ನಿಜವಾಗಿ ಹಾಲು ಕರೆದು ಡೈರಿಗೆ ಹಾಕುವಂತವ ರೈತರಿಗೆ ಕೋಮುಲ್ ಅಧ್ಯಕ್ಷರಾಗಲು ಅವಕಾಶ ಕೊಡಿ
ಮಾಲೂರು: ನಿಜವಾಗಿ ಹಾಲು ಕರೆದು ಡೈರಿಗೆ ಹಾಕುವಂತವ ರೈತರಿಗೆ ಕೋಮುಲ್ ಅಧ್ಯಕ್ಷರಾಗಲು ಅವಕಾಶ ಕೊಡಿ, ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಈಗ ಶಾಸಕರು ಎಲ್ಲಾ ಅವಕಾಶ ನಿಮಗೆ ಬೇಕಾ? ಪಕ್ಷದ ಕಾರ್ಯ ಕರ್ತರಿಗೆ ಅವಕಾಶ ನೀಡಿ ಎಂದು ಸ್ವಾಭಿಮಾನಿ ಜನತಾ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಹೂಡಿ ವಿಜಯ್ ಕುಮಾರ್ ಅವರು ಶಾಸಕರಿಗೆ ಟಾಂಗ್ ಕೊಟ್ಟರು.
ತಾಲೂಕಿನ ಕುಡಿಯನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಡಿಯನೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಸ್ವಾಭಿಮಾನಿ ಜನತಾ ಪಕ್ಷ ಹಾಗೂ ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನೆ ಮಾಡಿ ಮಾತನಾಡಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವಾಭಿಮಾನಿ ಜನತಾ ಪಕ್ಷ ಪಕ್ಷದಿಂದ ಸ್ವತಂತ್ರವಾಗಿ ಮತ ಕೇಳಿದ ನನಗೆ ತಾಲೂಕಿನ ಜನತೆ ಸುಮಾರು 50 ಸಾವಿರ ಮತಗಳನ್ನು ನೀಡಿ ಬೆಂಬಲಿಸಿದ್ದಾರೆ. ಆದರೆ ಇಲ್ಲಿನ ಶಾಸಕರು ಜನಾಂಗಗಳ ನಡುವೆ ತಂದಿಟ್ಟು ಅದು ಜನಾಂಗವನ್ನು ಯಾಮಾರಿಸಿ ಮತ ಪಡೆದಿದ್ದಾರೆ ಎಂದು ಪ್ರಚಾರ ಮಾಡುತ್ತಿದ್ದು. ಮಾಲೂರು ತಾಲ್ಲೂಕಿನಲ್ಲಿ ಸುಮಾರು 18 ಸಾವಿರ ಜನ ಮಾತ್ರ ನಮ್ಮ ಸಮುದಾಯದವರಿದ್ದಾರೆ. ತಾಲೂಕಿನ ಎಲ್ಲಾ ಸಮುದಾಯದ ಜನತೆ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಕಳೆದ ಚುನಾವಣೆಯಲ್ಲಿ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದುಕೊಂಡಿದ್ದಕ್ಕೆ ಇವರು ಶಾಸಕರಾಗಲು ಕಾರಣವಾಯಿತು. ಆದರೆ ಶಾಸಕರಾದ ಮೇಲೆ ತಾಲ್ಲೂಕಿನಲ್ಲಿ ದ್ವೇಷದ ರಾಜಕಾರಣ ಮಾಡುತ್ತಾ ವಿರೋಧ ಪಕ್ಷದವರಿಗೆ ತೊಂದರೆ ನೀಡುತ್ತಿದ್ದಾರೆ. ಕೋಮುಲ್ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸದೆ. ಹಾಲು, ತುಪ್ಪ, ಮೊಸರು, ಕಲ್ಲು, ಜಲ್ಲಿ ಎಲ್ಲಾ ಇವರೇ ತಿನ್ನುತ್ತಿದ್ದಾರೆ. ಎಂದು ಗುಡುಗಿದರು.