ನಮ್ಮ ಜೆಡಿಯು ಪಕ್ಷದ ಗೆಲುವು ಖಚಿತ-ರಾಜ್ಯಾಧ್ಯಕ್ಷರಾದ ಮಹಿಮಾ ಪಾಟೀಲ್

Jun 2, 2025 - 17:21
 0  5
ನಮ್ಮ ಜೆಡಿಯು ಪಕ್ಷದ ಗೆಲುವು ಖಚಿತ-ರಾಜ್ಯಾಧ್ಯಕ್ಷರಾದ ಮಹಿಮಾ ಪಾಟೀಲ್

ಬಾಗೇಪಲ್ಲಿ: ಮುಂದಿನ ದಿನಗಳಲ್ಲಿ ಸಂಯುಕ್ತ ಜನತಾದಳ ಪ್ರಜಾಸತ್ತಾತ್ಮಕ ಆಡಳಿತ ನೀಡಲು ನಿಶ್ಚಯಿಸಿದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಯುವಕರಿಗೆ ಮೊದಲ ಆದ್ಯತೆ ನೀಡಲಾಗುವುದು ಆ ಹಿನ್ನೆಲೆಯಲ್ಲಿ ಆಜ್ಞೆಯ ಪದವೀಧರ ಕ್ಷೇತ್ರದ 2026 ನಡೆಯುವ ಚುನಾವಣೆಯಲ್ಲಿ ನಮ್ಮ ಅಧಿಕೃತ ಅಭ್ಯರ್ಥಿಯಾಗಿ ಡಾಕ್ಟರ್ ನಾಗರಾಜ್ ಕೆ. ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಜಿ ಶಾಸಕರು ಜೆಡಿಎಸ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಮಹಿಮಾ ಪಾಟೀಲ್ ತಿಳಿಸಿದರು.

ಪಟ್ಟಣದ ಕಾರ್ಯನಿರತ ಪತ್ರಕರ್ತ ಭವನದಲ್ಲಿ ಆಯೋಜಿಸಲಾಗಿದ್ದ ಘೋಷ್ಠಿಯಲ್ಲಿ ಮಾತನಾಡಿ ಅವರು ಸಂಯುಕ್ತ ಜನತಾದಳ ಕರ್ನಾಟಕ ಜೆ.ಡಿ.ಯು. ರಾಜ್ಯದಲ್ಲಿ ಸಂಘಟನೆ ಮಾಡಲು ಮುಂದಾಗಿದೆ ಈಗಿನ ಸರ್ಕಾರಗಳು ದಾರಿ ತಪ್ಪಿವೆ ಭ್ರಷ್ಟಾಚಾರ ತುಂಬಿತುಳುಕುತ್ತಿದೆ ಮತಕ್ಕೆ ಉಚಿತವಾಗಿ ಕೊಡುವ ಬದಲು ಅಭಿವೃದ್ಧಿಗಾಗಿ ಕೆಲಸ ಮಾಡಿದ್ದರೆ ಚೆನ್ನಾಗಿರುತ್ತೆ ಆದರೆ ಈಗಿನ ಸರ್ಕಾರಗಳು ಉಚಿತ ಕೊಡುವ ಇದರಲ್ಲಿ ಅಭಿವೃದ್ಧಿಯನ್ನು ಮರೆತಿವೆ ಮುಖ್ಯವಾಗಿ ಭ್ರಷ್ಟಾಚಾರ ರಹಿತ ರಾಜಕಾರಣ ಮಾಡಲು ನಮ್ಮ ಪಕ್ಷ ಸಂಘಟಿತವಾಗಿದೆ ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ನಮ್ಮ ಪಕ್ಷ ಕೆಲಸ ಮಾಡುತ್ತಿದೆ ನಾಗರಾಜ್ ರವರು ಯುವ ಉತ್ಸಾಹಿ ನಾಯಕರಾಗಿದ್ದು ಅವರು ಈಗಾಗಲೇ ಅನೇಕ ರೀತಿಯಲ್ಲಿ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದು ಮುಂದಿನ ದಿನಗಳಲ್ಲಿ ಕೋಲಾರ ಚಿಕ್ಕಬಳ್ಳಾಪುರ ತುಮಕೂರು ಚಿತ್ರದುರ್ಗ ದಾವಣಗೆರೆ ಈ ಜಿಲ್ಲೆಗಳಿಂದ ಆಜ್ಞೆಯ ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗಿ ಕಣದಲ್ಲಿರುತ್ತಾರೆ ನಾವು ಹಣಕೊಟ್ಟು ಗೆಲ್ಲಬೇಕು ಎಂದರೆ ಮತ್ತೆ ಹಣ ಮಾಡುತ್ತಾರೆ ಆ ಹಿನ್ನೆಲೆಯಲ್ಲಿ ಯಾವುದೇ ಹಂಸಿಗಳನ್ನು ಒಡೆದೆ ಎಲ್ಲಾ ಪಕ್ಷಗಳ ಸಹಕಾರ ಸಲಹೆಗಳನ್ನು ಪಡೆದು ಮುಂಬರುವ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ನಮ್ಮ ಮುಂದಿನ ಯೋಜನೆಗಳು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಇರುವಂತಹ ಕಾಲಿ ಹುದ್ದೆಗಳಿಗೆ ನೇಮಕಾತಿ ಮಾಡಬೇಕು ಎಂ ಪಿ ಎಸ್ ನಿಂದ ಓ ಪಿ ಎಸ್ ಪದ್ದತಿ ಜಾರಿ ಮಾಡಬೇಕು ಅತತಿ ಉಪನ್ಯಾಸಕ ಮತ್ತು ಶಿಕ್ಷಕರಿಗೆ ಸೇವಾ ಭದ್ರತೆ ನೀಡಬೇಕು ಎಲ್ಲರಿಗೂ ಜ್ಯೋತಿ ಸಂಜೀವಿನಿ ಯೋಜನೆ ಜಾರಿಗೆ ತರಬೇಕು ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಉಚಿತ ಐಎಎಸ್ ಮತ್ತು ಕೆಎಎಸ್ ಕೋಚಿಂಗ್ ಕೇಂದ್ರ ಗಳನ್ನು ಸ್ಥಾಪನೆ ಮಾಡಬೇಕು ಗ್ರಾಮೀಣ ಭಾಗದ ಪದವೀಧರಿಗೆ ಸ್ವಯಂ ಉದ್ಯೋಗ್ಯಕ್ಕೆ ಆದ್ಯತೆ ಮತ್ತು ಪ್ರೋತ್ಸಾಹ ನೀಡುವುದೇ ನಮ್ಮ ಪಕ್ಷದ ಧ್ಯೇಯ ಎಂದರು.

