ನಿರಿನಲ್ಲಿ ಕಾಲು ಜಾರಿ ಬಿದ್ದ ನಾಯಿಯನ್ನು ಜೀವಂತವಾಗಿ ಅಗ್ನಿಶಾಮಕ ಇಲಾಖೆಯ ತಂಡ ರಕ್ಷಣೆ
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಅಂದರ್ಲಹಳ್ಳಿ ಗ್ರಾಮದಲ್ಲಿ ನರಸಿಂಹ ಗೌಡ ಎಂಬುವವರ ಹೊಲದಲ್ಲಿ ಅಂದಾಜು 30x30 ಅಡಿ ವಿಸ್ತಾರವಾದ 80 ಅಡಿ ಆಳದ ತೇರೆದ ನೀರಿಲ್ಲದ ಬಾವಿಯಲ್ಲಿ ಆಕಸ್ಮಿಕವಾಗಿ ನಾಯಿಯು ಕಾಲು ಜಾರಿ ಬಿದ್ದಿದ್ದು, ಸದರಿ ಸ್ಥಳೀಯ ನಿವಾಸಿಗಳು ಘಟನೆಯ ವಿಷಯವನ್ನು ಚಿಕ್ಕಬಳ್ಳಾಪುರ ಅಗ್ನಿಶಾಮಕ ಠಾಣೆಯ ನಿಯಂತ್ರಣ ಕೊಠಡಿಗೆ ದೂರವಾಣಿಗೆ ಕರೆ ಮಾಡಿ ತಿಳಿಸಿದರು.
ಕರೆ ಬಂದ ತಕ್ಷಣ ಜಲವಾಹನದೊಂದಿಗೆ ಅಗ್ನಿಶಾಮಕ ತಂಡ ಸ್ಥಳಕ್ಕೆ ದೌಡಾಯಿಸಿ ಕಾರ್ಯ ಪ್ರವೃತ್ತರಾಗಿ ಸುಮಾರು 80 ಅಡಿ ಆಳದ ಬಾವಿಯಲ್ಲಿ ಹಗ್ಗಗಳ ಸಹಾಯದಿಂದ ಕೆಳಗಿಳಿದು ಸುಮಾರು 01:30 ಒಂಧು ಘಂಟೆ ಮುವಟ್ಟುತ್ತೂ ನಿಮಿಷಗಳ ಕಾಲ ಶ್ರಮ ವಹಿಸಿ ಸಿಬ್ಬಂದಿಯವರುಗಳು ಜಾಳ್ಳಿಗೆ ಭಲೇ ಹಗ್ಗಗಳ ಸಹಾಯದಿಂದ ಪ್ರಾಣ ರಕ್ಷಣೆಗಾಗಿ ಕೂಗುತ್ತಿದ್ದ ನಾಯಿಯನ್ನು ಜೀವಂತವಾಗಿ ಅಗ್ನಿಶಾಮಕ ಇಲಾಖೆಯ ತಂಡ ರಕ್ಷಣೆ ಮಾಡಿರುತ್ತಾರೆ.
ಈ ಸಮಯ ಪ್ರಜ್ಞೆ ಕಾರ್ಯವನ್ನು ವೀಕ್ಷಿಸಿದ ಅಂದರ್ಲಹಳ್ಳಿ ಗ್ರಾಮದ ಸ್ಥಳೀಯ ನಿವಾಸಿಗಳು ಅಗ್ನಿಶಾಮಕ ತಂಡದ ಕಾರ್ಯ ದಕ್ಷತೆಯನ್ನು ಮೆಚ್ಚಿ ಶ್ಲಾಘಿಸಿ ಹಾಗೂ ಹಸ್ತಲಾಘವ ಮಾಡಿ ನಾಯಿಯ ಪ್ರಾಣ ರಕ್ಷಣೆ ಮಾಡಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು.ಪ್ರಮುಖ ಅಗ್ನಿಶಾಮಕರವರಾದ ರವೀಂದ್ರ ಸಂಗಮರವರ ನೇತ್ರತ್ವದಲ್ಲಿ,ನಾಗಪ್ಪ ಶಿವಾಪುರ, ರಾಜು ಮುರಕುಟ್ಟಿ,ಹಾಗೂ ಗಣೇಶ್ ಬೀರ ಗೌಡ ಭಾಗವಹಿಸಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