ಮಾಲೂರಿನ ಇತಿಹಾಸ ಎನ್ನುತ್ತಾರೆ ನೀವು ಎಂತಾ ಭ್ರಷ್ಟರು ಎಂದು ತಾಲೂಕಿನ ಎಲ್ಲಾ ಜನತೆಗೆ ನಿಮ್ಮ ಇತಿಹಾಸ ಗೊತ್ತಿದೆ. ಪ್ರಾಧಿಕಾರಕ್ಕೆ ರೈತರ ಜಮೀನನ್ನು ಸೆರಿಸಿಕೊಂಡು 15 ರಿಂದ 20 ಲಕ್ಷದವರೆಗೂ ರೈತರಿಗೆ ಮೋಸ ಮಾಡುತ್ತಿದ್ದಾರೆ. ರೈತರಿಗೆ ಯಾವ ಅನುಕೂಲ ಇಲ್ಲ. ಮಾಲೂರಿನ ಗೋಮಾಳ ಜಾಗವನ್ನು ಒಂದು ಬಿಡುವುದಿಲ್ಲ. ಇವರು ತೋರ್ನಹಳ್ಳಿ ಸರ್ಕಾರಿ ಗೋಮಾಳ ಜಮೀನನ್ನು ಖಾಸಗಿ ಕಂಪನಿಯವರಿಗೆ ಮಾರಿಕೊಂಡಿರುವುದು ತಾಲೂಕಿನ ಎಲ್ಲಾ ಜನತೆಗೆ ಗೊತ್ತು. ಹಾಲು ಡೈರಿಯಲ್ಲಿ ನೀವು ಮಾಡಿರುವ ಭ್ರಷ್ಟಾಚಾರದ ನಿಮ್ಮ ಪಕ್ಷದ ಶಾಸಕರಾದ ಎಸ್ಎನ್ ನಾರಾಯಣಸ್ವಾಮಿ ಅವರು ಆರೋಪ ಮಾಡಿರುವುದು ಗೊತ್ತಿಲ್ಲವೇ.ಇದಕ್ಕೆ ಉತ್ತರ ಕೊಡಿ ಜನರನ್ನು ಯಾಮಾರಿಸಬೇಡಿ. ಎಂದರು. ಮಾಲೂರಿನ ಶಾಸಕರಿಗೆ ಬೇರೆ ಏನು ಕೆಲಸ ಇಲ್ಲ ಟೀಕೆ ಮಾಡುವುದು ಬಿಟ್ಟರೆ ಅಭಿವೃದ್ಧಿ ಬಗ್ಗೆ ಮಾತನಾಡಲು ಅವರು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ , ಪ್ರತಿದಿನ ನಮ್ಮದೇ ಜಪ ಆಗಿದೆ ಹೊರಗಿನವರು ಹೊರಗಿನವರು ಎಂದು ಹಾಡುತ್ತಾರೆ . ರಾತ್ರಿ ನಿದ್ದೆ ಮಾಡುತ್ತಾರೋ ಇಲ್ಲವೋ , ಗೊತ್ತಿಲ್ಲ ವಯಸ್ಸಾಗಿದೆ ಬಿಪಿ ಹೆಚ್ಚಾಗಿರಬಹುದು ಆರೋಗ್ಯದ ಕಡೆ ಗಮನ ಕೊಟ್ಟು ಆರೋಗ್ಯ ಸರಿಪಡಿಸಿಕೊಳ್ಳಲಿ, ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ 3000 ಕೋಟಿ 4000 ಕೋಟೆ ಎಂದು , ಎಲ್ಲಿ 3000 ಕೋಟಿ? ಅಭಿವೃದ್ಧಿ ಆಗಿದೆ ಕೇವಲ ಭಾಷಣಕ್ಕೆ ಸೀಮಿತವಾಗಿದೆ. ಎಂದು ಸ್ವಾಭಿಮಾನಿ ಜನತಾ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾದ ಹೂಡಿ ವಿಜಯ್ ಕುಮಾರ್ ರವರು ಶಾಸಕರಿಗೆ ಟಾಂಗ್ ನೀಡಿದರು ಇನ್ನೂ ಸ್ವಾಭಿಮಾನಿ ಜನತಾ ಪಕ್ಷ ಹಾಗೂ ಸಪ್ತಗಿರಿ ಆಸ್ಪತ್ರೆಯ ವತಿಯಿಂದ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡುತ್ತಿದ್ದು ಈಗಾಗಲೇ ಮಾಲೂರು ಪಟ್ಟಣ ಸೇರಿದಂತೆ ಚಿಕ್ಕತಿರುಪತಿ, ಮಾಸ್ತಿ, ಲಕ್ಕೂರು ಗ್ರಾಮ ಪಂಚಾಯಿತಿಗಳಲ್ಲಿ ಯಶಸ್ವಿಯಾಗಿ ಶಿಬಿರಗಳನ್ನು ಆಯೋಜಿಸಿದ್ದು ಇಂದು ನಾಡ ಪ್ರಭು ಕೆಂಪೇಗೌಡ ರವರ ಜನ್ಮ ದಿನದ ಪ್ರಯುಕ್ತ ಅವರ ನೆನಪಿನಾರ್ಥವಾಗಿ ಕುಡಿಯನೂರು ಗ್ರಾಮ ಪಂಚಾಯತಿಯ ಕುಡಿಯನೂರು ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಆಯೋಜಿಸಿದ್ದು ಎಲ್ಲರೂ ಈ ಸುವರ್ಣ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಸ್ವಾಭಿಮಾನಿ ಜನತಾ ಪಕ್ಷದ ಶ್ವೇತಾ ಹೂಡಿ ವಿಜಯ್ ಕುಮಾರ್ ,ತಾಲೂಕು ಅಧ್ಯಕ್ಷ ಆರ್ ಪ್ರಭಾಕರ್ ಬಿ ಆರ್ ವೆಂಕಟೇಶ್, ಅಮರಾವತಿ, ನಾಗರಾಜ್, ಕೆ ಸಿ ಕೃಷ್ಣಪ್ಪ, ಗೋಪಾಲ್ ಗೌಡ, ವೆಂಕಟೇಶ್, ಮೋಹನ್,ಮುನಿಯಪ್ಪ, ನಾರಾಯಣ ಸ್ವಾಮಿ, ಉಮಾಶಂಕರ್, ಮುನಿಯಪ್ಪ ಇನ್ನಿತರ ಇದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