 ಯುವ ಜನತಾದಳ ಸಂಯುಕ್ತ ಕರ್ನಾಟಕ ರಾಜ್ಯಾಧ್ಯಕ್ಷರು ಡಾ. ನಾಗರಾಜ್ ಕೆ ಅವರು ಮಾತನಾಡಿ ಈ ಹಿಂದೆ ನಾನು ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೆ ಆಗ ಕಾಂಗ್ರೆಸ್ ಗಿಂತಲೂ ಐದು ಪಟ್ಟು ಹೆಚ್ಚಿನ ಮತಗಳನ್ನು ಪಡೆದು ಸ್ವಲ್ಪ ಅಂತರದಲ್ಲಿ ಸೋಲನ್ನು ಅನುಭವಿಸಿದೆ ಈಗ ಆಜ್ಞೆಯ ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗಿ ತಮ್ಮ ಮುಂದೆ ಬರುತ್ತಿದ್ದೇನೆ ಮುಂದಿನ ದಿನಗಳಲ್ಲಿ ಪದವೀಧರು ನವೆಂಬರ್ ತಿಂಗಳಲ್ಲಿ ಎನ್ರೋಲ್ಮೆಂಟ್  ಮಾಡಿಸಿ ನಾನು ವಿದ್ಯಾರ್ಥಿ ದೆಸೆಯಿಂದಲೇ  ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದೆ ಸಮಾಜಕ್ಕೆ ನನ್ನಿಂದ ಆದ ಒಂದು ಸೇವೆಯನ್ನು ಮಾಡುವ ಮನೋಭಾವದಿಂದ ಇಂದು ರಾಜಕೀಯಕ್ಕೆ ಬಂದಿದ್ದೇನೆ ಮುಂದಿನ ದಿನಗಳಲ್ಲಿ ಪಕ್ಷವನ್ನ ಸಂಘಟಿಸುವಲ್ಲಿ ಸಕ್ರಿಯವಾಗಿ ನಮ್ಮೆಲ್ಲ ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ, ಪ್ರತಿ ಜಿಲ್ಲಾ ಮಟ್ಟದಲ್ಲಿ ಹೋಬಳಿ ಮಟ್ಟದಲ್ಲಿ ಜನಸಂಪರ್ಕ ಕಾರ್ಯಕ್ರಮಗಳನ್ನು ಮಾಡಿ ಉತ್ತಮ ರಾಜ್ಯ ನಿರ್ಮಾಣಕ್ಕೆ ನಮ್ಮೊಂದಿಗೆ ಎಲ್ಲರೂ ಸಹಕರಿಸಬೇಕು ಎಂದು ಈ ಮೂಲಕ ಮನವಿ ಮಾಡುತ್ತಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಮಹಿಳಾ ರಾಜ್ಯ ಅಧ್ಯಕ್ಷ ಕಲಾವತಿ ಸೋಮಶೇಖರ್ ನಂಜುಂಡಪ್ಪ ಶಿವಣ್ಣ ಬೈಯಪ್ಪ ಚಂದ್ರಶೇಖರ್ರಾವ್ ಆರ್ ಎಸ್ ಪ್ರಭು ನಾರಾಯಣಸ್ವಾಮಿ ಗೌಡ ಮಾಲೂರು ಅಂಬರೀಶ ಮಲ್ಲಮ್ಮ ಲಕ್ಷ್ಮಿ ಬಾಬು ಚಂದ್ರಶೇಖರ್ ಇನ್ನು ಮುಂತಾದವರು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456