಸೇರಿದ ಮೂವರು ಸ್ಥಳದಲ್ಲೇ ಮೃತಪಟ್ಟು 9 ಮಂದಿಗೆ ತೀವ್ರವಾಗಿ ಗಾಯಗೊಂಡಿರುವ ಘಟನೆ ಅಮಾನವೀಯ ಘಟನೆ ಸೋಮುವಾರ ಬೆಳಗಿನ ಜಾವಾ ನಡೆದಿದೆ.
ಮೂರು ದಿನಗಳ ಹಿಂದೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗಿ ಹಿಂದಿರುಗಿ ಬರುವಾಗ ನೆರೆಯ ಆಂಧ್ರಪ್ರದೇಶದ ಕುರುಬಲಕುಂಟೆ ಕ್ರಾಸ್ ಬಳಿ ಟೆಂಪೋ ಟ್ರಾವೆಲರ್ ಗೆ ಅಪರಿಚಿತವಾಹನ ಡಿಕ್ಕಿ ಹೊಡೆದ ಪರಿಣಾಮ ಬಾಗೇಪಲ್ಲಿ ಮೂಲದ ಮೇಘರ್ಷ 17, ಚರಣ್ 17,ಶ್ರಾವಣಿ 28 ಸೇರಿದಂತೆ ಒಟ್ಟು ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಬಾಗೇಪಲ್ಲಿ ತಾಲ್ಲೂಕಿನ ಕಸಬಾ ಹೋಬಳಿಯ ಹೊಸುಡ್ಯ ಶ್ರೀನಿವಾಸಪುರ (ಸಾಕೆವಾಡ್ಲಪಲ್ಲಿ) ಗ್ರಾಮದ ಮೂರು ಕುಟುಂಬಗಳು ತಿರುಪತಿಗೆ ಹೋಗಿ ದರ್ಶನ ಮುಗಿಸಿಕೊಂಡು ಬರುವಾಗ ಬೆಳಗಿನ ಜಾವಾ 5 ಗಂಟೆಗೆ ಈ ಘೋರ ದುರಂತ ನಡೆದಿದೆ,ಅಪರಿಚಿತ ಲಾರಿ ಬಾರಿ ಗಾತ್ರದವಾಹನ ಡಿಕ್ಕಿ ಹೊಡೆದ ರಭಸಕ್ಕೆ ಟಿಟಿ ಟ್ರಾವೆಲರ್ ನುಜ್ಜುಗುಜ್ಜಾಗಿದೆ ಗಾಯಾಳುಗಳನ್ನು ಮದನಪಲ್ಲಿ ಜಿಲ್ಲಾ ಆಸ್ಪತ್ರೆಗೆ ಹಾಗೂ ಬೆಂಗಳೂರಿನ ವಿಕ್ಟೊರಿಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಟೆಂಪೋ ಟ್ರಾವೆಲರ್ ಗೆ ಡಿಕ್ಕಿ ಹೊಡೆದ ಲಾರಿ ಚಾಲಕ ವಾಹನ ಸಮೇತ ಪರಾರಿಯಾಗಿದ್ದು ಅಪಘಾತ ಸ್ಥಳಕ್ಕೆ ಆಗಮಿಸಿದ ಮದನಪಲ್ಲಿ ಪೊಲೀಸರು ಸ್ಥಳ ಪರಿಶೀಲನೆ ಮಾಡಿ ಪ್ರಕರಣವನ್ನು ದಾಖಲಿಸಿಕೊಂಡು ಅಪಘಾತ ಸಂಭವಿಸಿ ಬಾರಿ ಅನಾಹುತಕ್ಕೆ ಕಾರಣವಾದ ಚಾಲಕ ಮತ್ತು ವಾಹನವನ್ನ ಪತ್ತೆ ಹಚ್ಚುವುದಾಗಿ ಪೊಲೀಸರು ತಿಳಿಸಿದ್ದಾರೆ.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
